






ಕಾಣಿಯೂರು: ಪ್ರಗತಿ ವಿದ್ಯಾಸಂಸ್ಥೆ ಕಾಣಿಯೂರಿನಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.


ಮುಖ್ಯ ಅತಿಥಿ ಪುತ್ತೂರಿನ ವಕೀಲರಾದ ಲತನ್ ರೈ ಗುತ್ತುಪಾಲುರವರು ಧ್ವಜಾರೋಹಣ ನೆರವೇರಿಸಿ, ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಮತ್ತು ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಸ್ವಾತಂತ್ರ್ಯೋತ್ಸವದ ಮಹತ್ವವನ್ನು ಮತ್ತು ಜೀವನದಲ್ಲಿ ಉನ್ನತ ವಾದುದನ್ನು ಸಾಧಿಸಲು ಹಲವು ದಾರಿಗಳಿವೆ, ಮಕ್ಕಳು ಉತ್ತಮವಾದದನ್ನು ಆಯ್ಕೆಮಾಡಿ ಸತ್ಪ್ರಜೆಯಾಗಿ ಬಾಳಬೇಕು ಎಂದು ಹೇಳಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಉದ್ಯಮಿ ಧರ್ಣಪ್ಪ ಗೌಡ ಅಂಬುಲ ಮಾತನಾಡಿ, ನಾವು ಸ್ವಾವಲಂಬಿಗಳಾಗಿ ಬದುಕು ಕಟ್ಟಿಕೊಂಡು, ಸ್ವಾರ್ಥ ರಹಿತ ಜೀವನ ನಡೆಸಿ, ಇತರರಿಗೆ ಮಾರ್ಗದರ್ಶಕರಾದಾಗ ಮಾತ್ರ ನಮಗೆ ಸಿಕ್ಕಿರುವ ಸ್ವಾತಂತ್ರ್ಯಕ್ಕೆ ನಿಜವಾದ ಅರ್ಥ ಬರುತ್ತದೆ ಎಂದು ಶುಭ ಹಾರೈಸಿದರು. ಸಂಸ್ಥೆಯ ಸಂಚಾಲಕರಾದ ಜಯಸೂರ್ಯ ರೈ ಮಾದೋಡಿ, ಶಿಕ್ಷಕರಕ್ಷಕ ಸಂಘದ ಅಧ್ಯಕ್ಷ ದಿವೀಶ್ ಮುರುಳ್ಯ, ಸಂಸ್ಥೆಯ ಟ್ರಸ್ಟಿ ದೇವಿಕಿರಣ್ ರೈ ಮಾದೋಡಿ, ಪೋಷಕ ಬಂಧು ಧನಂಜಯ ಕೇನಾಜೆ, ಆಂಗ್ಲ ಮಾಧ್ಯಮದ ಮುಖ್ಯಗುರು ನಾರಾಯಣ ಭಟ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ವೇದಿಕೆಯಲ್ಲಿ ಸಂಸ್ಥೆಯ ಟ್ರಸ್ಟಿ ಹರಿಚರಣ್ ರೈ ಮಾದೋಡಿ, ಸಹ ಆಡಳಿತ ಅಧಿಕಾರಿ ಹೇಮಾನಾಗೇಶ್ ರೈ ಉಪಸ್ಥಿತರಿದ್ದರು.



ಆಡಳಿತಾಧಿಕಾರಿ ವಸಂತ ರೈ ಕಾರ್ಕಳ ತ್ರವಿಕ ಮಾತುಗಳೊಂದಿಗೆ ಎಲ್ಲರನ್ನು ಸ್ವಾಗತಿಸಿದರು. ಕನ್ನಡ ಮಾಧ್ಯಮದ ಮುಖ್ಯಗುರು ವಿನಯ ವಿ ಶೆಟ್ಟಿ, ಧನ್ಯವಾದ ಸಮರ್ಪಿಸಿದರು. ಆಂಗ್ಲ ಮಾಧ್ಯಮದ ಸಹಮುಖ್ಯಸ್ಥೆ ಅನಿತಾ ಜೆ ರೈ ಕಾರ್ಯಕ್ರಮ ನಿರಪಿಸಿದರು. ದೈಹಿಕ ಶಿಕ್ಷಣ ಶಿಕ್ಷಕರಾದ ಸಂತೋಷ್ ಕೆ, ಸುವರ್ಣ ಕೆ ಬಿ, ಅನಿತಾ ಎಸ್ ರೈ, ಪವಿತ್ರ, ಶಶಿಕಲಾ ಕಾರ್ಯಕ್ರಮವನ್ನು ಸಂಘಟಿಸಿದರು. ಸಭಾ ಕಾರ್ಯಕ್ರಮದ ಬಳಿಕ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಸಂಸ್ಥೆಯ ಶಾಲಾ ವಾಹನ ಸಿಬ್ಬಂದಿಗಳು, ಕುಶಾಲಪ್ಪ ಗೌಡ ಅಂಬುಲ ಮತ್ತು ಅಂಕಲ್ ಸ್ವೀಟ್ಸ್ ಸಿಬ್ಬಂದಿಗಳು, ಧರ್ಣಪ್ಪ ಗೌಡ ಅಂಬುಲ ಮತ್ತು ಸಂಸ್ಥೆಯ ವತಿಯಿಂದ ಮಕ್ಕಳಿಗೆ ಸಿಹಿ ತಿಂಡಿಯನ್ನು ವಿತರಿಸಲಾಯಿತು.










