ಸಂತ ಫಿಲೋಮಿನಾ ಕಾಲೇಜಿನ 1979ರ ಬಿ.ಕಾಂ ಬ್ಯಾಚ್ ವಿದ್ಯಾರ್ಥಿಗಳಿಂದ ದೇಣಿಗೆ

0

ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ 1979ರ ಬಿ.ಕಾಂ ಬ್ಯಾಚಿನ ವಿದ್ಯಾರ್ಥಿಗಳು ತಮ್ಮ ಕಾಲೇಜು ದಿನಗಳ ಸವಿನೆನಪಿನ ಕೊಡುಗೆಯಾಗಿ ಗುರುಪೂರ್ಣಿಮೆಯ ದಿನದಂದು ದೇಣಿಗೆ ನೀಡಿದರು.

ವಿದ್ಯಾರ್ಥಿಗಳು ತಮ್ಮ ಸಹಪಾಠಿಗಳಿಂದ ಸಂಗ್ರಹವಾದ ನಗದು ಹಣದ ಚೆಕ್ ಅನ್ನು ವಿದ್ಯಾರ್ಥಿಗಳ ಸದುದ್ದೇಶಕ್ಕಾಗಿ ಬಳಸಲ್ಪಡುವ ಮೂಲನಿಧಿಗೆ ಹಸ್ತಾಂತರಿಸಿದರು. ಸಹಪಾಠಿಗಳ ಪ್ರತಿನಿಧಿಗಳ ಮೂಲಕ ಚೆಕ್ ಅನ್ನು ಕಾಲೇಜಿನ ಪ್ರಾಂಶುಪಾಲರಿಗೆ ನೀಡಲಾಯಿತು.

ಸಹಪಾಠಿಗಳ ಪರವಾಗಿ ನವೀನ್ ಕುಮಾರ್ ಬಿ.ಎಸ್, ಗಿರಿಧರ್ ಅಂಬೆಕಲ್ಲು, ಚಂದ್ರಹಾಸ, ರಂಗನಾಥ್ ಕೊಂಡೆ, ಸುಧಾಕರ ಕೊಚ್ಚಿ, ಸಂಧ್ಯಾಕಿರಣ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here