ಮೇನಾಲ ಅಂಗನವಾಡಿ ಹಾಗೂ ಶಾಲಾ ಆವರಣ ಸ್ವಚ್ಛತಾ ಕಾರ್ಯಕ್ರಮ 

0

ಬಡಗನ್ನೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ) ಪುತ್ತೂರು ಇದರ ಆಶ್ರಯದಲ್ಲಿ ಪ್ರಗತಿಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ ಮೇನಾಲ ಇದರ ಮಾಜಿ ಅಧ್ಯಕ್ಷ ಬಾಲಕೃಷ್ಣ ರೈ ಮೇನಾಲ ರವರ ನೇತೃತ್ವದಲ್ಲಿ ಮತ್ತು ಸೇವಾಪ್ರತಿನಿಧಿ ಸುಂದರ ಜಿ ಯವರ ಮಾರ್ಗದರ್ಶನದಲ್ಲಿ ದ.ಕ.ಜಿ.ಪಂ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಮೇನಾಲ ಮತ್ತು ಸ್ಥಳೀಯ ಅಂಗನವಾಡಿಯ ಸುತ್ತ ಮುತ್ತ ಪ್ರದೇಶದಲ್ಲಿ ಸ್ವಚ್ಛತಾ ಕಾರ್ಯಕ್ರಮ ಅ.8ರಂದು ನಡೆಯಿತು.

 ಗ್ರಾಮ ಪಂಚಾಯತ್ ಮಾಜಿ ಸದಸ್ಯ ವೆಂಕಪ್ಪ ನಾಯ್ಕ ಸಹಿತ ಮೇನಾಲ ಒಕ್ಕೂಟದ ಸುಮಾರು 35 ಮಂದಿ ಸದಸ್ಯರು ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ರಾಮ ಮೇನಾಲ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹಾರಿಸ್, ಕಾರ್ಯದರ್ಶಿ ರಾಜೇಶ್ ಪಂಚೋಡಿ ಆಗಮಿಸಿ ಅಭಿನಂದನೆ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ ಶಾಲೆಯ ವತಿಯಿಂದ  ಉಪಹಾರ ವ್ಯವಸ್ಥೆ  ಮಾಡಲಾಗಿತ್ತು. ಶಾಲಾ ಮುಖ್ಯ ಶಿಕ್ಷಕಿ ರಾಜೀವಿ ಸ್ವಾಗತಿಸಿ, ಸಹ ಶಿಕ್ಷಕಿ ವಾಣಿ ಸ್ವಚ್ಛತೆಯ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿ, ವಂದಿಸಿದರು.

LEAVE A REPLY

Please enter your comment!
Please enter your name here