






ನಿಡ್ಪಳ್ಳಿ; ಪುತ್ತೂರು ತಾಲೂಕು ನಲಿಕೆಯವರ ಸಮಾಜ ಸೇವಾ ಸಂಘ, ಪುತ್ತೂರು ತಾಲೂಕು ಸಂಘ ಮತ್ತು ವಲಯ ಸಮಿತಿಗಳ ಒಕ್ಕೂಟಗಳ ಆಶ್ರಯದಲ್ಲಿ 2026-27 ನೇ ಸಾಲಿನ ವರ್ಷದ ಲೇಸ್ ಆಟಿದ ಕೂಟೊಡು ಕೆಸರ್ ದ ಗೊಬ್ಬುಲು ಕಾರ್ಯಕ್ರಮ ಆ.9 ರಂದು ಕುಕ್ಕುಪುಣಿ ಕೊರಗಜ್ಜ ಸಾನಿಧ್ಯದ ಎದುರಿನ ಗದ್ದೆಯಲ್ಲಿ ಜರಗಲಿದೆ.


ಸ್ವಜಾತಿ ಬಾಂಧವರಿಗೆ ವಿವಿಧ ಆಟೋಟ ಸ್ಪರ್ಧೆಗಳು ಬೆಳಿಗ್ಗೆ ಗಂಟೆ 8.00 ಕ್ಕೆ ಆರಂಭವಾಗಲಿದೆ.ಗಂಟೆ 10.00 ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದ್ದು ಪುತ್ತೂರು ನಲಿಕೆ ಸಮಾಜ ಸೇವಾ ಸಂಘದ ತಾಲೂಕು ಅಧ್ಯಕ್ಷ ಶ್ರೀಧರ್ ಪೆರ್ಲಂಪಾಡಿ ಅಧ್ಯಕ್ಷತೆ ವಹಿಸಲಿದ್ದು, ಶಾಸಕ ಅಶೋಕ್ ಕುಮಾರ್ ರೈ ಸಭಾ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಅಲ್ಲದೆ ಹಲವಾರು ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.ಸಂಜೆ ಗಂಟೆ 4.00 ಕ್ಕೆ ಸಮಾರೋಪ ಸಮಾರಂಭ ಹಲವು ಗಣ್ಯರ ಉಪಸ್ಥಿತಿಯಲ್ಲಿ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.













