ಕುರಿಯ ಸರಕಾರಿ ಶಾಲೆಯಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ

0

ಕುರಿಯ: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ ಕುರಿಯ ಇಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.

ಧ್ವಜಾರೋಹಣ ಕಾರ್ಯಕ್ರಮವನ್ನು ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಎಂ.ಎಸ್ ಅಬ್ದುಲ್ ಜಬ್ಬರ್ ನೆರವೇರಿಸಿ ಶುಭ ಹಾರೈಸಿದರು.ಧ್ವಜಾರೋಹಣ ಕಾರ್ಯಕ್ರಮದಲ್ಲಿ ಶಾಲಾ ಹಿತೈಷಿ ಬಳಗದ ಅಧ್ಯಕ್ಷ ಶಿವರಾಮ ಆಳ್ವ, ಗೌರವ ಅಧ್ಯಕ್ಷರಾದ ಬೂಡಿಯಾರ್ ರಾಧಾಕೃಷ್ಣ ರೈ ಮತ್ತು ಬೂಡಿಯಾರ್ ಪುರುಷೋತ್ತಮ ರೈ, ಪ್ರಧಾನ ಕಾರ್ಯದರ್ಶಿ ರಮೇಶ್ ರೈ ಡಿಂಬ್ರಿ, ಜೊತೆ ಕಾರ್ಯದರ್ಶಿ ಸನತ್ ರೈ, ಉಪಕಾರ್ಯದರ್ಶಿಗಳಾದ ಅರುಣ್ ಕುಮಾರ್ ರೈ ಡಿಂಬ್ರಿ ಮತ್ತು ಅಬೂಬಕ್ಕರ್ ಜಿಂದಗಿ, ಗೌರವ ಸದಸ್ಯರು, ಹಿರಿಯ ವಿದ್ಯಾರ್ಥಿಗಳು, ವಿದ್ಯಾಭಿಮಾನಿಗಳು, ಪೋಷಕರು ಉಪಸ್ಥಿತರಿದ್ದರು.

ನಂತರ ವಿದ್ಯಾರ್ಥಿಗಳಿಂದ ಪಥ ಸಂಚಲನ ಕಾರ್ಯಕ್ರಮ ನಡೆಯಿತು. ಕುರಿಯ ರಿಕ್ಷಾ ಸ್ಟ್ಯಾಂಡ್ ವರೆಗೆ ಮೆರವಣಿಗೆ ಮೂಲಕ ಮಕ್ಕಳನ್ನು ಕರೆದೊಯ್ಯಲಾಯಿತು.ಸಭಾ ಕಾರ್ಯಕ್ರಮ ಶಾಲಾ ಮಕ್ಕಳ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. ಸಭೆಯಲ್ಲಿ ಕುರಿಯ ಶಾಲಾ ಹಿತೈಷಿ ಬಳಗದಿಂದ ಮನವಿ ಪತ್ರ, ರಶೀದಿ ಪುಸ್ತಕ, ಸ್ಕ್ಯಾನರ್ ಬಿಡುಗಡೆ ಮಾಡಲಾಯಿತು.

