ಅನುರಾಗ ವಠಾರದಲ್ಲಿ ಈ ಶ್ರಮ್ ಸೇವೆಯ ನೋಂದಾವಣೆ ಅಭಿಯಾನ

0

ಪುತ್ತೂರು: ನವ ಕರ್ನಾಟಕ ಕಟ್ಟಡ ಕಾರ್ಮಿಕರ ಸಂಘ ಅನುರಾಗ ವಠಾರ ಮತ್ತು ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆಯ ಜಂಟಿ ಆಶ್ರಯದಲ್ಲಿ ಕಾರ್ಮಿಕರಿಗೆ ಆಯುಷ್ಮಾನ್ ಉಚಿತ ಇ ಶ್ರಮ್ ಸೇವೆಯ ನೋಂದಾವಣೆ ಉಚಿತ ಅಭಿಯಾನ ಹಾಗೂ ಆಯ್ದ ಪ್ರಮುಖ ಕೇಂದ್ರ ಸರ್ಕಾರದ ಯೋಜನೆಗಳ ನೋಂದಾವಣೆ ಆ.9ರಂದು ಬ್ಲಡ್ ಬ್ಯಾಂಕ್ ಬಳಿಯ ಅನುರಾಗ ವಠಾರದಲ್ಲಿ ನಡೆಯಿತು.


ಸಂಘದ ಜಿಲ್ಲಾಧ್ಯಕ್ಷ ವಿಲ್ಪ್ರೆಡ್ ಜೋನ್ ಲೋಬೋ ಅಧ್ಯಕ್ಷತೆ ವಹಿಸಿದ್ದರು. ಸಂಘದ ಸಲಹೆಗಾರ ಮತ್ತು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಹಾಲಿಂಗೇಶ್ವರ ಒಕ್ಕೂಟದ ಅಧ್ಯಕ್ಷ ಜಯರಾಮ ಕುಲಾಲ್ ಕಾರ್ಯಕ್ರಮ ಉದ್ಘಾಟಿಸಿದರು. ಇ ಶ್ರಮ್ ಯೋಜನೆಯ ನೋಡೆಲ್ ಅಧಿಕಾರಿ, ಗ್ರಾಮಾಭಿವೃದ್ಧಿ ಯೋಜನೆಯ ನೋಡೆಲ್ ಅಧಿಕಾರಿ ಜೀವನ್, ಯೋಜನೆಯ ಮೇಲ್ವಿಚಾರಕಿ ಲತಾ, ಸಂಘದ ಕಾರ್ಯಾಧ್ಯಕ್ಷ ರಾಜೇಶ್, ಪ್ರಧಾನ ಕಾರ್ಯದರ್ಶಿ ಪರಮೇಶ್ವರ, ಸೇವಾ ಪ್ರತಿನಿಧಿ ನಳಿನಾಕ್ಷಿ ಉಪಸ್ಥಿತರಿದ್ದರು. ವಿಮಲ, ಭಾಗ್ಯಶ್ರೀ, ಮನೀಷ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here