







ಪುತ್ತೂರು: ಮೈಸೂರು ಸೋಸಲೆ ವ್ಯಾಸರಾಜ ಮಠದ ಶ್ರೀ ವಿದ್ಯಾಶ್ರೀಷ ತೀರ್ಥ ಶ್ರೀಪಾದರು ಕೊಡಿಪಾಡಿ ಶ್ರೀ ಜನಾರ್ದನ ದೇವಸ್ಥಾನಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಜನಾರ್ದನ ಎರ್ಕಾಡಿತ್ತಾಯ ಸದಸ್ಯರಾದ ಸುಬ್ರಮಣ್ಯ ಗೌಡ, ಧೀರಜ್ ಗೌಡ ವ್ಯವಸ್ಥಾಪನಾ ಸಮಿತಿಯ ಮಾಜಿ ಸದಸ್ಯರಾದ ಮೋಹನ ನಾಯ್ಕ್, ಟಿ. ರಂಗನಾಥ ರಾವ್, ಅರ್ಚಕರಾದ ಮುರಳೀಧರ ಬಡಿಕಿಲ್ಲಾಯರವರುಗಳು ಸ್ವಾಮೀಜಿಯವರನ್ನು ಸ್ವಾಗತಿಸಿದರು.



ಪ್ರಸಿದ್ಧ ಪುರೋಹಿತರಾದ ಶಿಬರ ವೇದಮೂರ್ತಿ ಶ್ರೀವತ್ಸ ಕೆದಿಲಾಯರವರು ಪೂರ್ಣ ಕುಂಭ ಹಿಡಿದು ಮಂತ್ರ ಪಟಿಸಿ ಸ್ವಾಮೀಜಿಯವರನ್ನು ಬರಮಾಡಿಕೊಂಡರು.. ದೇವರ ದರ್ಶನ ಮಾಡಿದ ಬಳಿಕ ಸ್ವಾಮೀಜಿಯವರು ದೇವಳದ ಕೆರೆ ಹಾಗೂ ತೀರ್ಥ ಕುಂಡಿಗೆ ಬಳಿ ತೆರಳಿ ಅವರ ಶಿಷ್ಯ ವರ್ಗದವರಿಗೆ ತೀರ್ಥ ಪ್ರೋಕ್ಷಣೆ ಮಾಡಿ ಬಳಿಕ ಮಧ್ವ ಪೀಠ ಇರುವ ಗೋಪುರದಲ್ಲಿ ಶಿಷ್ಯ ರಿಗೆ ಕೆಲ ಸಮಯ ಮಂತ್ರ ಪಾಠ ಮಾಡಿದರು. ಈ ಸಂದರ್ಭದಲ್ಲಿ ಶಿವಳ್ಳಿ ಸಂಪದ ಬೊಳುವಾರು ವಲಯದ ಅಧ್ಯಕ್ಷ ಅನಂತ ಕೃಷ್ಣ ಪಡ್ಡಿಲ್ಲಾಯ, ಕೋಶಾಧಿಕಾರಿ ಅನಂತ ಪದ್ಮನಾಭ ಕಡಂಬಳಿತ್ತಾಯ, ಕೃಷ್ಣ ನಿಡ್ವಣ್ಣಾಯ, ಪದ್ಮಾವತಿ ಪಡ್ಡಿಲ್ಲಾಯ ಮೊದಲಾದವರು ಉಪಸ್ಥಿತರಿದ್ದರು.