ನಂತರ ಹಿತೈಷಿ ಬಳಗದಿಂದ ಮಕ್ಕಳಿಗೆ ಸ್ಪೋರ್ಟ್ಸ್ ಯುನಿಫಾರ್ಮ್, ಐಡಿ, ಬೆಲ್ಟ್ ಹಸ್ತಾಂತರ ಮಾಡಲಾಯಿತು.ಹಿತೈಷಿ ಬಳಗದ ಅಧ್ಯಕ್ಷ ಶಿವರಾಮ ಆಳ್ವ ಸ್ವಾತಂತ್ರ್ಯ ದಿನಾಚರಣೆಗೆ ಆಗಮಿಸಿದ ಎಲ್ಲರಿಗೂ ಉಪಹಾರದ ವ್ಯವಸ್ಥೆ ಮಾಡಿದರು. ಕೆಸರುಡೊಂಜಿ ದಿನ ಕಾರ್ಯಕ್ರಮ ಆಯೋಜಿಸಿ ಕೆಸರಿನ ಗದ್ದೆಯಲ್ಲಿ ನಡೆದ ಸ್ಪರ್ಧೆಗಳ ಸಂಪೂರ್ಣ ಬಹುಮಾನಗಳ ಪ್ರಾಯೋಜಕತ್ವವನ್ನು ಹಿತೈಷಿ ಬಳಗದ ಗೌರವಾಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ ವಹಿಸಿಕೊಂಡರು. ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ನಡೆಸಿದ ವಿವಿಧ ಸ್ಪರ್ಧೆಗಳ ಬಹುಮಾನಗಳ ಪ್ರಾಯೋಜಕತ್ವವನ್ನು ಬೂಡಿಯಾರ್ ಪುರುಷೋತ್ತಮ ರೈ ವಹಿಸಿಕೊಂಡರು.ಶಾಲಾ ಮುಖ್ಯ ಗುರುಗಳಾದ ಫೆಲ್ಸಿಟಾ ಡಿ ಕುನ್ಹಾ ಸ್ವಾಗತಿಸಿದರು. ಸಹ ಶಿಕ್ಷಕಿ ಕವಿತಾ ಕಾರ್ಯಕ್ರಮ ನಿರೂಪಿಸಿದರು. ಗೌರವ ಶಿಕ್ಷಕಿ ನಳಿನಿ ಕೆ ಧನ್ಯವಾದ ಅರ್ಪಿಸಿದರು. ಸಭಾ ಕಾರ್ಯಕ್ರಮದ ನಂತರ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ವೀಣಾ, ಯಜ್ಞ, ಹರ್ಷಿಯಾ ಕಾರ್ಯಕ್ರಮ ನಡೆಸಲು ಸಹಕರಿಸಿದರು.

ಕಾರ್ಯಕ್ರಮದಲ್ಲಿ ಹಿತೈಷಿ ಬಳಗದ ಪ್ರಧಾನ ಕಾರ್ಯದರ್ಶಿ ರಮೇಶ್ ರೈ ಡಿಂಬ್ರಿ, ಉಪಾಧ್ಯಕ್ಷರಾದ ಅರುಣ್ ರೈ ಡಿಂಬ್ರಿ ಮತ್ತು ಅಬೂಬಕ್ಕರ್ ಜಿಂದಗಿ, ಜೊತೆ ಕಾರ್ಯದರ್ಶಿ ಸನತ್ ರೈ, ಎಸ್.ಡಿ.ಎಂ.ಸಿ ಸದಸ್ಯರು, ಹಳೆ ವಿದ್ಯಾರ್ಥಿಗಳು, ಮಕ್ಕಳ ಪೋಷಕರು, ಊರಿನ ಹಿರಿಯರು, ಹಿತೈಷಿ ಬಳಗದ ಪದಾಧಿಕಾರಿಗಳು ಉಪಸ್ಥಿತರಿದ್ದು ಶುಭಾಶಯಗಳನ್ನು ಕೋರಿದರು.

ಎಸ್.ಡಿ.ಎಂ.ಸಿ ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಸ್ವಾತಂತ್ರ್ಯ ದಿನಾಚರಣೆಗೆ ಆರ್ಥಿಕ ಧನ ಸಹಾಯದೊಂದಿಗೆ ಪಾಯಸದ ವ್ಯವಸ್ಥೆ ಮಾಡಿದರು. ರಮೇಶ್ ರೈ ಡಿಂಬ್ರಿ, ಗ್ರಾಮ ಪಂಚಾಯತ್ ಆರ್ಯಾಪು, ಆಟೋ ಚಾಲಕರು ಕುರಿಯ, ಗಗನ್ ಮತ್ತು ಧನ್ವಿಕ್ ಪೋಷಕರು, ಸನತ್ ರೈ, ಶಮೀರ್ ಮತ್ತು ಅಶ್ರಫ್, ರಾಮಕೃಷ್ಣ ಡಿಂಬ್ರಿ, ಕೆ.ಪಿ.ವಿಠ್ಠಲ ಶೆಟ್ಟಿ ಕೊಡ್ಲಾರು, ಬೂಡಿಯಾರ್ ಪುರುಷೋತ್ತಮ ರೈ, ಅಶ್ವಥ್ ಅಂಗಡಿ ಕುರಿಯ, ಸೂಫಿ ಕುರಿಯ, ಜಗದೀಶ್ ಪೂಜಾರಿ ಕುರಿಯ ಇವರು ಮಕ್ಕಳಿಗೆ ರುಚಿಕರವಾದ ಸಿಹಿಯನ್ನು ನೀಡಿದರು.

LEAVE A REPLY

Please enter your comment!
Please enter your name here