ಆ.13ಕ್ಕೆ ‘ಧನಾತ್ಮಕ ಪೋಷಕತ್ವ’ ಆನ್‌ಲೈನ್ ಕಾರ್ಯಕ್ರಮ: ಮುಳಿಯ ಫೌಂಡೇಶನ್, ಗೋಲ್ಡ್ & ಡೈಮಂಡ್ಸ್ ಸಹಯೋಗ

0

ಬೆಂಗಳೂರು: ಮುಳಿಯ ಫೌಂಡೇಶನ್ ಹಾಗೂ ಮುಳಿಯ ಗೋಲ್ಡ್ & ಡೈಮಂಡ್ಸ್ ಸಹಯೋಗದಲ್ಲಿ ಬೆಂಗಳೂರಿನ 81ಕ್ಕೂ ಹೆಚ್ಚು ಶಾಲೆಗಳಲ್ಲಿ ಆಯೋಜಿಸಲಾಗುತ್ತಿರುವ ‘ಧನಾತ್ಮಕ ಪೋಷಕತ್ವ’ ವಿಚಾರ ಸಂಕಿರಣ ಸರಣಿಯ ಉದ್ಘಾಟನಾ ಕಾರ್ಯಕ್ರಮವು ಆನ್‌ಲೈನ್ ಮೂಲಕ ಆ.13ರದು ನಡೆಯಲಿದೆ.

ನಟ, ಚಿಂತಕ ಹಾಗೂ ಪ್ರೇರಣಾದಾಯಕ ಮಾತುಗಾರ ರಮೇಶ್ ಅರವಿಂದ್ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಕ್ಕಳ ಬೆಳವಣಿಗೆ, ಪೋಷಕರ ಜವಾಬ್ದಾರಿ ಹಾಗೂ ಮಕ್ಕಳೊಂದಿಗೆ ಸಕಾರಾತ್ಮಕ ಸಂಬಂಧ ಬೆಳೆಸುವ ಕುರಿತು ಉಪಯುಕ್ತ ವಿಚಾರಗಳನ್ನು ಹಂಚಿಕೊಳ್ಳಲಿದ್ದಾರೆ.

ಕಾರ್ಯಕ್ರಮವು ಆ.13ರಂದು Zoom ಅಪ್‌ ನಲ್ಲಿ ಆನ್‌ಲೈನ್ ನಲ್ಲಿ ಸಂಜೆ 6:30ರಿಂದ 7:30ರವರೆಗೆ ನಡೆಯಲಿದ್ದು, ಸಂಜೆ 6:15ಕ್ಕೆ ಲಾಗಿನ್ ಮೂಲಕ ಸೇರಿಕೊಳ್ಳಬೇಕು. ಕಾರ್ಯಕ್ರಮದಲ್ಲಿ ಭಾಗವಹಿಸಲು ಆಸಕ್ತರು ಮುಂಗಡವಾಗಿ ನೋಂದಾಯಿಸಿಕೊಳ್ಳಬಹುದು.

ನೋಂದಣಿಗಾಗಿ https://us06web.zoom.us/meeting/register/9zA1g1FaT2mZ_JB1DzfCgg Zoom ಲಿಂಕ್ ಬಳಸಬಹುದು. ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಯಾವುದೇ ಪ್ರಶ್ನೆಗಳಿದ್ದಲ್ಲಿ, ತಮ್ಮ ಹೆಸರು ಹಾಗೂ ಇತರ ಅಗತ್ಯ ಮಾಹಿತಿಯೊಂದಿಗೆ 8123643916 ಸಂಖ್ಯೆಗೆ WhatsApp ಮೂಲಕ ಕಳುಹಿಸಬಹುದು.

ಕಾರ್ಯಕ್ರಮವನ್ನು ನೇರವಾಗಿ ವೀಕ್ಷಿಸಲು ಮುಳಿಯ ಜ್ಯುವೆಲ್ಸ್‌ನ ಅಧಿಕೃತ YouTube ಚಾನೆಲ್‌ YouTube:https://www.youtube.com/@muliyajewels/streams ನಲ್ಲಿಯೂ ಅವಕಾಶ ಕಲ್ಪಿಸಲಾಗಿದೆ.ಪೋಷಕರಲ್ಲಿ ಮಕ್ಕಳೊಂದಿಗೆ ಉತ್ತಮ ಸಂವಹನ, ಅರ್ಥಪೂರ್ಣ ಸಂಬಂಧ ಹಾಗೂ ಸಕಾರಾತ್ಮಕ ಪೋಷಕತ್ವದ ಮನೋಭಾವವನ್ನು ಬೆಳೆಸುವ ಉದ್ದೇಶದಿಂದ ಈ ವಿಚಾರಸಂಕಿರಣ ಸರಣಿಯನ್ನು ಆಯೋಜಿಸಲಾಗಿದೆ ಎಂದು ಕೇಶವ ಪ್ರಸಾದ್ ಮುಳಿಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

LEAVE A REPLY

Please enter your comment!
Please enter your name here