ಆರೋಗ್ಯ ಜಾಗೃತಿಯೊಂದಿಗೆ ನೆಲ್ಯಾಡಿ ಶಿವಳ್ಳಿ ಸಂಪದದ ಆಟಿ ಆಚರಣೆ – ಸಾಧಕರಿಗೆ ಸನ್ಮಾನ

0

ನೆಲ್ಯಾಡಿ: ನೆಲ್ಯಾಡಿ ಶಿವಳ್ಳಿ ಸಂಪದವು ಆ.2 ರಂದು ತನ್ನ 12ನೇ ವರ್ಷದ ಆಟಿ ಸಂಭ್ರಮವನ್ನು ಆರೋಗ್ಯ ಜಾಗೃತಿ ಕಾರ್ಯಕ್ರಮವಾಗಿ ಆಚರಿಸಿತು.

ಹಾರ್ಪಳ ಶ್ರೀ ಶಾಸ್ತಾರೇಶ್ವರ ದೇವಸ್ಥಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಮಕುಂಜ, ಬೊಳುವಾರು, ದರ್ಬೆ, ನರಿಮೊಗರು ವಲಯಗಳ ಶಿವಳ್ಳಿ ಸಂಪದದ ಅಧ್ಯಕ್ಷರು ಮತ್ತು ಪ್ರಮುಖರು ಸೇರಿದಂತೆ ನೂರಕ್ಕೂ ಮಿಕ್ಕಿ ಸದಸ್ಯರು ಭಾಗವಹಿಸಿದರು.

ವಿಷ್ಣು ಸಹಸ್ರನಾಮ ಪಠಣದೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ದೇವಸ್ಥಾನದ ಅರ್ಚಕ ಮತ್ತು ಕಾರ್ಯಕ್ರಮದ ಮುಖ್ಯ ಪ್ರಾಯೋಜಕ ವೇದಮೂರ್ತಿ ಶ್ರೀಧರ ನೂಜಿನ್ನಾಯರು ಮಹಾಪೂಜೆ ನೆರವೇರಿಸಿದರು. ಧನಲಕ್ಷ್ಮಿ ಕುಂಡಡ್ಕ ಪ್ರಾರ್ಥಿಸಿದರು. ಅಖಿಲಾ ಭಟ್ ನೀತಿ ಸಂಹಿತೆ ಪಠಿಸಿದರು. ನೆಲ್ಯಾಡಿ ವಲಯ ಅಧ್ಯಕ್ಷ ಅರ್ಚಕ ಹರಿಪ್ರಸಾದ ಭಟ್ ಅತಿಥಿಗಳನ್ನು ಸ್ವಾಗತಿಸಿದರು.ಈ ಸಂದರ್ಭದಲ್ಲಿ ಪುತ್ತೂರು ಮತ್ತು ಕಡಬ ತಾಲೂಕು ಶಿವಳ್ಳಿ ಸಂಪದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಸತೀಶ ಮುಡಂಬಡಿತ್ತಾಯ, ಪೂರ್ವ ಅಧ್ಯಕ್ಷರಾದ ರಾಧಾಕೃಷ್ಣ ಎಡಪಡಿತಾಯ ಮಂಡೆಗುಂಡಿ, ಹಾಗೂ ದೋಂತಿಲ ವಿಷ್ಣುಮೂರ್ತಿ-ಸುಬ್ರಹ್ಮಣ್ಯ ದೇವಸ್ಥಾನದ ಅರ್ಚಕ ಪದ್ಮನಾಭ ನೂಜಿನ್ನಾಯ ಅವರನ್ನು ಸನ್ಮಾನಿಸಲಾಯಿತು.

ತಾಲೂಕು ಶಿವಳ್ಳಿ ಸಂಪದದ ನಿಕಟ ಪೂರ್ವ ಅಧ್ಯಕ್ಷ ಸುಧೀಂದ್ರ ಕುದ್ದಣ್ಣಾಯ ಮತ್ತು ತಾಲೂಕು ಯುವ ಸಂಪದದ ಅಧ್ಯಕ್ಷ ಸುಜಯ್ ತಂತ್ರಿ ಮಾತನಾಡಿದರು. ವಲಯ ಮಹಿಳಾ ವೇದಿಕೆ ಅಧ್ಯಕ್ಷೆ ಶಶಿಕಲಾ ಶಬರಾಯರು ಸಹಕರಿಸಿದರು.ಕಾರ್ಯಕ್ರಮದ ವಿಶೇಷವಾಗಿ ವಲಯದ ಗೃಹಿಣಿಯರು ಆಟಿ ಆಚರಣೆಗೆ ಸೂಕ್ತವಾದ ವಿವಿಧ ಔಷಧೀಯ ಗುಣ ಹೊಂದಿದ ತಿಂಡಿ-ತಿನಸುಗಳನ್ನು ಹಂಚಿದರು.ತಾಲೂಕು ಶಿವಳ್ಳಿ ಸಂಪದ ಸಂಘಟನಾ ಕಾರ್ಯದರ್ಶಿ ರವೀಂದ್ರ ಟಿ ಕಾರ್ಯಕ್ರಮ ನಿರೂಪಿಸಿ, ಧನ್ಯವಾದವಿತ್ತರು.

LEAVE A REPLY

Please enter your comment!
Please enter your name here