







ಪುತ್ತೂರು: ಎಪಿಎಂಸಿ ರಸ್ತೆಯ ಲಿಲ್ಲಿ ಕಾಂಪ್ಲೆಕ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ವೀರ ಮಾಚಿದೇವ ವಿವಿಧೋದ್ದೇಶ ಸಹಕಾರ ಸಂಘ ಪುತ್ತೂರು ಇದರ ಪ್ರಧಾನ ಕಚೇರಿಯು ಆದರ್ಶ ಆಸ್ಪತ್ರೆ ಮುಂಭಾಗದ ತ್ರಿನೇತ್ರ ಕಾಂಪ್ಲೆಕ್ಸ್‌ಗೆ ಸ್ಥಳಾಂತರಗೊಂಡು ಶುಭಾರಂಭಗೊಳ್ಳಲಿದ್ದು ಇದರ ಆಮಂತ್ರಣ ಪತ್ರಿಕೆಯ ಬಿಡುಗಡೆಯು ಆ.8ರಂದು ಸಹಕಾರ ಸಂಘದ ಕಚೇರಿಯಲ್ಲಿ ನಡೆಯಿತು.


ಸಂಘದ ಅಧ್ಯಕ್ಷ ಇಂದುಶೇಖರ ಪಿ.ಬಿ. ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು. ಸಂಘದ ಉಪಾಧ್ಯಕ್ಷ ಪಿ.ಎನ್ ಸುಭಾಷ್ ಚಂದ್ರ, ಪ್ರಭಾರ ಕಾರ್ಯನಿರ್ವಹಣಾಽಕಾರಿ ಬಿ.ಈಶ್ವರ ನಾಯ್ಕ, ನಿರ್ದೇಶಕರಾದ ಸುಬ್ಬಣ್ಣ ಪೋಳ್ಯ, ಜಯಂತ ಬೇಕಲ್, ಈಶ್ವರ ವಿಟ್ಲ, ಜಯಂತ ಮುಂಡಾಜೆ, ಡಾ.ಯಾಧವೀ ವಿಜಯ ಕುಮಾರ್, ಪ್ರಭಾಕರ ಪುತ್ತೂರು, ಉಜಿರೆ ಶಾಖಾ ವ್ಯವಸ್ಥಾಪಕ ಯೋಗೀಶ್ ಉಜಿರೆ, ಕಲ್ಲಡ್ಕ ಶಾಖಾ ವ್ಯವಸ್ಥಾಪಕ ಪ್ರಮೋದ್, ಪುತ್ತೂರು ಪ್ರಧಾನ ಕಚೇರಿ ಸಿಬ್ಬಂದಿಗಳಾದ ಜಯಂತಿ, ಭಾಸ್ಕರ್, ಪ್ರತೀಕ್ಷಾ, ಚೈತ್ರ ಹಾಗೂ ಗುಣಶೀಲ ಉಪಸ್ಥಿತರಿದ್ದರು.













