







ಪುತ್ತೂರು: ಆಟಿ ಹೆಸರಿನಲ್ಲಿ ಗಮ್ಮತ್ತು ಕೂಟಗಳೇ ಇಂದು ಹೆಚ್ಚಾಗಿದ್ದು ಅದರ ಬದಲಿಗೆ ಹಿಂದೆ ಆಟಿ ತಿಂಗಳಿನಲ್ಲಿ ತುಳುವರ ಬದುಕು ಬವಣೆ ಹೇಗಿತ್ತು ಎಂಬುದನ್ನು ನೆನಪಿಸುವ ಕೆಲಸ ಆಗಬೇಕಾಗಿದೆ. ಈ ನಿಟ್ಟಿನಲ್ಲಿ ಪುತ್ತೂರು ತುಳುಕೂಟವು ಹಮ್ಮಿಕೊಂಡ ಪಿರಾಕ್’ದ ಆಟಿದ ನೆಂಪು ಕಾರ್ಯಕ್ರಮವು ಇತರರಿಗೆ ಮಾದರಿ ಎಂದು ತುಳು ಜನಪದ ಸಂಶೋಧಕ, ಉಪನ್ಯಾಸಕ ಹಾಗೂ ದೈವನರ್ತಕ ಡಾ. ರವೀಶ್ ಪಡುಮಲೆ ಅಭಿಪ್ರಾಯಪಟ್ಟರು.


ಪುತ್ತೂರು ತುಳುಕೂಟದ ವತಿಯಿಂದ ಜಿ. ಎಲ್. ವನ್ ಮಾಲ್’ನಲ್ಲಿ ಜರಗಿದ ಪಿರಾಕ್’ದ ಆಟಿದ ನೆಂಪು ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು. ಮುಖ್ಯ ಅತಿಥಿಯಾಗಿದ್ದ ಪುತ್ತೂರು ರೋಟರಿ ಕ್ಲಬ್ ಅಧ್ಯಕ್ಷ ಪ್ರೊ. ದತ್ತಾತ್ರೇಯ ರಾವ್ ಅವರು ಮಾತನಾಡಿ, ಆಟಿದ ಕೂಟ ಅನ್ನುವ ಬದಲು ಪಿರಾಕ್’ದ ಆಟಿದ ನೆಂಪು ಅನ್ನುವುದೇ ಸೂಕ್ತವಾಗಿದ್ದು ತಾನು ಬೇರೆಕಡೆಯೂ ಇದೇ ರೀತಿಯ ಕಾರ್ಯಕ್ರಮ ಹಮ್ಮಿಕೊಂಡಿದ್ದಾಗಿ ತಿಳಿಸಿದರು.



ಲಯನ್ಸ್ ಚೆಯರ್’ಪರ್ಸನ್ ಹಾಗೂ ಮಾತೃಸಂಘದ ನಿರ್ದೇಶಕಿ ವತ್ಸಲಾ ಪಿ. ಶೆಟ್ಟಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ತುಳುಕೂಟದ ಅಧ್ಯಕ್ಷ ಪ್ಯಾಟ್ರಿಕ್ ಸಿಪ್ರಿಯನ್ ಮಸ್ಕರೇನ್ಹಸ್ ಅಧ್ಯಕ್ಷತೆ ವಹಿಸಿದ್ದರು. ಅಧ್ಯಾಪಕ ರಮೇಶ್ ಉಳಯ ತುಳು ರಸಪ್ರಶ್ನೆ ನಡೆಸಿಕೊಟ್ಟರು. ವೇದಿಕೆಯಲ್ಲಿ ತುಳುಕೂಟದ ಜತೆಕಾರ್ಯದರ್ಶಿಗಳಾದ ನಯನಾ ರೈ ನೆಲ್ಲಿಕಟ್ಟೆ ಮತ್ತು ಪಿ. ಉಲ್ಲಾಸ್ ಪೈ ಹಾಗೂ ಕೋಶಾಧಿಕಾರಿ ರವಿಪ್ರಸಾದ್ ಬಿ. ವಿ. ಉಪಸ್ಥಿತರಿದ್ದರು. ಕೊನೆಯಲ್ಲಿ ತುಳುಕೂಟದ ಕಾರ್ಯದರ್ಶಿ ಡಾ. ರಾಜೇಶ್ ಬೆಜ್ಜಂಗಳ ವಂದಿಸಿದರು.
ನಿವೃತ್ತ ವಿಜಯಾ ಬ್ಯಾಂಕ್ ವ್ಯವಸ್ಥಾಪಕ ಜೈರಾಜ್ ಭಂಡಾರಿ, ನಿವೃತ್ತ ಬಿ. ಎಸ್. ಎನ್. ಎಲ್. ಎಸ್. ಡಿ. ಇ. ಪಿ. ಸೀತಾರಾಮ ಗೌಡ, ನಿವೃತ್ತ ಎಲ್.ಐ.ಸಿ. ವಿಭಾಗೀಯ ವ್ಯವಸ್ಥಾಪಕ ನಾರಾಯಣ ಗೌಡ, ಒಳಿತು ಮಾಡು ಮನುಷಾ ತಂಡದ ಚೇತನ್ ಮಡಿವಾಳ, ತುಳುಕೂಟದ ನಿರ್ದೇಶಕ ಕಲಾವಿದ ಕೃಷ್ಣಪ್ಪ, ಬಹುಭಾಷಾ ಸಾಹಿತಿ ಹಾಗೂ ತುಳು ಲಿಪಿ ತಜ್ಞೆ ಶ್ರೀಶಾವಾಸವಿ ತುಳುನಾಡ್, ಚಿಗುರಲೆ ಸಾಹಿತ್ಯ ಬಳಗದ ಸಂಚಾಲಕ ನಾರಾಯಣ ಕುಂಬ್ರ, ಉಪನ್ಯಾಸಕ ರಾಜರಾಮ ನೆಲ್ಲಿತ್ತಾಯ, ಅಮಿತಾ ಆರ್. ಶೆಟ್ಟಿ ನುಳಿಯಾಲು, ಯಶುಭಾ ರೈ, ವೇದಾವತಿ ಟೀಚರ್, ಯಮುನಾ, ಪುಷ್ಪಾ, ಸಮೃದ್ಧಿ, ಸುಚಿತ್ರಾ, ಎ. ವಿ. ಜಿ. ಶಾಲಾ ಸಂಚಾಲಕ ವೆಂಕಟರಮಣ ಗೌಡ ಕಳುವಾಜೆ, ಜಿ. ಎಲ್. ಮಾಲ್’ನ ಕಚೇರಿ ವ್ಯವಸ್ಥಾಪಕ ಎ. ಪಿ. ಬಂಗೇರ, ಅನಿಲ್ ಪಾಯಸ್, ಚಿದಾನಂದ್, ಪುನೀತ್, ಯಜ್ಞೇಶ್, ರೋಹಿತ್, ಮೇಲ್ವಿಚಾರಕಿ ಕೀರ್ತಿ ಎನ್. ಮತ್ತಿತರರು ಉಪಸ್ಥಿತರಿದ್ದರು.










