ಅಳಿಕೆ: ಮುಳಿಯ ಅಂಗನವಾಡಿಗೆ ನೂತನ ಧ್ವಜಸ್ತಂಭ ; ಉದ್ಘಾಟನೆ : ದಿ. ಚೆನ್ನಪ್ಪ ಪೂಜಾರಿ ದಂಪತಿ ಸ್ಮರಣಾರ್ಥ ಕೊಡುಗೆ

0

ಅಳಿಕೆ: ಗ್ರಾಮದ ಮುಳಿಯ ಎಂಬಲ್ಲಿನ ಅಂಗನವಾಡಿ ಕೇಂದ್ರಕ್ಕೆ ನೂತನವಾಗಿ ಧ್ವಜಸ್ತಂಭವನ್ನು ನಿರ್ಮಿಸಿ ಕೊಡಲಾಯಿತು. ಅಳಿಕೆ ಸಣ್ಣಗುತ್ತು ನಿವಾಸಿಗಳಾದ ದಿ. ಚೆನ್ನಪ್ಪ ಪೂಜಾರಿ ಮತ್ತು ಪತ್ನಿ ಶಿವಮ್ಮ ಇವರ ಸ್ಮರಣಾರ್ಥವಾಗಿ ಇವರ ಮಗ ಬಾಲಕೃಷ್ಣ ಪೂಜಾರಿ ಧ್ವಜಸ್ತಂಭವನ್ನು ನಿರ್ಮಿಸಿ ಕೊಟ್ಟಿದ್ದಾರೆ.

ಧ್ವಜಸ್ತಂಭದ ಉದ್ಘಾಟನೆಯನ್ನು ಅಳಿಕೆ ಗ್ರಾಮಪಂಚಾಯತ್ ಮಾಜಿ ಸದಸ್ಯ ಜಗದೀಶ್ ಶೆಟ್ಟಿ ಮುಳಿಯ ಮತ್ತು ಸಣ್ಣಗುತ್ತು ಬಾಲಕೃಷ್ಣ ಪೂಜಾರಿ ನೆರವೇರಿಸಿದರು. ಧ್ವಜಾರೋಹಣವನ್ನು ಅಳಿಕೆ ಗ್ರಾಮಪಂಚಾಯತ್ ಮಾಜಿ ಅಧ್ಯಕ್ಷ ಪದ್ಮನಾಭ ಪೂಜಾರಿ ಸಣ್ಣಗುತ್ತು ನೆರವೇರಿಸಿದರು.

ಅಂಗನವಾಡಿ ಕೇಂದ್ರದ ಬಾಲವಿಕಾಸ ಸಮಿತಿ ಮತ್ತು ಇಲಾಖಾ ವತಿಯಿಂದ ಬಾಲಕೃಷ್ಣ ಪೂಜಾರಿ ದಂಪತಿಯನ್ನು ಸ್ಮರಣಿಕೆ ಮತ್ತು ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ನೋಣಯ್ಯ ಪೂಜಾರಿ ಮತ್ತು ವೇದಾವತಿ ಸಣ್ಣಗುತ್ತು, ವಿಶ್ವಕಿರಣ್ ಸಣ್ಣಗುತ್ತು, ಅಳಿಕೆ ಪಂಚಾಯತ್ ಮಾಜಿ ಸದಸ್ಯರಾದ ಸುಕುಮಾರ, ಆನಂದ ಶೆಟ್ಟಿ ಮುಳಿಯ, ವೆಂಕಟಕೃಷ್ಣ ಶರ್ಮ ಮುಳಿಯ, ಬಾಲವಿಕಾಸ ಸಮಿತಿ ಸದಸ್ಯರು, ಸ್ತ್ರೀ ಶಕ್ತಿ ಸದಸ್ಯರು, ಹಳೆ ವಿದ್ಯಾರ್ಥಿಗಳು ಮತ್ತು ಪುಟಾಣಿಗಳು ಭಾಗವಹಿಸಿದರು. ಸ್ಥಳೀಯರಿಂದ ಸಿಹಿ ತಿಂಡಿ ಹಂಚಲಾಯಿತು. ಅಂಗನವಾಡಿ ಕಾರ್ಯಕರ್ತೆ ಭುವನೇಶ್ವರಿ ಧನ್ಯವಾದ ಅರ್ಪಿಸಿದರು.

LEAVE A REPLY

Please enter your comment!
Please enter your name here