







ವೈಭವದ ರಾಷ್ಟ್ರ ನಿರ್ಮಾಣ ನಮ್ಮೆಲ್ಲರ ಹೊಣೆ- ದಾಮೋದರ ಕಣಜಾಲು


ಪುತ್ತೂರು : ಬೆಟ್ಟಂಪಾಡಿ ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ 2026 27ನೇ ಶೈಕ್ಷಣಿಕ ಸಾಲಿನ ಶಾಲಾ ವಿದ್ಯಾರ್ಥಿ ಸಂಘ ಆ.10ರಂದು ಉದ್ಘಾಟನೆಗೊಂಡಿತು.



ಕಾರ್ಯಕ್ರಮವನ್ನು ಉದ್ಘಾಟಿಸಿದ ಸರಕಾರಿ ಪ್ರಥಮ ದರ್ಜೆ ಕಾಲೇಜು ಇಲ್ಲಿನ ಪ್ರಾಂಶುಪಾಲ ದಾಮೋದರಕಣ ಜಾಲು ಮಾತನಾಡುತ್ತಾ, ಪ್ರಜಾಪ್ರಭುತ್ವ ತಳಹದಿಯನ್ನು ಹೊಂದಿರುವ ಈ ಶಾಲೆಯ ಮಂತ್ರಿಮಂಡಲದಲ್ಲಿ ನಾವಿನ್ಯತೆಗಳೊಂದಿಗೆ ಕಾರ್ಯ ವೈಖರಿಗಳು ಮೂಡಿಬರಲಿ. ವ್ಯಕ್ತಿಯ ವ್ಯಕ್ತಿತ್ವವು ಮಾನವೀಯ ಮೌಲ್ಯಗಳಿಂದ ರೂಪಗೊಳ್ಳಲಿ. ಒಳಿತು ಕೆಡುಕುಗಳು ಎಲ್ಲರ ಜೀವನದಲ್ಲಿವೆ ಆದರೆ ನಾವು ಯಾವುದಕ್ಕೆ ಪ್ರಾಶಸ್ತ್ಯ ಕೊಡುತ್ತೇವೆಯೋ ಅದು ಬೆಳೆಯುತ್ತಾ ಹೋಗುತ್ತವೆ. ಸಂಸ್ಕಾರದ ಭಾಗವಾಗಿ ಸ್ವಚ್ಛತೆಯ ಕಾಳಜಿ ಇರಲಿ. ವೈಭವದ ರಾಷ್ಟ್ರ ನಿರ್ಮಾಣ ಜವಾಬ್ದಾರಿ ನಮ್ಮೆಲ್ಲರ ಹೊಣೆ ಎಂದರು.

ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ರಂಗನಾಥ ರೈ ಗುತ್ತು, ಸ್ಪರ್ಧಾತ್ಮಕವಾದ ವಿರೋಧ ಪಕ್ಷವು ಇದ್ದಾಗ ಶಾಲೆಯ ಕೆಲಸ ಕಾರ್ಯಗಳು ಪರಿಪೂರ್ಣ ಪಥದತ್ತ ಮುನ್ನಡೆಯಲು ಸಾಧ್ಯ ಎಂದರು. ಶಾಲಾ ನಾಯಕ ಪವನ್ ಬಿ ಎಸ್ ಎಲ್ಲಾ ವಿದ್ಯಾರ್ಥಿಗಳನ್ನು ಒಗ್ಗೂಡಿಸಿ ಶಿಕ್ಷಕರ ಸಲಹೆ ಸೂಚನೆಗಳನ್ನು ಪಾಲಿಸುತ್ತಾ ಗಮನ ಸೆಳೆಯುವ ಕಾರ್ಯ ಯೋಜನೆಗಳನ್ನು ನಡೆಸುವಲ್ಲಿ ಕಾರ್ಯಕರ್ತರಾಗುತ್ತೇವೆ ಎಂದರು.

ಶಾಲಾ ಮುಖ್ಯಗುರು ರಾಜೇಶ್ ಎನ್ ಪ್ರಮಾಣವಚನ ಬೋಧಿಸಿದರು. 10ನೇ ತರಗತಿ ವಿದ್ಯಾರ್ಥಿನಿ ಸಾನ್ವಿ ಪಿ.ಬಿ ಸ್ವಾಗತಿಸಿದರು.ಜೊತೆ ಕಾರ್ಯದರ್ಶಿ ಗೌತಮಕೃಷ್ಣ ವಂದಿಸಿ, 7ನೇ ತರಗತಿ ವಿದ್ಯಾರ್ಥಿ ಇಹಾನಿ ಎಸ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.










