ಕಾಣಿಯೂರು ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

0

ಕಾಣಿಯೂರು: ಕಾಣಿಯೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 80 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.

ಧ್ವಜಾರೋಹಣ ಕಾರ್ಯಕ್ರಮವನ್ನು ಶಾಲಾ ಎಸ್ ಡಿ ಎಂ ಸಿ ಉಪಾಧ್ಯಕ್ಷರಾದ ಯಶೋಧ ನೆರೋಲ್ತಡ್ಕ ರವರು ನೆರವೇರಿಸಿದರು. ಭಾರತ ಮಾತೆಯ ವೇಷಧಾರಿ ಹಾಗೂ ವಿವಿಧ ರಾಷ್ಟ್ರ ಭಕ್ತರ ವೇಷ ಭೂಷಣಗಳೊಂದಿಗೆ ಭವ್ಯ ಮೆರವಣಿಗೆ ನಡೆಯಿತು. ಬಳಿಕ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ಪರಮೇಶ್ವರ ಗೌಡ ಅನಿಲ ವಹಿಸಿದ್ದರು.

ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಕಾಣಿಯೂರು ಶ್ರೀ ದುರ್ಗಾ ನರ್ಸಿಂಗ್ ಹೋಮ್ ನ ವೈದ್ಯಾಧಿಕಾರಿ ಡಾ. ಚಂದ್ರಿಕಾ ಶಶಿಧರ್ ಪೆರುವಾಜೆ, ಎಲ್ ಕೆ ಜಿ ಮತ್ತು ಯು ಕೆ ಜಿ ಮಕ್ಕಳ ಪೋಷಕರ ಸಮಿತಿಯ ಅಧ್ಯಕ್ಷ ಕುಸುಮಾಧರ ಕೋಲ್ಪೆ ಚಾರ್ವಾಕ, ಎಸ್ ಡಿ ಎಂ ಸಿ ಉಪಾಧ್ಯಕ್ಷರಾದ ಯಶೋಧ ನೆರೋಲ್ತಡ್ಕ, ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ರಾಮಣ್ಣ ಗೌಡ ಮುಗರಂಜ, ಗೌರಿ ಮಾಡೋಡಿ, ಒಡಿಯೂರು ಕಾಣಿಯೂರು ಘಟ ಸಮಿತಿಯ ಅಧ್ಯಕ್ಷೆ ವಿಮಲ, ಶ್ರೀ ಲಕ್ಷ್ಮೀನರಸಿಂಹ ಯುವಕ ಮಂಡಲದ ಕೋಶಾಧಿಕಾರಿ ರಾಜೇಶ್ ಮಿಜೆ, ಶ್ರೀ ಲಕ್ಷ್ಮೀ ನರಸಿಂಹ ಭಜನಾ ಮಂಡಳಿಯ ಅಧ್ಯಕ್ಷ ಪುಟ್ಟಣ್ಣ ಗೌಡ ಮುಗರಂಜ, ಕಣ್ವರ್ಷಿ ಅಟೋ ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷ ಗಣೇಶ್ ಬೆದ್ರಾಜೆ ಹಿರಿಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ರವೀಂದ್ರ ಅನಿಲ, ಕಾಣಿಯೂರು ಅಂಗನವಾಡಿ ಕಾರ್ಯಕರ್ತೆ ಜಯಶ್ರೀ ನಾರ್ಯ, ಶಾಲಾ ವಿದ್ಯಾರ್ಥಿ ನಾಯಕಿ ಅಮೂಲ್ಯ ಬೈತಡ್ಕ , ಕಾಣಿಯೂರು ಜಾತ್ರೋತ್ಸವ ಸೇವಾ ಸಮಿತಿಯ ಅಧ್ಯಕ್ಷ ರಮೇಶ್ ಮಾಡೋಡಿ, ಉಪಸ್ಥಿತರಿದ್ದರು. ಶಾಲಾ ಎಸ್ ಡಿ ಎಂ ಸಿ ಮಾಜಿ ಅಧ್ಯಕ್ಷ ಧರ್ಮೇಂದ್ರ ಗೌಡ ಕಟ್ಟತ್ತಾರು ಅನಿಸಿಕೆ ವ್ಯಕ್ತ ಪಡಿಸಿದರು. ಕಾಣಿಯೂರು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಸುರೇಶ್ ಒಡಬಾಯಿ, ಪೂರ್ವ ಪ್ರಾಥಮಿಕ ಶಾಲಾ ಪೋಷಕರ ಸಂಘದ ಉಪಾಧ್ಯಕ್ಷರಾದ ಸವಿತ ನೂಜಾಡಿ ಉಪಸ್ಥಿತರಿದ್ದರು.

ಮಕ್ಕಳಿಂದ ದೇಶ ಭಕ್ತಿ ಗೀತೆ,ಭಾಷಣ ಮತ್ತು ತರಗತಿವಾರು ನೃತ್ಯಗಳು ನಡೆಯಿತು. ಎಲ್ ಕೆ ಜಿ ಮತ್ತು ಯು ಕೆ ಜಿ ತರಗತಿಗಳ ಮಕ್ಕಳ ಸಮವಸ್ತ್ರ ಕ್ಕೆ ಸಹಾಯಧನ ನೀಡಿದ ಡಾ ಚಂದ್ರಿಕಾ ಶಶಿಧರ್ ಪೆರುವಾಜೆ ಅವರನ್ನು ಗೌರವಿಸಲಾಯಿತು. ಕಾಣಿಯೂರು ಕ್ಲಸ್ಟರ್ ಸಿ ಆರ್ ಪಿ ನಾರಾಯಣರವರು ಭೇಟಿ ನೀಡಿದರು. ರಶ್ಮಿ ಹಿತಚಿಂತಕರ ಭಾಷಣ ಮಾಡಿದರು. ಶಾಲಾ ಅಧ್ಯಾಪಕರು ಸಹಕರಿಸಿದರು. ಶಾಲಾ ಮುಖ್ಯ ಗುರುಗಳಾದ ಶಶಿಕಲಾ ಸ್ವಾಗತಿಸಿದರು. ದೇವಕಿ ಪಿ ವಂದನಾರ್ಪಣೆ ಮಾಡಿದರು. ಸುಜಯ ಎಸ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here