







ಪುತ್ತೂರು : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಬಿ.ಸಿ.ಟ್ರಸ್ಟ್ ಪುತ್ತೂರು , ಕೊಳ್ತಿಗೆ, ಪೆರ್ಲಂಪಾಡಿ, ಮೊಗಪ್ಪೆ ಒಕ್ಕೂಟ ಹಾಗೂ ಕೆಯ್ಯೂರು ವಲಯ ಇದರ ಸಂಯುಕ್ತ ಆಶ್ರಯದಲ್ಲಿ ಶ್ರೀ ಕ್ಷೇ.ಧ.ಗ್ರಾ.ಯೋಜನೆಯ ಕೊಳ್ತಿಗೆ, ಪೆರ್ಲಂಪಾಡಿ, ಮೊಗಪ್ಪೆ ಒಕ್ಕೂಟಗಳ ಪದಗ್ರಹಣ ಹಾಗೂ ಆಟಿಡೊಂಜಿ ದಿನ ಕಾರ್ಯಕ್ರಮ ಆ.16ರಂದು ಪೆರ್ಲಂಪಾಡಿ ಶ್ರೀ ಷಣ್ಮುಖದೇವ ಪ್ರೌಢಶಾಲೆಯಲ್ಲಿ ನಡೆಯಿತು.


ಬೆಳಿಗ್ಗೆ ಮಾಲೆತ್ತೋಡಿ ಶ್ರೀ ಮಹಮ್ಮಾಯಿ ಭಜನಾ ತಂಡದಿಂದ ಭಜನೆ, ಬಾಯಂಬಾಡಿ ಶ್ರೀ ಷಣ್ಮುಖ ಭಜನಾ ಮಂಡಳಿಯಿಂದ ಕುಣಿತ ಭಜನೆ ನಡೆಯಿತು.



