ಹಳೆನೇರೆಂಕಿ: ಕೃಷಿಕ ಆನಂದ ಪೂಜಾರಿ ಹೃದಯಾಘಾತದಿಂದ ನಿಧನ

0

ರಾಮಕುಂಜ: ಕಡಬ ತಾಲೂಕಿನ ಹಳೆನೇರೆಂಕಿ ಗ್ರಾಮದ ಬರೆಂಬೆಟ್ಟು ನಿವಾಸಿ ಆನಂದ ಪೂಜಾರಿ (53ವ.) ಅವರು ಆ.12ರಂದು ಸಂಜೆ ಹೃದಯಾಘಾತದಿಂದ ನಿಧನರಾಗಿದ್ದಾರೆ.


ಆ.12ರಂದು ಸಂಜೆ ಆನಂದ ಪೂಜಾರಿ ಅವರು ತೋಟದಿಂದ ಹುಲ್ಲು ಕತ್ತರಿಸಿ ತಲೆಯಲ್ಲಿ ಹೊತ್ತುಕೊಂಡು ಬರುತ್ತಿದ್ದ ವೇಳೆ ಹಠಾತ್ ಕುಸಿದು ಬಿದ್ದಿದ್ದರು. ಮನೆಯವರು ತಕ್ಷಣ ಅವರನ್ನು ಉಪಚರಿಸಿ ಆಲಂಕಾರಿನ ಕ್ಲಿನಿಕ್‌ಗೆ ಕರೆತಂದು ಬಳಿಕ ಹೆಚ್ಚಿನ ಚಿಕಿತ್ಸೆಗೆ ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆದೊಯ್ದರಾದರೂ ಆ ವೇಳೆಗೆ ಆನಂದ ಪೂಜಾರಿ ಅವರು ಹೃದಯಾಘಾತಕ್ಕೊಳಗಾಗಿ ಮೃತಪಟ್ಟಿರುವುದಾಗಿ ವರದಿಯಾಗಿದೆ. ಇವರು ಕೃಷಿಯ ಜೊತೆಗೆ ಮರದ ಕೆತ್ತನೆ ಕೆಲಸ ಮಾಡುತ್ತಿದ್ದರು. ಮೃತರು ಪತ್ನಿ ಸತ್ಯಾವತಿ, ಪುತ್ರಿ ಸಾನ್ವಿ, ಪುತ್ರ ಸಾತ್ವಿಕ್, ಇಬ್ಬರು ಸಹೋದರರು, ಇಬ್ಬರು ಸಹೋದರಿಯರು, ಅತ್ತಿಗೆಯಂದಿರು, ಬಾವಂದಿರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here