ಕರಾಟೆ ಪಂದ್ಯಾಟದಲ್ಲಿ ಸಾಂದೀಪನಿ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ

0

ಪುತ್ತೂರು: ವಿದ್ಯಾ ಭಾರತಿ ಇದರ ಆಶ್ರಯದಲ್ಲಿ ಶ್ರೀ ದೇವಿ ವಿದ್ಯಾಲಯ ಪುಣಚದಲ್ಲಿ ಜರುಗಿದ ಪುತ್ತೂರು ಜಿಲ್ಲಾ ಮಟ್ಟದ ಕರಾಟೆ ಪಂದ್ಯಾಟದಲ್ಲಿ 17ರ ವಯೋಮಾನದ ಹುಡುಗರ ವಿಭಾಗದಲ್ಲಿ 10ನೇ ತರಗತಿಯ ವಿದ್ಯಾರ್ಥಿಗಳಾದ ಜೀವನ್ ಪ್ರಥಮ ಸ್ಥಾನ, ನಿಶಾಂತ್ ಸಿ ಜಿ ತೃತೀಯ ಸ್ಥಾನ, ವರ್ಷಿತ್ ತೃತೀಯ ಸ್ಥಾನ,17ರ ವಯೋಮಾನದ ಹುಡುಗಿಯರ ವಿಭಾಗದಲ್ಲಿ 10ನೇ ತರಗತಿಯ ವಿದ್ಯಾರ್ಥಿಗಳಾದ ಜ್ಞಾನ ರೈ ಪ್ರಥಮ ಸ್ಥಾನ, ಭೂಮಿಕಾ ದ್ವಿತೀಯ ಸ್ಥಾನ, ಹಸ್ತಾ ಶೆಟ್ಟಿ ದ್ವಿತೀಯ ಸ್ಥಾನ,9ನೇ ತರಗತಿಯ ಅಂಜನಾ ದ್ವಿತೀಯ ಸ್ಥಾನ, 14ರ ವಯೋಮಾನದ ಹುಡುಗರ ವಿಭಾಗದಲ್ಲಿ 8ನೇ ತರಗತಿಯ ಸಮೃದ್ಧ ದ್ವಿತೀಯ ಸ್ಥಾನ,6ನೇ ತರಗತಿಯ ವಿಖ್ಯಾತ್ ತೃತೀಯ ಸ್ಥಾನ, 14ರ ವಯೋಮಾನದ ಹುಡುಗಿಯರ ವಿಭಾಗದಲ್ಲಿ 7ನೇ ತರಗತಿಯ ದ್ವಿತಿ ಕೆ ಎಂ ಪ್ರಥಮ ಸ್ಥಾನ, 7ನೇ ತರಗತಿಯ ಲಿಷ್ಮ ತೃತೀಯ ಸ್ಥಾನ, 7ನೇ ತರಗತಿ ಧನ್ವಿ ಬಿ ತೃತೀಯ ಸ್ಥಾನ ಪಡೆದಿರುತ್ತಾರೆ.

ಜ್ಞಾನ ರೈ, ದ್ವಿತಿ ಕೆ ಎಂ, ಜೀವನ್ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಇವರಿಗೆ ಕರಾಟೆ ಶಿಕ್ಷಕ ನಾರಾಯಣ ಆಚಾರ್ಯ ತರಬೇತಿ ನೀಡಿದ್ದಾರೆ.ಎಂದು ಶಾಲಾ ಮುಖ್ಯೋಪಾಧ್ಯಾಯರಾದ ಪ್ರಸನ್ನ ಕೆ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here