






ಉಪ್ಪಿನಂಗಡಿ: ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘ (ರಿ) ಬೆಂಗಳೂರು ಇದರ ಪುತ್ತೂರು ತಾಲೂಕು ಘಟಕದ ೨೦೨೬-೨೭ನೇ ಸಾಲಿನ ಅಧ್ಯಕ್ಷರಾಗಿ ಉಪ್ಪಿನಂಗಡಿ ಪದವಿ ಪೂರ್ವ ಕಾಲೇಜಿನ ಪ್ರಭಾರ ಪ್ರಾಂಶುಪಾಲ ಇಬ್ರಾಹೀಂ ಎಂ. ಹಾಗೂ ಕಾರ್ಯದರ್ಶಿಯಾಗಿ ಬೆಟ್ಟಂಪಾಡಿ ಸರಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಕಮಲಾಕ್ಷ ಆನಡ್ಕ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.


ಕೋಶಾಧಿಕಾರಿಯಾಗಿ ಕೆಯ್ಯೂರು ಸರಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಇಸ್ಮಾಯಿಲ್ ಪಿ., ಉಪಾಧ್ಯಕ್ಷರಾಗಿ ಬಿಳಿಯೂರು ಕಟ್ಟೆ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ಶ್ರೀಮತಿ ಇಂದಿರಾ ಭಂಡಾರಿ ಕೆ.ಎಂ. ಕಾರ್ಯಾಧ್ಯಕ್ಷರಾಗಿ ಕಬಕ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಶ್ರೀನಿವಾಸ ಬಡೆಕ್ಕಿಲ್ಲಾಯ ಹಾಗೂ ಸಂಚಾಲಕರಾಗಿ ಉಪ್ಪಿನಂಗಡಿ ಸರಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ಶ್ರೀಮತಿ ಆಶಾ ಆರ್., ಸಂಘಟನಾ ಕಾರ್ಯದರ್ಶಿಯಾಗಿ ಕೊಂಬೆಟ್ಟು ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಪ್ರಕಾಶ ವಿ.ಕೆ., ಮುಕ್ರಂಪಾಡಿ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಅಶೋಕ್, ಕೋಶಾಧಿಕಾರಿಯಾಗಿ ಶ್ರೀ ಇಸ್ಮಾಯಿಲ್ ಪಿ.,ಉಪನ್ಯಾಸಕರು, ಸರಕಾರಿ ಪದವಿ ಪೂರ್ವಕಾಲೇಜು ಅವರನ್ನು ಆಯ್ಕೆ ಮಾಡಲಾಯಿತು.



ಕೊಂಬೆಟ್ಟುವಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಆಯ್ಕೆ ಪ್ರಕ್ರಿಯೆ ಸಂದರ್ಭ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷ ಹರಿಪ್ರಕಾಶ್ ಬಿ., ಕಾರ್ಯಾಧ್ಯಕ್ಷ ಚಂದ್ರನಾಥ ಎಂ., ಜಿಲ್ಲಾ ಸಲಹಾ ಸಮಿತಿ ಸದಸ್ಯ ವಿದ್ಯಾಧರ ರೈ ಹಾಗೂ ತಾಲೂಕಿನ ಉಪನ್ಯಾಸಕರು ಉಪಸ್ಥಿತರಿದ್ದರು.










