






ಪುತ್ತೂರು: ತೆಂಕಿಲ ನಿವಾಸಿ ಕೆನರಾ ಬ್ಯಾಂಕ್ ನಿವೃತ್ತ ಉದ್ಯೋಗಿ ದಿ.ಕೇಶವ ನಾಯ್ಕ್ ತೆಂಕಿಲ(ಬುಳೇರಿಕಟ್ಟೆ ) ಅವರ ಶ್ರದ್ಧಾಂಜಲಿ ಸಭೆ ಆ.8ರಂದು ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು.


ಮೃತರ ಪುತ್ರ ಗಣೇಶ ನಾಯ್ಕ್ ಮಾತನಾಡಿ, ʼ ತಂದೆಯ ಶ್ರದ್ಧಾಂಜಲಿ ಸಭೆಗೆ ಆಗಮಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಬಳಿಕ ಮೃತರ ಆತ್ಮ ಸದ್ಗತಿಗಾಗಿ ಒಂದು ನಿಮಿಷದ ಮೌನ ಪ್ರಾರ್ಥನೆ ಸಲ್ಲಿಸಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.



ಈ ಸಂದರ್ಭದಲ್ಲಿ ಆನಂದ ಪಜೀರ್, ರವೀಂದ್ರನಾಥ ನಾಯ್ಕ್ ಪಡೀಲ್, ಪದ್ಮನಾಭ ನಾಯ್ಕ್ ಪಡೀಲ್, ಬಾಲಕೃಷ್ಣ ನಾಯ್ಕ್ ಉಪ್ಪಳಿಗೆ, ಜಯಪ್ರಕಾಶ್ ನಾಯ್ಕ್ ಮಂಗಳೂರು, ಶಿವಣ್ಣ ನಾಯ್ಕ್ ಆನೆಕಲ್ಲು, ಮೋಹನ ನಾಯ್ಕ್ ಬೆದ್ರಾಳ, ಜಯರಾಮ್ ಬುಳೇರಿಕಟ್ಟೆ ಆನಂದ ಹಾಸನ, ನಿತೀಶ್ ಪಡೀಲ್, ಶಾರದಾ ಕೇಶವ ಸಾಲ್ಮರ , ವಿಜಯಕುಮಾರ್ ಕೈಪಂಗಳ, ವಸಂತ ನಾಯ್ಕ್ ಬದಿಯಡ್ಕ, ನಾರಾಯಣ ನಾಯ್ಕ್ ಪಡೀಲ್, ಶೀನ ಪಡೀಲ್, ಶಕುಂತಲಾ ಪುರುಷರ ಕಟ್ಟೆ, ಶಿವಪ್ರಸಾದ್ ಮಂಗಳೂರು, ಬಾಲಕೃಷ್ಣ ಮಂಗಳೂರು ಸೇರಿದಂತೆ ಅನೇಕ ಗಣ್ಯರು ,ಬಂಧು ಮಿತ್ರರು ಉಪಸ್ಥಿತರಿದ್ದರು.
ಮೃತರ ಪತ್ನಿ ರಾಜಲಕ್ಷ್ಮೀ , ಪುತ್ರ ಗಣೇಶ, ಪುತ್ರಿಯರಾದ ಜಯಶ್ರೀ ಪ್ರಶಾಂತ್, ಪವಿತ್ರ ವಿನಯ್, ಸೊಸೆ ಧುನಿತ ಗಣೇಶ್, ಅಳಿಯಂದಿರಾದ ಪ್ರಶಾಂತ್ ಸಾಲ್ಮರ , ವಿನಯ್ಶಿವಮೊಗ್ಗ, ಮೊಮ್ಮಕ್ಕಳು ಹಾಗೂ ಸಹೋದರ- ಸಹೋದರಿಯರು ಉಪಸ್ಥಿತರಿದ್ದರು.










