







ಪುತ್ತೂರು: ಸವಣೂರಿನ ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ಆಚರಿಸಲಾದ 80ನೇಯ ಸ್ವಾತಂತ್ರ್ಯೋತ್ಸವದ ಅಂಗವಾಗಿ ಸಂಸ್ಥೆಯ ಆಡಳಿತಾಧಿಕಾರಿ ಅಡ್ವೊಕೇಟ್ ಅಶ್ವಿನ್ ಎಲ್ ಶೆಟ್ಟಿ ಧ್ವಜಾರೋಹಣಗೈದರು.


ಬಳಿಕ ಮಾತನಾಡಿ ನಮಗೆ ದೊರಕಿದ ಸ್ವಾತಂತ್ರ್ಯದ ಮೌಲ್ಯವನ್ನು ತಿಳಿದು ಪ್ರತಿಯೊಬ್ಬ ವಿದ್ಯಾರ್ಥಿಯು ಉನ್ನತ ಮಟ್ಟದಲ್ಲಿ, ವಿವಿಧ ಕ್ಷೇತ್ರದಲ್ಲಿ ಸಾಧನೆಗೈದು ದೇಶದ ಕೀರ್ತಿಪತಾಕೆಯನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಏರಿಸಬೇಕೆಂದು ಸಂದೇಶ ಕೊಟ್ಟರು. ಕಾರ್ಯಕ್ರಮವನ್ನು ಪ್ರಥಮ ವಾಣಿಜ್ಯ ವಿಭಾಗದ ಅಬ್ದುಲ್ ರಹ್ಮನುಲ್ ಫಾರಿಸ್ ಐ ನಿರೂಪಣೆಗೈದು, ವಿದ್ಯಾರ್ಥಿ ಸಂಘದ ನಾಯಕಿ ದ್ವಿತೀಯ ಪಿಯುಸಿ ಶ್ರದ್ಧಾ ಕೆ ಡಿ ಸ್ವಾಗತಿಸಿ, ದ್ವಿತೀಯ ಪಿಯುಸಿ ಶ್ರೇಯ ಮತ್ತು ಬಳಗ ಧ್ವಜಗೀತೆ ಹಾಡಿದರು. ದ್ವಿತೀಯ ಬಿಕಾಂ ವಿದ್ಯಾರ್ಥಿನಿ ಸಫಾ ವಂದನಾರ್ಪಣೆಗೈದರು.



ಕಾರ್ಯಕ್ರಮದಲ್ಲಿ ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ ರಾಜಲಕ್ಷ್ಮೀ ಎಸ್ ರೈ, ವಿದ್ಯಾರಶ್ಮಿ ವಿದ್ಯಾಲಯದ ಪ್ರಾಂಶುಪಾಲೆ ಶಶಿಕಲಾ ಆಳ್ವ ಮತ್ತು ಬೋಧಕ ಬೋಧಕೇತರ ವರ್ಗ ಉಪಸ್ಥಿತರಿದ್ದರು. ನಂತರ ವಿದ್ಯಾರ್ಥಿ ವಿದ್ಯಾರ್ಥಿನಿಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.










