






ಪುತ್ತೂರು: ಪಾಣಾಜೆ ಬಂಟರ ಸಂಘದ ವತಿಯಿಂದ ಆ.2ರಂದು ಸೂರಂಬೈಲು ತರವಾಡು ಮನೆಯಲ್ಲಿ ಆಟಿಡೊಂಜಿ ದಿನ ಕಾರ್ಯಕ್ರಮ ನೆರವೇರಿತು.


ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು ಜಗನ್ನಾಥ ರೈ ಸೂರಂಬೈಲು, ವಿಶ್ವನಾಥ ರೈ ಕಡಮಾಜೆ, ಸೋಮಪ್ಪ ರೈ ಅರ್ದಮೂಲೆ , ಬೇಬಿ ರೈ ಸೂರಂಬೈಲು, ಕುಸುಮ ಬೊಲ್ಲಿಂಬಳ ಉದ್ಘಾಟಿಸಿದರು.




ಹರ್ಷಿತಾ ರೈ ಪಡ್ಯಂಬೆಟ್ಟು ವಿವಿಧ ರೀತಿಯ ಆಟೋಟ ಸ್ಪರ್ಧೆಗಳನ್ನು ನಡೆಸಿದರು.ನಂತರ ಪಾಣಾಜೆ ಬಂಟರ ಸಂಘದ ಗೌರವಾಧ್ಯಕ್ಷ ಶಶಿ ಕುಮಾರ್ ರೈ ನೇತೃತ್ವದಲ್ಲಿ ಸಭಾ ಕಾರ್ಯಕ್ರಮ ನೆರವೇರಿತು.ಆನಂದ ರೈ ಸೂರಂಬೈಲು, ಉಮೇಶ್ ರೈ ಗಿಳಿಯಲು, ಜಯಲಕ್ಷ್ಮಿ ರೈ ಸೂರಂಬೈಲು, ಸುಪ್ರೀತಾ ರೈ ಪ್ಯಡ್ಯಂಬೆಟ್ಟು , ಶಾಂತಿ ರೈ ಗೋಳಿತ್ತಡಿ ಅತಿಥಿಗಳಾಗಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು.
ಕಾರ್ಯಕ್ರಮದಲ್ಲಿ ವಿವಿದ ಕ್ಷೇತ್ರದಲ್ಲಿ ಸಾಧನೆಗೈದ ಬಂಟ ಸಾಧಕರಾದ ರಘುನಾಥ್ ರೈ ಸೂರಂಬೈಲು (ಕೃಷಿ), ಜಗನ್ನಾಥ ರೈ ಕಡಮಾಜೆ (ಯಕ್ಷಗಾನ), ತಿಮ್ಮಪ್ಪ ರೈ ಗುವೆಳಗದ್ಧೆ (ಉದ್ಯಮ),ಶ್ರೇಯಾ ರೈ(ಕ್ರೀಡೆ), ಹರ್ಷಿತಾ ರೈ ಪ್ಯಡ್ಯಂಬೆಟ್ಟು (ಸಾಂಸ್ಕೃತಿಕ)ರನ್ನು ಸನ್ಮಾನಿಸಲಾಯಿತು.ಬಂಟ ಸಮಾಜದ ಹಿರಿಯ ಆದರ್ಶ ದಂಪತಿಗಳಾದ ಕಿಟ್ಟಣ್ಣ ಶೆಟ್ಟಿ ಕೋಟೆ,ಜಗನ್ಮೋಹನ ರೈ ಕೆದಂಬಾಡಿ, ರಘುನಾಥ ರೈ ಅಪಿನಿಮೂಲೆ ದಂಪತಿಗಳನ್ನು ಸನ್ಮಾನಿಸಲಾಯಿತು.ನೂತನ ದಂಪತಿಗಳಾದ ರವೀಂದ್ರ ರೈ ಕೊಂಡೆಪ್ಪಾಡಿ ದಂಪತಿಗಳಿಗೆ ಅಭಿನಂದಿಸಲಾಯಿತು.ಕಾರ್ಯಕ್ರಮದಲ್ಲಿ ದೀ. ಪ್ಯಡ್ಯಂಬೆಟ್ಟು ಶೀನಪ್ಪ ರೈ ಸ್ಮರಣಾರ್ಥ 10ನೇ ತರಗತಿ ಹಾಗೂ ಪ್ರಥಮ ಪಿಯುಸಿ ಯಲ್ಲಿ ಸಾಧನೆಗೈದ 4 ವಿದ್ಯಾರ್ಥಿಗಳಿಗೆ ಪೋಷಕ ಪ್ರೋತ್ಸಾಹಕ ಬಹುಮಾನ ವಿತರಿಸಲಾಯಿತು.

ಪಾಣಾಜೆ ಬಂಟರ ಸಂಘದ ಅಧ್ಯಕ್ಷ ಜಗನ್ಮೋಹನ ರೈ ಸೂರಂಬೈಲು ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ರಮನಾಥ ರೈ ಪ್ರಸ್ತಾವನೆಗೈದರು. ಕೋಶಾಧಿಕಾರಿ ಸುಧಾಕರ ರೈ ಗಿಳಿಯಾಳು ವಂದಿಸಿದರು. ಐಶಾನಿ ರೈ ಪ್ರಾರ್ಥಿಸಿ, ಧನ್ವಿ ರೈ ಕೋಟೆ ನಿರೂಪಣೆಗೈದರು. ಪ್ರದೀಪ್ ರೈ ಸೂರಂಬೈಲು ಸಹಕರಿಸಿದರು. ಕಾರ್ಯಮದ ನಂತರ ಮಾಡಿದ ಆಟಿಡೊಂಜಿ ದಿನದ ಪ್ರಯುಕ್ತ ವಿಶೇಷ ಭೋಜನ ಸವಿಯಲಾಯಿತು.










