






ಪುತ್ತೂರು : ಪರಮಾರ್ಗ ಅಂಗನವಾಡಿ ಕೇಂದ್ರದಲ್ಲಿ 80 ನೇ ವರ್ಷದ ಸ್ವಾತಂತ್ರೋತ್ಸವವನ್ನು ಆ.15ರಂದು ಆಚರಿಸಲಾಯಿತು.


ಧ್ವಜಾರೋಹಣವನ್ನು ಸುವರ್ಣ ಎಸ್ಟೇಟ್ ನ ಮಾಲಕ ವೇದನಾಥ ಸುವರ್ಣ ನೆರವೇರಿಸಿದರು. ನೂತನವಾಗಿ ಆಯ್ಕೆಯಾದ ಬಾಲವಿಕಾಸ ಸಮಿತಿಯ ಅಧ್ಯಕ್ಷೆ ನಂದಿತಾ ಗೌರೀಶ್ ಉಪಸ್ಥಿತರಿದ್ದರು.



ಗ್ರಾ. ಪಂ ಸದಸ್ಯರಾದ ಪುರಂದರ ಬಂಗೇರ, ಜಯರಾಮ ಪೂಜಾರಿ, ಹಾಜರಿದ್ದರು. ಬಾಲವಿಕಾಸ ಸಮಿತಿಯ ಮಾಜಿ ಅಧ್ಯಕ್ಷೆ ಕಾವ್ಯ ಪ್ರಸಾದ್, ಸುಹಾಸಿನಿ, ಆಶಾ ಕಾರ್ಯಕರ್ತೆ ವಾಣಿಶ್ರೀ, ಲಲಿತಾ, ಸ್ತ್ರಿ ಶಕ್ತಿ ಸದಸ್ಯರು, ಸ್ವ – ಸಹಾಯ ಸಂಘದ ಸದಸ್ಯರು ಹಾಗೂ ಮಕ್ಕಳ ಪೋಷಕರು, ಹಳೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಅಂಗನವಾಡಿ ಕಾರ್ಯಕರ್ತೆ ಸುಶೀಲಾ ಕಾರ್ಯಕ್ರಮ ನಿರೂಪಿಸಿದರು, ಸಹಾಯಕಿ ಲಲಿತ ಸಹಕರಿಸಿದರು. ಕೊನೆಯಲ್ಲಿ ಸಿಹಿ ತಿಂಡಿ ಹಂಚಲಾಯಿತು.










