ವಿಟ್ಲ : ಅಕ್ರಮ ಕೆಂಪುಕಲ್ಲು ಸಾಗಾಟ ಪತ್ತೆ – 3 ಮಂದಿ ವಿರುದ್ಧ ಕೇಸ್

0

ವಿಟ್ಲ: ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಕೆಂಪು ಕಲ್ಲುಗಳನ್ನು ಸಾಗಿಸುತ್ತಿದ್ದ ಲಾರಿಯನ್ನು ವಿಟ್ಲ ಪೊಲೀಸರು ಸಾಲೆತ್ತೂರು ಚೆಕ್ ಪೋಸ್ಟ್ ಬಳಿ ವಶಪಡಿಸಿಕೊಂಡಿದ್ದಾರೆ.

ಆಗಸ್ಟ್ 8 ರಂದು ಮುಂಜಾನೆ 6:15 ಕ್ಕೆ ಬಂಟ್ವಾಳ ತಾಲೂಕಿನ ಸಾಲೆತ್ತೂರು ಗ್ರಾಮದ ಮೆದು ಚೆಕ್ ಪೋಸ್ಟ್‌ನಲ್ಲಿ ಕರ್ತವ್ಯದಲ್ಲಿದ್ದ ಹೆಡ್ ಕಾನ್ಸ್ಟೇಬಲ್ ಹರೀಶ್ ಮತ್ತು ಹೆಚ್‌ಜಿ ಉಮೇಶ್ ಅವರು ವಾಹನ ತಪಾಸಣೆ ವೇಳೆ ಆನೆಕಲ್ಲು ಕಡೆಯಿಂದ ಬಂದ KA-21-C-7685 ನೋಂದಣಿಯ ಲಾರಿಯನ್ನು ತಡೆದಿದ್ದಾರೆ. ಪರಿಶೀಲನೆ ವೇಳೆ ಲಾರಿಯಲ್ಲಿ ಅಕ್ರಮವಾಗಿ ಕೆಂಪು ಕಲ್ಲುಗಳನ್ನು ಸಾಗಿಸುತ್ತಿರುವುದು ಕಂಡುಬಂದಿದೆ.

ಸ್ಥಳಕ್ಕೆ ಆಗಮಿಸಿದ ವಿಟ್ಲ ಪೊಲೀಸ್ ಉಪನಿರೀಕ್ಷಕ ಬಿ.ಎಸ್. ನಾಯಕ್ ಹಾಗೂ ಸಿಬ್ಬಂದಿ ಪರಿಶೀಲನೆ ನಡೆಸಿ ಲಾರಿ ಮತ್ತು ಕಲ್ಲುಗಳನ್ನು ವಶಕ್ಕೆ ಪಡೆದಿದ್ದಾರೆ.ಪೊಲೀಸರು ವಶಪಡಿಸಿಕೊಂಡಿರುವುದು 200 ಕೆಂಪು ಕಲ್ಲುಗಳು ಅಂದಾಜು ಮೌಲ್ಯ ₹6,000 ಮತ್ತು SML ಕಂಪನಿಯ ಲಾರಿ ಅಂದಾಜು ಮೌಲ್ಯ ₹7,00,000. ಒಟ್ಟು ₹7,06,000 ಮೌಲ್ಯದ ಸ್ವತ್ತುಗಳನ್ನು ಜಪ್ತಿ ಮಾಡಲಾಗಿದೆ.ವಿಚಾರಣೆ ವೇಳೆ ಈ ಕಲ್ಲುಗಳನ್ನು ಕೇರಳದ ಆನೆಕಲ್ಲು ಸಮೀಪದ ಕೊಮ್ಮಂಗಲದ ಶ್ರೀನಿಧಿ ಭಟ್ ಅವರ ಕೋರೆಯಿಂದ ತರಲಾಗುತ್ತಿತ್ತು ಎಂದು ತಿಳಿದುಬಂದಿದೆ. ಈ ಸಂಬಂಧ ಲಾರಿ ಚಾಲಕ ತಿಪ್ಪೇಸ್ವಾಮಿ ಎಸ್, ಲಾರಿ ಮಾಲೀಕ ಪ್ರಕಾಶ್ ಭಟ್ ಹಾಗೂ ಕೋರೆ ಮಾಲೀಕ ಶ್ರೀನಿಧಿ ಭಟ್ ಅವರ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ BNS ಮತ್ತು MMDR ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ. ತನಿಖೆ ಮುಂದುವರಿದಿದೆ.

LEAVE A REPLY

Please enter your comment!
Please enter your name here