






ಪುತ್ತೂರು: ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಗಳು(ರಿ) ನರಿಮೊಗರು, ಪುತ್ತೂರು ಇಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಬನ್ನಿ ದಳದ ಉದ್ಘಾಟನಾ ಸಮಾರಂಭವು ನಡೆಯಿತು.


ಕಾರ್ಯಕ್ರಮದಲ್ಲಿ ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷರಾದ ಜಯರಾಮ ಕೆದಿಲಾಯ ಶಿಬರ, ಮುಖ್ಯ ಅತಿಥಿ ಭರತ್ ರಾಜ್ ಕೆ ASOC ದಕ್ಷಿಣ ಕನ್ನಡ, ಅತಿಥಿಗಳಾದ ವಿದ್ಯಾ ಆರ್ ಗೌರಿ ಕಾರ್ಯದರ್ಶಿ ಸ್ಥಳೀಯ ಸಂಸ್ಥೆ ಪುತ್ತೂರು, ಇನ್ನೋರ್ವ ಅತಿಥಿ ಮೇಬಲ್ ಡಿಸೋಜ ಕೋಶಾಧಿಕಾರಿ ಸ್ಥಳೀಯ ಸಂಸ್ಥೆ ಪುತ್ತೂರು, ಸಾಂದೀಪನಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಗಳಾದ ಶ್ರೀ ಕೃಷ್ಣಪ್ರಸಾದ್ ಕೆದಿಲಾಯ, ಕೋಶಾಧಿಕಾರಿಗಳಾದ ಹರೀಶ್ ಪುತ್ತೂರಾಯ, ಆಡಳಿತ ಮಂಡಳಿ ಸದಸ್ಯರಾದ ಶ್ರೀ ವೆಂಕಟಕೃಷ್ಣ ಕೆ ಕೆ ಮುಖ್ಯೋಪಾಧ್ಯಾಯರಾದ ಪ್ರಸನ್ನ.ಕೆ ರವರು ಉಪಸ್ಥಿತರಿದ್ದರು.




ಮುಖ್ಯ ಅತಿಥಿ ಭರತ್ ರಾಜ್ ಕೆ ರವರು ಮಾತನಾಡುತ್ತಾ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಚಟುವಟಿಕೆಯಲ್ಲಿ ಹಲವಾರು ಕಾರ್ಯಕ್ರಮಗಳು, ಚಟುವಟಿಕೆಗಳನ್ನು ನಡೆಸಿಕೊಂಡು ಬಂದಿದೆ.ಅದರಲ್ಲಿ ಸ್ವಾತಂತ್ರ್ಯ ದಿನದಂದು ಬನ್ನಿ ದಳದ ಉದ್ಘಾಟನೆ ಮಾಡಲಾಗಿದ್ದು ತುಂಬಾ ಸಂತಸ ತಂದಿದೆ. ಸ್ಕೌಟ್ಸ್ ಗೈಡ್ಸ್ ವಿದ್ಯಾರ್ಥಿಗಳಿಗೆ ಹಲವಾರು ಉತ್ತಮ ಚಟುವಟಿಕೆಗಳನ್ನು ಈ ಶಾಲೆಯಲ್ಲಿ ನಡೆಸಿಕೊಂಡು ಬರುತ್ತಿದ್ದಾರೆ.ಸಂಸ್ಕಾರ, ಸಂಸ್ಕೃತಿ ಇರುವಂತಹ ಶಾಲೆ ಇದಾಗಿದ್ದು, ಈ ಸಾಂದೀಪನಿಯು ದೇವಸ್ಥಾನ ವಿದ್ದಂತೆ ಶ್ರೀ ಕೃಷ್ಣನ ಹೆಸರಿನಲ್ಲಿ ಉತ್ತಮವಾಗಿ ನಡೆಯುತ್ತಿರುವ ಶಾಲೆ. ಒಳ್ಳೆಯ ಮೌಲ್ಯಗಳನ್ನು ಕಲಿಸುತ್ತಿರುವ ಈ ಸಂಸ್ಥೆಗೆ ಬರಲು ಅವಕಾಶ ಮಾಡಿಕೊಟ್ಟಂತಹ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸುತ್ತಾ 80ನೇ ಸ್ವಾತಂತ್ರ್ಯ ದಿನಾಚರಣೆಗೆ ಶುಭಾಶಯಗಳನ್ನು ತಿಳಿಸಿದರು.
ಅತಿಥಿ ಗಳಾದ ವಿದ್ಯಾ ಆರ್ ಗೌರಿಯವರು ಮಾತನಾಡುತ್ತಾ ಒಂದು ಸಂಸ್ಥೆಯಲ್ಲಿ ಸ್ಕೌಟ್ ಗೈಡ್ ಮಕ್ಕಳ ಗುರುತಿಸುವಿಕೆ ವಿಶೇಷವಾಗಿದೆ. ಅದಕ್ಕೆ ಕಾರಣ ಅವರಿಗೆ ಕೊಡುವಂತಹ ಮೌಲ್ಯಧಾರಿತ ಚಟುವಟಿಕೆಯಿಂದ ಕೂಡಿದ ಶಿಕ್ಷಣವಾಗಿದೆ. ಸ್ವಾವಲಂಬಿಗಳಾಗಿ ಬದುಕುವ ಕಲೆಯನ್ನು ಈ ಸ್ಕೌಟ್ ನಿಂದ ಹಾಗೂ ನಗುಮುಖವನ್ನು ಬೆಳೆಸುವಂತಹ ಅವಕಾಶ ಈ ಬನ್ನಿ ದಳದ ಮೂಲಕ ಕಲಿಯಲು ಸಿಗುತ್ತದೆ ಎಂದರು.

