






ಪುತ್ತೂರು : ಕಾರು ತಯಾರಿಕೆಯ ಜೊತೆಗೆ ಮಾರಾಟದಲ್ಲೂ ಸದಾ ಮುಂಚೂಣಿಯ ಸ್ಥಾನದಲ್ಲಿರುವ ದೇಶದ ಹೆಸರಾಂತ ಕಾರು ತಯಾರಿಕಾ ಸಂಸ್ಥೆ ಮಾರುತಿ ಸುಝಕಿ ಇಂಡಿಯಾ ಪ್ರೈ ಲಿ ವಿನೂತನ ಮಾದರಿಯ ಕಾರನ್ನು ಮಾರುಕಟ್ಟೆಗೆ ಪರಿಚಯಿಸಿದ್ದು , ಅಧಿಕೃತ ಡೀಲರ್ ಹಾರಾಡಿ ಭಾರತ್ ಅಟೋ ಕಾರ್ಸ್ ನಲ್ಲಿ ಕಾರು ಬಿಡುಗಡೆ ಕಾರ್ಯಕ್ರಮ ಆ.10 ರಂದು ನಡೆಯಿತು.



ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಸಾರಿಗೆ ಇಲಾಖೆಯ ಸೀನಿಯರ್ ಇನ್ಸ್ಪೆಕ್ಟರ್ ಆಸ್ಪನ್ ಬಿ ಎಸ್ ದೀಪ ಪ್ರಜ್ವಲನೆ ಮೂಲಕ ಕಾರ್ಯಕ್ರಮ ಉದ್ಘಾಟಿಸಿ , ವಿನೂತನ ಬ್ರಿಝಾ ಕಾರನ್ನು ಅನಾವರಣಗೊಳಿಸಿ ಮಾತನಾಡಿ, ಮಾರುತಿ ಕಾರನ್ನು ಎಲ್ಲರೂ ಇಷ್ಟಪಡುತ್ತಾರೆಂದರೆ, ಮುಖ್ಯವಾಗಿ ಸರ್ವೀಸ್ ಕೂಡ ಎಲ್ಲೆಡೆಯೂ ಲಭ್ಯವಿರುವುದರಿಂದಲೇ ದೊಡ್ಡದಾದ ಮಟ್ಟಕ್ಕೆ ಬೆಳೆದಿದೆ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮಾರುತಿಯು ಅತ್ಯುತ್ತಮ ಪೈಪೋಟಿ ನೀಡುತ್ತಿದ್ದು ,ವಿಸ್ತೃತ ಮಾರುಕಟ್ಟೆಯನ್ನು ಹೊಂದಲಿಯೆಂದು ಹಾರೈಸಿದರು.



ಸೇಲ್ಸ್ ಮ್ಯಾನೇಜರ್ ಶಿವಕೀರ್ತಿ ರಾಮ್ದಾಸ್ ಮಾತನಾಡಿ,ಭಾರತ್ ಅಟೋ ಕಾರ್ಸ್ ಸಂಸ್ಥೆ 2006ರಲ್ಲಿ ಪ್ರಾರಂಭಗೊಂಡಿದ್ದು , ಸಂಸ್ಥೆಯ ಮಾಲೀಕರಾದ ಗಣಪತಿ ಪೈ ಯವರು ಹಳ್ಳಿ ಪ್ರದೇಶದಲ್ಲೂ ಮಳಿಗೆ ತೆರೆಯೋ ಹಂಬಲದಿಂದ ಪುತ್ತೂರಿನಲ್ಲಿ ಆರಂಭಿಸಿದರು. ಇದೀಗ ಭಾರತ್ ಸಮೂಹದ ಸಂಸ್ಥೆಯಲ್ಲಿ 1500 ಉದ್ಯೋಗಿಗಳಿದ್ದಾರೆ.ಸಂಸ್ಥೆ ತನ್ನ ಗ್ರಾಹಕ ವರ್ಗಕ್ಕೆ ಅತ್ಯುತ್ತಮ ಸೇವೆ ನೀಡುತ್ತಿದೆ ಮತ್ತು ಎಲ್ಲರ ಸಹಕಾರದಿಂದ ಬೆಳೆದಿದ್ದೇವೆ ಎಂದ್ಹೇಳಿ ವಂದಿಸಿದರು.
ಸರ್ವೀಸ್ ವಿಭಾಗದ ಮ್ಯಾನೇಜರ್ ಆನಂದ್ ಮೂಲ್ಯ ವೇದಿಕೆಯಲ್ಲಿ ಹಾಜರಿದ್ದರು.ವಿನೂತನ ಕಾರಿನ ವಿಶೇಷತೆಯನ್ನು ರಿಲೇಷನ್ ಶಿಪ್ ಮ್ಯಾನೇಜರ್ ವಿನೀತ್ ಕುಮಾರ್ ನೀಡಿದರು. ನೂತನ ಕಾರಿನ ಬುಕ್ಕಿಂಗ್ ಮಾಡಿದ 8 ಗ್ರಾಹಕರ ಪೈಕಿ ಪ್ರಥಮ ಗ್ರಾಹಕ ಹಬೀಬ್ ಮುಹ್ಸೀನ್ ಪಾಟ್ರಕೋಡಿ ಇವರಿಗೆ ಕಾರಿನ ಕೀಲಿಯನ್ನು ಅತಿಥಿಗಳು ನೀಡಿ ಹಾರೈಸಿದರು. ಶಬರಿ ಶೆಟ್ಟಿ ನಿರೂಪಿಸಿ ,ಹರ್ಷಿತ್ ಧನ್ಯವಾದ ಅರ್ಪಿಸಿದರು. ಈ ವೇಳೆ ಬ್ಯಾಂಕ್ ಸಿಬಂದಿಗಳು , ಫೈನಾನ್ಸ್ ಪ್ರತಿನಿಧಿಗಳು , ಗ್ರಾಹಕರು ಮತ್ತು ಸಿಬಂದಿಗಳು ಹಾಜರಿದ್ದರು.

ವಿನೂತನ ಕಾರಿನ ವಿಶೇಷತೆ ಬಗ್ಗೆ ಶೋ ರೂಂ ಅಥವಾ ಮೊಬೈಲ್ ಸಂಖ್ಯೆ 9483501730 ಅಥವಾ 8197120030 ಇಲ್ಲವೇ 9538925330 ಸಂಪರ್ಕಿಸುವಂತೆ ಭಾರತ್ ಪ್ರಕಟಣೆ ತಿಳಿಸಿದೆ.










