ಸ್ನೇಹಸಂಗಮ ಆಟೋ ಚಾಲಕ ಮಾಲಕರ ಸಂಘದ ತುರ್ತು ಸೇವಾನಿಧಿಯಿಂದ ಸದಸ್ಯನಿಗೆ ಧನಸಹಾಯ

0

ಪುತ್ತೂರು: ಪುತ್ತೂರು ಸ್ನೇಹಸಂಗಮ ಆಟೋ ಚಾಲಕ ಮಾಲಕರ ಸಂಘದ ಗೌರವಾಧ್ಯಕ್ಷ ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ ಇವರ ಮಾರ್ಗದರ್ಶನದಂತೆ ತುರ್ತು ಸೇವಾ ನಿಧಿಯನ್ನು ಸ್ಥಾಪಿಸಲಾಗಿದ್ದು ಇದರ ನಿಧಿಯಿಂದ ಅನಾರೋಗ್ಯದಲ್ಲಿರುವ, ಸಂಘದ ಸದಸ್ಯ ರಘುನಾಥ ನೆಲ್ಲಿಕಟ್ಟೆ ಇವರಿಗೆ 10 ಸಾವಿರ ರೂ. ಧನಸಾಯ ನೀಡಲಾಯಿತು. ರಘುನಾಥ ನೆಲ್ಲಿಕಟ್ಟೆ ಇವರು ಕೆಲವು ವಾರದ ಹಿಂದೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಪ್ರಸ್ತುತ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.

ಸಂಘದ ಗೌರವಾಧ್ಯಕ್ಷರಾದ ಜಗದೀಶ್ ಶೆಟ್ಟಿನಲ್ಲಿ ಕಟ್ಟೆ, ಅಧ್ಯಕ್ಷರಾದ ತಾರಾನಾಥ ಗೌಡ ಬನ್ನೂರು, ಪ್ರಧಾನ ಕಾರ್ಯದರ್ಶಿ ಹರೀಶ್ ಕುಮಾರ್ ತೆಂಕಿಲ, ಸಂಘಟನಾ ಕಾರ್ಯದರ್ಶಿ ಇಸ್ಮಾಯಿಲ್ ಬೊಲ್ವಾರ್ ಹಾಗೂ ಸದಸ್ಯರಾದ ಲೋಕೇಶ್ ತೆಂಕಿಲ ಮತ್ತು ಕೇಶವ ಶೇಖಮಲೆರವರು ರಘುನಾಥ್‌ರವರಿಗೆ ನಿಧಿ ಹಸ್ತಾಂತರಿಸಿ ಮುಂದಿನ ಚಿಕಿತ್ಸೆಗಾಗಿ ಈ ಮೇಲಿನ ನಿಧಿಯು ಒಂದು ಸಹಾಯವಾಗಿ ಪರಿಣಮಿಸಲಿ ಹಾಗೂ ಬೇಗನೆ ಗುಣಮುಖರಾಗಿ ಬರಲಿ ಎಂದು ಪ್ರಾರ್ಥಿಸಿದರು.

ತುರ್ತು ಸೇವಾ ನಿಧಿ
ಸಂಘದ ವತಿಯಿಂದ ಆರಂಭಿಸಲಾದ ತುರ್ತು ಸೇವಾ ನಿಧಿ ಸುಮಾರು 50ರಿಂದ 60 ಸದಸ್ಯರನ್ನು ಹೊಂದಿದೆ. ಇದರಲ್ಲಿರುವ ಸದಸ್ಯರು ತಮ್ಮ ತಿಂಗಳ ದುಡಿಮೆಯಲ್ಲಿ ಪ್ರತಿ ತಿಂಗಳು ನೂರು ರೂ.ಗಳನ್ನು ಖಾತೆಯಲ್ಲಿ ಜಮಾ ಮಾಡುತ್ತಿದ್ದಾರೆ. ಈ ಹಣವು ತಮ್ಮ ಹಾಗೂ ಆಟೋಗಳಲ್ಲಿ ದುಡಿಯುವ ಸಹೋದರರಿಗೆ ಅಪಘಾತ ಅಥವಾ ಇತರ ಅನಾರೋಗ್ಯದ ತುರ್ತು ಸಂದರ್ಭದಲ್ಲಿ ನೆರವಾಗುವಂತೆ ಈ ನಿಧಿಯನ್ನು ರಚಿಸಲಾಗಿದೆ.

LEAVE A REPLY

Please enter your comment!
Please enter your name here