ಇನ್ನೋರ್ವ ಅತಿಥಿಗಳಾದ ಮೇಬಲ್ ಡಿಸೋಜ ರವರು ಮಾತನಾಡುತ್ತಾ ಸೇವಾ ಮನೋಭಾವದಿಂದ ಕೂಡಿದ ಸಂಸ್ಥೆಯೆಂದರೆ ಅದು ಸ್ಕೌಟ್ ಗೈಡ್. ಕೆಲಸ ಕಾರ್ಯಗಳಿಗೆ ಸದಾ ಸಿದ್ಧರಾಗಿರುವುದು ಈ ದಳದ ಧ್ಯೇಯ ವಾಕ್ಯ ಎಂದರು. ದೀಪ ಪ್ರಜ್ವಲನೆ ಮಾಡುವುದರ ಮೂಲಕ ಬನ್ನಿ ದಳದ ಉದ್ಘಾಟನೆ ಮಾಡಿ ಮಾತನಾಡಿದ ಸ್ಥಾಪಕಾಧ್ಯಕ್ಷರುಗಳಾದ ಶ್ರೀ ಜಯರಾಮ ಕೆದಿಲಾಯ ಶಿಬರ ರವರು ಇಂದಿನ ಕಾರ್ಯಕ್ರಮ ಬಹಳ ಖುಷಿ ತಂದಿದೆ. ಒಳ್ಳೆಯ ಶಿಸ್ತಿನ ಉತ್ತಮ ವಿದ್ಯಾರ್ಥಿಗಳು ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಸ್ಕೌಟ್ ಮತ್ತು ಗೈಡ್ ಗಳಿಗೆ ಸಿಗುವಂತಾಗಲಿ ಎಂದರು.
ಸಂಸ್ಥೆಯ ಸ್ಕೌಟ್ ಮಾಸ್ಟರ್ ಮುರಳಿಕೃಷ್ಣ ರವರು ಎಲ್ಲರನ್ನು ಆದರದಿಂದ ಸ್ವಾಗತಿಸಿದರು. ಲೇಡಿ ಕಬ್ ಮಾಸ್ಟರ್ ಭವಿತಾ ಕಾರ್ಯಕ್ರಮ ನಿರೂಪಿಸಿದರು. ಶಾಲಾ ಸಹ ಶಿಕ್ಷಕಿ ಸುಕನ್ಯಾ ಧನ್ಯವಾದಗೈದರು.
ಸಂಸ್ಥೆಯ ಸ್ಕೌಟ್ಸ್ ಮಾಸ್ಟರ್ಸ್, ಗೈಡ್ ಕ್ಯಾಪ್ಟನ್ಸ್, ಪ್ಲಾಕ್ ಲೀಡರ್ಸ್, ಲೇಡಿ ಕಬ್ ಮಾಸ್ಟರ್ಸ್,ಬನ್ನಿ ದಳ ನಾಯಕರು ಸಹಕರಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಶಿಕ್ಷಕ ವೃಂದ, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.










