







ಪುತ್ತೂರು: ತುರ್ತು ನಿರ್ವಹಣಾ ಕಾಮಗಾರಿ ನಿಮಿತ್ತ ಆಗಸ್ಟ್ 8 ರ ಶನಿವಾರ ಪುತ್ತೂರಿನ ಕೆಲವು ಪ್ರದೇಶಗಳಲ್ಲಿ ಬೆಳಗ್ಗೆ 10 ರಿಂದ ಮಧ್ಯಾಹ್ನ 2 ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.


110/33/11 ಕೆ.ವಿ ಪುತ್ತೂರು ವಿದ್ಯುತ್ ಕೇಂದ್ರದಿಂದ ಹೊರಡುವ ನಗರ ಫೀಡರ್ನಲ್ಲಿ ಕಾಮಗಾರಿ ನಡೆಯಲಿರುವುದರಿಂದ ಕಲ್ಲೇಗ, ನಗರ, ಬನ್ನೂರು, ಕೊಡಿಪ್ಪಾಡಿ ಮತ್ತು ಮಂಜಲ್ಪಡ್ಪು ಸುತ್ತಮುತ್ತ ವಿದ್ಯುತ್ ಸ್ಥಗಿತಗೊಳ್ಳಲಿದೆ ಎಂದು ಮೆಸ್ಕಾಂ ಪ್ರಕಟಿಸಿದೆ.













