







ನೆಲ್ಯಾಡಿ: ಜೆಸಿಐ ನೆಲ್ಯಾಡಿ ಘಟಕದ ವತಿಯಿಂದ ನೆಲ್ಯಾಡಿ ಸುತ್ತಮುತ್ತಲಿನ ಸಾರ್ವಜನಿಕರಿಗಾಗಿ ’ಸಾರ್ವಜನಿಕ ಕ್ರೀಡೋತ್ಸವ-2026’ ಆ.16ರಂದು ಬೆಳಗ್ಗೆ 9 ಗಂಟೆಯಿಂದ ನೆಲ್ಯಾಡಿ ಗಾಂಧಿಮೈದಾನದಲ್ಲಿ ನಡೆಯಲಿದೆ.


ಅಂಗನವಾಡಿ ಮಕ್ಕಳಿಗೆ ಕಡ್ಲೆ ಹೆಕ್ಕುವುದು, ಬಕೆಟ್ ಬಾಲ್, 1ನೇ ತರಗತಿ ಮಕ್ಕಳಿಗೆ ಬಕೆಟ್ ಬಾಲ್, 50 ಮೀ.ಓಟ, 2ರಿಂದ 4ನೇ ತರಗತಿ ಮಕ್ಕಳಿಗೆ ಬಾಲ್ ಪಾಸ್(ಹುಡುಗ ಮತ್ತು ಹುಡುಗಿ), ಪಟ್ಟಣಕ್ಕೆ ಬಾಂಬ್ (ಹುಡುಗ ಮತ್ತು ಹುಡುಗಿ), ಒಂಟಿ ಕಾಲಿನ ಓಟ, 5ರಿಂದ 7ನೇ ತರಗತಿ ಮಕ್ಕಳಿಗೆ 100 ಮೀ.ಓಟ, ಪಟ್ಟಣಕ್ಕೆ ಬಾಂಬ್(ಮಿಕ್ಸ್), ವಿಕೆಟ್ ರಿಂಗ್, 8,9,10ನೇ ತರಗತಿ ಮಕ್ಕಳಿಗೆ ಒಂಟಿ ಕಾಲಿನ ಓಟ, 200 ಮೀ.ಓಟ, ಪಟ್ಟಣಕ್ಕೆ ಬಾಂಬ್(ಮಿಕ್ಸ್), ಸಾರ್ವಜನಿಕ ಪುರುಷರಿಗೆ ಗೋಣಿ ಚೀಲ ಓಟ, ಹಗ್ಗ ಜಗ್ಗಾಟ (ಸ್ಥಳದಲ್ಲೇ ತಂಡ ರಚನೆ), ಬೈಕ್ ಸ್ಲೋ ರೇಸಿಂಗ್, ಸಾರ್ವಜನಿಕ ಮಹಿಳೆಯರಿಗೆ ಪಟ್ಟಣಕ್ಕೆ ಬಾಂಬ್, ಹಗ್ಗ ಜಗ್ಗಾಟ (ಸ್ಥಳದಲ್ಲೇ ತಂಡ ರಚನೆ), ಸ್ಕೂಟಿ ಸ್ಲೋ ರೇಸಿಂಗ್, ತ್ರೋಬಾಲ್ (ಸ್ಥಳದಲ್ಲೇ ತಂಡ ರಚನೆ), 11ನೇ ತರಗತಿಯಿಂದ 25 ವರ್ಷದ ಒಳಗಿನ ಪುರುಷ ಹಾಗೂ ಮಹಿಳೆಯರಿಗೆ 100 ಮೀ.ಓಟ ಪ್ರತ್ಯೇಕ, 25 ವರ್ಷ ಮೇಲ್ಪಟ್ಟ ಪುರುಷ ಮತ್ತು ಮಹಿಳೆಯರಿಗೆ 100 ಮೀ.ಓಟ (ಪ್ರತ್ಯೇಕ), 50 ವರ್ಷ ಮೇಲ್ಪಟ್ಟ ಪುರುಷ ಮತ್ತು ಮಹಿಳೆಯರಿಗೆ ಬಕೆಟ್ ಬಾಲ್ (ಪ್ರತ್ಯೇಕ), ವಿಕೆಟ್ ರಿಂಗ್ (ಪ್ರತ್ಯೇಕ), 5ರಿಂದ 7ನೇ ತರಗತಿಯ ಹುಡುಗ ಮತ್ತು ಹುಡುಗಿಯರಿಗೆ ಭಾಷಣ ವಿಷಯ-ನನಗೆ ಖಷಿ ತಂದ ಒಂದು ಕಥೆ (3+1 ನಿ.), ದೇಶಭಕ್ತಿ ಗೀತೆ (4+1ನಿ.), 8ರಿಂದ 10ನೇ ತರಗತಿಯ ಹುಡುಗ ಮತ್ತು ಹುಡುಗಿಯರಿಗೆ ಭಾಷಣ ವಿಷಯ-ಪ್ಲಾಸ್ಟಿಕ್ ಮುಕ್ತ ಭಾರತ (3+1 ನಿ.), ದೇಶಭಕ್ತಿ ಗೀತೆ (4 +1ನಿ.) ಹಾಗೂ ಸೇರಿದ ಎಲ್ಲಾ ಮಕ್ಕಳು, ಪುರುಷರು, ಮಹಿಳೆಯರಿಗೆ ವಿವಿಧ ಮನೋರಂಜನಾ ಆಟೋಟ ಸ್ಪರ್ಧೆಗಳು ನಡೆಯಲಿವೆ ಎಂದು ನೆಲ್ಯಾಡಿ ಜೆಸಿಐ ಅಧ್ಯಕ್ಷೆ ಪ್ರವೀಣಿ ಶೆಟ್ಟಿ ತಿಳಿಸಿದ್ದಾರೆ.













