ಆ.18ಕ್ಕೆ ಮಂಗಳೂರಿನಲ್ಲಿ ಬಿಎಂಎಸ್ ಪ್ರತಿಭಟನೆ

0

ಪುತ್ತೂರು: ಕಾರ್ಮಿಕರ ವಿವಿಧ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಭಾರತೀಯ ಮಜ್ದೂರ್ ಸಂಘದಿಂದ ದೇಶವ್ಯಾಪಿ ನಡೆಯಲಿರುವ ಪ್ರತಿಭಟನೆಗೆ ಸಂಬಂಧಿಸಿ ದಕ್ಷಿಣ ಕನ್ನಡ ಜಿಲ್ಲಾ ಬಿಎಂಎಸ್ ವತಿಯಿಂದ ಆ.18ರಂದು ಬೆಳಿಗ್ಗೆ ಗಂಟೆ 11ಕ್ಕೆ ಮಂಗಳೂರಿನ ಟೌನ್‌ಹಾಲ್ ಮಂಭಾಗದಲ್ಲಿ ಪ್ರತಿಭಟನೆ ನಡೆಯಲಿದೆ ಎಂದು ಬಿ.ಎಂ.ಎಸ್‌ನ ಜಿಲ್ಲಾಧ್ಯಕ್ಷ ವಕೀಲ ಅನಿಲ್ ಕುಮಾರ್ ಯು ಅವರು ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದ್ದಾರೆ.


ಕಾರ್ಮಿಕರಿಗೆ ನ್ಯಾಯಯುತ ವೇತನ, ಉದ್ಯೋಗ ಭದ್ರತೆ, ಸಾಮಾಜಿಕ ಭದ್ರತೆ, ಪಿಂಚಣಿ, ಆರೋಗ್ಯ ರಕ್ಷಣೆ ಮತ್ತು ಸುರಕ್ಷಿತ ಕೆಲಸದ ವಾತಾವರಣ ಒದಗಿಸುವುದು ಸರಕಾರದ ಜವಾಬ್ದಾರಿಯಾಗಿದ್ದು, ಹಾಗಾಗಿ ಕಾರ್ಮಿಕರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.

ಸುಮಾರು 11 ರಾಷ್ಟ್ರೀಯ ಮಟ್ಟದ ಪ್ರಮುಖ ಬೇಡಿಕೆಗಳ ಜೊತೆಗೆ ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಮಿಕರ ಪ್ರಮುಖ ಬೇಡಿಕೆಗಳನ್ನು ಅವರು ವಿವರಿಸಿದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಟ್ಟಡ ಕಾರ್ಮಿಕರಿಗೆ, ಆಟೋ ಕ್ಯಾಬ್, ಟ್ಯಾಕ್ಸಿ ಚಾಲಕರು, ರಬ್ಬರ್, ಕೃಷಿ, ತೋಟಗಾರಿಕಾ ಕಾರ್ಮಿಕರು, ಕೈಗಾರಿಕಾ ಮತ್ತು ಸಾರಿಗೆ ಕಾರ್ಮಿಕರು, ಬೀಡಿ ಕಾರ್ಮಿಕರು, ಹೊಟೇಲ್ ಕ್ಯಾಟರಿಂಗ್, ಆಸ್ಪತ್ರೆ, ಭದ್ರತಾ ಕಾರ್ಮಿಕರು, ಮೀನುಗಾರಿಕೆ, ಮೀನು ಸಂಸ್ಕರಣೆ ಹಾಗು ಗೇರು ಕಾರ್ಮಿಕರು, ಕ್ವಾರೆ, ಕ್ರಷರ್, ಮರಳು, ಕಲ್ಲು ಕಾರ್ಮಿಕರು, ಪತ್ರಿಕಾ ಮುದ್ರಣ ದೃಶ್ಯ ಮಾಧ್ಯಮದ ಕಾರ್ಮಿಕರು, ಅಂಚೆ ಇಲಾಖೆ ಕಾರ್ಮಿಕರು, ಗೋದಾಮು ಲೋಡಿಂಗ್, ಸಣ್ಣ ಕೈಗಾರಿಕಾ ಕಾರ್ಮಿಕರು, ಮನೆ ಆಧಾರಿತ ಮತ್ತು ಮಹಿಳಾ ಸಂಘಟಿತ ಕಾರ್ಮಿಕರು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಹೊರಗುತ್ತಿಗೆ ನೌಕರರ ವಿವಿಧ ಬೇಡಿಕೆಗಳಿವೆ. ಈ ಕುರಿತು ಸರಕಾರ ಮತ್ತು ಸಂಬಂಧಪಟ್ಟ ಇಲಾಖೆಗಳು ತಕ್ಷಣ ಕ್ರಮಕೈಗೊಂಡು ಕಾರ್ಮಿಕ ಸಂಘಟನೆಯೊಂದಿಗೆ ಚರ್ಚಿಸಿ, ಶಾಶ್ವತ ಪರಿಹಾರ ಈಡುವಂತೆ ಅವರು ಒತ್ತಾಯಿಸಿದರು. ಪತ್ರಿಕಾಗೋಷ್ಟಿಯಲ್ಲಿ ಬಿಎಂಎಸ್ ಜಿಲ್ಲಾ ಸಂಘಟನಾ ಕಾರ್ಯದರ್ಶಿ ವಸಂತ ಕುಮಾರ್ ಮನಿಹಳ್ಳ, ಬಿಎಂಎಸ್ ಹಿರಿಯ ಮುಖಂಡ ಬಿ.ಕೆ.ದೇವಪ್ಪ ಗೌಡ, ಬಿಎಂಎಸ್ ಆಟೋ ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷ ರಾಜೇಶ್ ಮರೀಲು, ಮಜಿ ಅಧ್ಯಕ್ಷ ಹೇಮಂತ ಎಸ್, ಪ್ರಧಾನ ಕಾರ್ಯದರ್ಶಿ ಸಚಿನ್ ವಳತ್ತಡ್ಕ, ಕೋಶಾಧಿಕಾರಿ ಶಿವಪ್ರಸಾದ್ ಆಚಾರ್ಯ, ಸದಸ್ಯ ಪ್ರಶಾಂತ್ ಕೃಷ್ಣನಗರ ಉಪಸ್ಥಿತರಿದ್ದರು.


