ಮೇನಾಲದಲ್ಲಿ ಸ್ವಾತಂತ್ರ್ಯ ದಿನಾಚರಣೆ

0

ಪುತ್ತೂರು: ದ. ಕ. ಜಿ ಪಂ. ಉ. ಹಿ. ಪ್ರಾಥಮಿಕ ಶಾಲೆ ಮೇನಾಲ ಆವರಣದಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅತ್ಯಂತ ವಿಜೃಂಭಣೆ ಮತ್ತು ಶ್ರದ್ಧಾ-ಭಕ್ತಿಯಿಂದ ಆಚರಿಸಲಾಯಿತು.


​ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಎಸ್. ಡಿ. ಎಂ. ಸಿ ಅಧ್ಯಕ್ಷರಾದ ಅಬ್ದುಲ್ಲಾ ಮೆಣಸಿನಕಾನ ಅವರು ಧ್ವಜಾರೋಹಣ ನೆರವೇರಿಸಿ ಹಿರಿಯರು ಗಳಿಸಿಕೊಟ್ಟ ಸ್ವಾತಂತ್ರ್ಯ ವನ್ನು ಉಳಿಸಿ ಬೆಳೆಸುವುದು ವಿದ್ಯಾರ್ಥಿಗಳ ಕರ್ತವ್ಯ ಎಂದು ನುಡಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ರಾಮ ಮೇನಾಲ ಅವರು, “ನಮ್ಮ ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಲು ತ್ಯಾಗ-ಬಲಿದಾನ ನೀಡಿದ ಮಹಾನಾಯಕರನ್ನು ಸ್ಮರಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ. ದೇಶದ ಪ್ರಗತಿಗೆ ನಾವೆಲ್ಲರೂ ಒಗ್ಗಟ್ಟಿನಿಂದ ಶ್ರಮಿಸಬೇಕು,” ಎಂದು ಕರೆ ನೀಡಿದರು.
​ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳು ದೇಶಪ್ರೇಮದ ಪೋಷಣೆ ಕೂಗಿದರು.


​ಕಾರ್ಯಕ್ರಮದಲ್ಲಿ ಸಂಸ್ಥೆಯ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಹಾರೀಸ್, ಸ್ಥಾಪಕಾಧ್ಯಕ್ಷರಾದ ಬಾಲಕೃಷ್ಣ ರೈ ಹಾಗೂ ಸರ್ವ ಸದಸ್ಯರು, ಪಂಚಾಯತ್ ಮಾಜಿ ಸದಸ್ಯರಾದ ವೆಂಕಪ್ಪ ನಾಯ್ಕ, ಮಾಜಿ SDMC ಅಧ್ಯಕ್ಷರುಗಳಾದ ಕೆ ಎಂ ಮಹಮ್ಮದ್ ಮತ್ತು ಸುರೇಶ್, ಮಧುರಾ ಶಾಲೆಯ ನಿರ್ದೇಶಕರಾದ ಅಬ್ದುಲ್ಲ ರಹಿಮಾನ್ ಹಾಜಿ, ಪೋಷಕರು, ಎಸ್. ಡಿ. ಎಂ. ಸಿ ಸದಸ್ಯರು, ಊರ ವಿದ್ಯಾಭಿಮಾನಿಗಳು, ಶಿಕ್ಷಕರು, ವಿದ್ಯಾರ್ಥಿಗಳು, ಅಕ್ಷರ ದಾಸೋಹ ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ಭಾಗವಹಿಸಿದ್ದ ಎಲ್ಲರಿಗೂ ಮಲ್ಲ ಮೇನಾಲ, ಉದ್ಯಮಿ ಕೃಷ್ಣ ಪ್ರಸಾದ್ ಕೊಂಬೆಟ್ಟು, SSF ಮೇನಾಲ, ಅಶ್ರಫ್, ಕೆ ಎಂ ಮಹಮ್ಮದ್ ಮೊದಲಾದವರು ಪ್ರಾಯೋಜಿಸಿದ ಸಿಹಿತಿಂಡಿ ವಿತರಿಸಲಾಯಿತು.

ಮುಖ್ಯ ಗುರುಗಳಾದ ರಾಜೀವಿ ಎ ನೆರೆದಿದ್ದ ಸರ್ವರನ್ನೂ ಸ್ವಾಗತಿಸಿದರು. ಶಿಕ್ಷಕಿ ಶಹೀನಾ ಬೇಗಂ ಧನ್ಯವಾದ ಸಮರ್ಥಿಸಿದರು. ಶಿಕ್ಷಕಿ ಆಶಾಲತಾ ಎ ಕಾರ್ಯಕ್ರಮ ನಿರೂಪಿಸಿದರು. ಎಲ್ಲಾ ಶಿಕ್ಷಕಿಯರು ಸಹಕರಿಸಿದರು.

LEAVE A REPLY

Please enter your comment!
Please enter your name here