ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪಾಪೆಮಜಲು ಸ್ವಾತಂತ್ರ್ಯ ದಿನಾಚರಣೆ

0

ಅರಿಯಡ್ಕ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪಾಪೆ ಮಜಲು ಶಾಲೆಯಲ್ಲಿ 80ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮ ನಡೆಯಿತು. ಧ್ವಜಾರೋಹಣ ಕಾರ್ಯಕ್ರಮವನ್ನು ಎಸ್‌ಡಿಎಂಸಿ ಅಧ್ಯಕ್ಷರಾದ ಅಪ್ಪಯ್ಯ ನಾಯ್ಕ ಇವರು ನೆರವೇರಿಸಿ ಕೊಟ್ಟರು. ಧ್ವಜಾರೋಹಣ ಕಾರ್ಯಕ್ರಮದಲ್ಲಿ ಎಸ್ಡಿಎಂಸಿ ಸದಸ್ಯರು, ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು ಮತ್ತು ಸದಸ್ಯರು, ಪೋಷಕರು, ಊರ ವಿದ್ಯಾಭಿಮಾನಿಗಳು, ವಿದ್ಯಾ ಸಂಸ್ಥೆಯ ಮುಖ್ಯೋಪಾಧ್ಯಾಯಿನಿ ಶಶಿಕಲಾ ಮತ್ತು ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದರು.


ನಂತರ ವಿದ್ಯಾರ್ಥಿಗಳು ಕೌಡಿಚಾರು ಅಮೃತ ಸರೋವರ ತನಕ ಮೆರವಣಿಗೆ ಕಾರ್ಯಕ್ರಮ ನಡೆಯಿತು. ಮೆರವಣಿಗೆಯುದ್ದಕ್ಕೂ ದಾನಿಗಳು, ವಿದ್ಯಾಭಿಮಾನಿಗಳು, ವಿವಿಧ ಸಂಘ ಸಂಸ್ಥೆಯವರು, ವರ್ತಕರು, ರಿಕ್ಷಾ ಚಾಲಕಮಾಲಕರು, ಸಿಹಿ ತಿಂಡಿ ವಿತರಿಸಿದರು.


ಅಮೃತ ಸರೋವರ ಕೌಡಿಚ್ಚಾರಿನಲ್ಲಿ ಧ್ವಜಾರೋಹಣ:
ನಿವೃತ್ತ ಸೈನಿಕ ಚಂದ್ರಶೇಖರ ಗೌಡ ಪಟ್ಲಕಾನ ಧ್ವಜಾರೋಹಣ ನೆರವೇರಿಸಿ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಪಂಚಾಯತ್ ಪಿಡಿಒ ಸುನಿಲ್ ಎಚ್ ಟಿ, ಪಂಚಾಯತ್ ನಿಕಟಪೂರ್ವ ಅಧ್ಯಕ್ಷ ಸಂತೋಷ್ ಮಣಿಯಾಣಿ ಕುತ್ಯಾಡಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಶಶಿಕಲಾ, ಎಸ್ ಡಿ ಎಂ ಸಿ ಅಧ್ಯಕ್ಷ ಅಪ್ಪಯ್ಯ ನಾಯ್ಕ, ಶ್ರೀ ಕೃಷ್ಣ ಭಜನಾ ಮಂದಿರದ ಅಧ್ಯಕ್ಷ ತಿಲಕ್ ರೈ ಕುತ್ಯಾಡಿ,ಪಂಚಾಯತ್ ಸಿಬ್ಬಂದಿಗಳು, ರಿಕ್ಷಾ ಚಾಲಕ ಹಾಗೂ ಮಾಲಕರು, ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

ಮಾಜಿ ಪಂಚಾಯತ್ ಸದಸ್ಯ ಹರೀಶ್ ರೈ ಜಾರತ್ತಾರು ಸ್ವಾಗತಿಸಿ,ಪಂಚಾಯತ್ ಕಾರ್ಯದರ್ಶಿ ಶಿವರಾಮ ಮೂಲ್ಯ ವಂದಿಸಿದರು ಗ್ರಾಮ ಪಂಚಾಯತ್ ವತಿಯಿಂದ ಲಘು ಉಪಹಾರದ ವ್ಯವಸ್ಥೆ ನಡೆಯಿತು.

LEAVE A REPLY

Please enter your comment!
Please enter your name here