ಪಟ್ಟೆ ಶ್ರೀ ಕೃಷ್ಣ ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳು ರಾಜ್ಯಮಟ್ಟದ ವಾಲಿಬಾಲ್ ಪಂದ್ಯಾಟಕ್ಕೆ ಆಯ್ಕೆ

0

ಬಡಗನ್ನೂರು : ವಿವೇಕಾನಂದ ವಿದ್ಯಾಲಯ ನೆಹರು ನಗರದಲ್ಲಿ ಜು.16 ರಂದು ನಡೆದ ವಿದ್ಯಾ ಭಾರತೀಯ ಜಿಲ್ಲಾ ಮಟ್ಟದ  14ರ ವಯೋಮಾನದ ವಿದ್ಯಾಭಾರತಿ ವಾಲಿಬಾಲ್ ಪಂದ್ಯಾಟದಲ್ಲಿ ಪಟ್ಟೆ ಶ್ರೀ ಕೃಷ್ಣ ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದು ಬೀದರ್ ನಲ್ಲಿ ನಡೆಯಲಿರುವ ರಾಜ್ಯಮಟ್ಟದ ವಾಲಿಬಾಲ್ ಪಂದ್ಯಾಟಕ್ಕೆ ಆಯ್ಕೆಯಾಗಿದ್ದಾರೆ.

ಶ್ರೀ ಕೃಷ್ಣ ವಿದ್ಯಾಸಂಸ್ಥೆಗಳ ಎಂಟನೇ ತರಗತಿಯ ವಿದ್ಯಾರ್ಥಿಗಳಾದ ಅದ್ವಿತ್ ಶೆಟ್ಟಿ, ಪ್ರಖ್ಯಾತ್,ಆದಿ ಕೆ. ಎ, ಸೃಜನ್  ಹಾಗೂ 17ರ ವಯೋಮಾನದ ಪಂದ್ಯಾಟದಲ್ಲಿ 10ನೇ ತರಗತಿಯ ಸಾಥ್ವಿ ಇವರು ರಾಜ್ಯ ಮಟ್ಟದ ವಾಲಿಬಾಲ್ ಪಂದ್ಯಾಟಕ್ಕೆ ಆಯ್ಕೆಯಾಗಿರುತ್ತಾರೆ. 

LEAVE A REPLY

Please enter your comment!
Please enter your name here