ಶಾಸಕರಿಗೆ ಮನವಿ:
ಕಾರ್ಮಿಕರ ನ್ಯಾಯಯುತ ಹಕ್ಕುಗಳನ್ನು ಸರಕಾರದ ಗಮನಕ್ಕೆ ತರುವಂತೆ ಬಿ.ಎಂ.ಎಸ್‌ನ ಜಿಲ್ಲಾಧ್ಯಕ್ಷ ವಕೀಲ ಅನಿಲ್ ಕುಮಾರ್ ಯು ಅವರ ನೇತೃತ್ವದಲ್ಲಿ ಶಾಸಕ ಅಶೋಕ್ ಕುಮಾರ್ ರೈ ಅವರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭ ಕಟ್ಟಡ ನಿರ್ಮಾಣ ಮತ್ತು ಇತರ ಕಾಮಗಾರಿ ಮಜ್ದೂರ್ ಸಂಘದ ರಾಜ್ಯ ಕಾರ್ಯಕಾರಿಣಿ ಪುರಂದರ ಶೆಟ್ಟಿ, ಜಿಲ್ಲಾ ಕಾರ್ಯದರ್ಶಿ ವಸಂತ ಕುಮಾರ್ ಮನಿಹಳ್ಳ, ಹಿರಿಯ ಮುಖಂಡ ದೇವಪ್ಪ ಗೌಡ, ಬಿಎಂಎಸ್ ಆಟೋ ರಿಕ್ಷಾ ಚಾಲಕ ಮಾಲಕರ ಸಂಘದ ನಿಕಟಪೂರ್ವ ಅಧ್ಯಕ್ಷ ರಾಜೇಶ್ ಮರೀಲು, ಅಧ್ಯಕ್ಷ ಹೇಮಂತ್ ಎನ್, ಪ್ರಧಾನ ಕಾರ್ಯದರ್ಶಿ ಸಚಿನ್, ಕೋಶಾಧಿಕಾರಿ ಶಿವಪ್ರಸಾದ್ ಆಚಾರ್ಯ, ಸದಸ್ಯ ಪ್ರಶಾಂತ್ ಕೃಷ್ಣನಗರ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here