ಒಕ್ಕೂಟಗಳ ಪದಗ್ರಹಣ ಸಮಾರಂಭ
ಪದಗ್ರಹಣ ಸಮಾರಂಭವನ್ನು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಜಿಲ್ಲಾಧ್ಯಕ್ಷ ಪದ್ಮನಾಭ ಶೆಟ್ಟಿ ಅವರು ಕಲಶೆಗೆ ಭತ್ತ ಸುರಿಯುವ ಮೂಲಕ ಉದ್ಘಾಟಿಸಿದರು.
ಶ್ರೀ ಕ್ಷೇ.ಧ.ಗ್ರಾ.ಯೋ.ಯ ಪ್ರಗತಿ ಬಂಧು- ಸ್ವಸಹಾಯ ಸಂಘಗಳ ಕೇಂದ್ರ ಒಕ್ಕೂಟದ ಅಧ್ಯಕ್ಷ ಉದಯ ಕುಮಾರ್ ಜಿ.ಕೆ.ಅಧ್ಯಕ್ಷತೆ ವಹಿಸಿದ್ದರು.
ಅತಿಥಿಗಳಾಗಿ ಶ್ರೀ ಕ್ಷೇ.ಧ.ಗ್ರಾ.ಯೋ.ಯ ಜಿಲ್ಲಾ ನಿರ್ದೇಶಕ ಬಾಬು ನಾಯ್ಕ, ತಾಲೂಕು ಯೋಜನಾಧಿಕಾರಿ ಶಶಿಧರ್, ತೆಂಕಿಲ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಮುಖ್ಯಗುರು ಆಶಾ ಬೆಳ್ಳಾರೆ, ಜನಜಾಗೃತಿ ವೇದಿಕೆಯ ಕೆಯ್ಯೂರು ವಲಯಾಧ್ಯಕ್ಷ ಅಬ್ದುಲ್ ಖಾದರ್ ಮೇರ್ಲ ಉಪಸ್ಥಿತರಿದ್ದರು.
ಯೋಜನೆಯ ಮಂಜೂರಾತಿ ಪತ್ರವನ್ನು ಪೆರ್ಲಂಪಾಡಿ ಶ್ರೀ ಷಣ್ಮುಖದೇವ ಪ್ರೌಢಶಾಲೆಯ ಅಧ್ಯಕ್ಷ ತೀರ್ಥಾನಂದ ದುಗ್ಗಳ ,ಮುಖ್ಯಗುರು ಕೃಷ್ಣವೇಣಿ ವಿತರಿಸಿದರು.
ವೇದಿಕೆಯಲ್ಲಿ ಕೊಳ್ತಿಗೆ ಒಕ್ಕೂಟದ ನಿಕಟ ಪೂರ್ವ ಉಪಾಧ್ಯಕ್ಷೆ ಭವ್ಯ,ಕಾರ್ಯದರ್ಶಿ ಹೇಮಾವತಿ ಕುರ್ಮಕೋಡಿ,ಜತೆ ಕಾರ್ಯದರ್ಶಿ ವೀಣಾ ಕೋಡಂಬು,ನೂತನ ಅಧ್ಯಕ್ಷ ಯಶೋಧ ಕುಮಾರ್ ,ಉಪಾಧ್ಯಕ್ಷ ವಸಂತ ಕೆರೆಮೂಲೆ,ಕಾರ್ಯದರ್ಶಿ ವೆಂಕಟರಮಣ ಆಚಾರ್ಯ, ಕೋಶಾಧಿಕಾರಿ ಶಿವರಾಮ ಪೂಜಾರಿ, ಪೆರ್ಲಂಪಾಡಿ ಒಕ್ಕೂಟದ ನಿಕಟ ಪೂರ್ವ ಅಧ್ಯಕ್ಷ ತಿಮ್ಮಪ್ಪ ಗೌಡ ದುಗ್ಗಳ, ಉಪಾಧ್ಯಕ್ಷೆ ಚಂದ್ರಾವತಿ ಕುಂಟಿಕಾನ,ಕಾರ್ಯದರ್ಶಿ ಚಂದ್ರಾವತಿ ಕೆ.ವಿ.,ಜತೆ ಕಾರ್ಯದರ್ಶಿ ಯಶೋಧರ ಮಾಲೆತ್ತೋಡಿ,ಕೋಶಾಧಿಕಾರಿ ಪುಷ್ಪಾವತಿ ಪೆರ್ಲಂಪಾಡಿ ,ನೂತನ ಅಧ್ಯಕ್ಷ ಪ್ರಶಾಂತ್ ದುಗ್ಗಳ,ಉಪಾಧ್ಯಕ್ಷ ಶ್ರೀಧರ ಪೂಜಾರಿ, ಕಾರ್ಯದರ್ಶಿ ಶ್ರೀಲಲಿತ,ಜತೆ ಕಾರ್ಯದರ್ಶಿ ಮಾಧವ,ಕೋಶಾಧಿಕಾರಿ ಮಂಜುಳಾ,ಮೊಗಪ್ಪೆ ಒಕ್ಕೂಟದ ನಿಕಟ ಪೂರ್ವ ಅಧ್ಯಕ್ಷ ವೇದಾವತಿ ಎ.ಬಿ., ಉಪಾಧ್ಯಕ್ಷ ಮುತ್ತಪ್ಪ ಗೌಡ,ಕಾರ್ಯದರ್ಶಿ ರಾಮ ಪಿ., ಜತೆ ಕಾರ್ಯದರ್ಶಿ ಸುನೀಲ್ ಕುಮಾರ್, ಕೋಶಾಧಿಕಾರಿ ರುಕ್ಮಯ್ಯ ಗೌಡ,ನೂತನ ಅಧ್ಯಕ್ಷ ಕುಸುಮಾಧರ ಪಾಂಬಾರು,ಉಪಾಧ್ಯಕ್ಷ ರವಿ ಪಾಂಬಾರು,ಕಾರ್ಯದರ್ಶಿ ಪವಿತ್ರ, ಜತೆ ಕಾರ್ಯದರ್ಶಿ ವೇದಾವತಿ ಕೆ., ಕೋಶಾಧಿಕಾರಿ ಜಯಪ್ರದ ಉಪಸ್ಥಿತರಿದ್ದರು.
ಕುಸುಮಾಧರ ಪಾಂಬಾರು ಸ್ವಾಗತಿಸಿದರು. ಗಾಯತ್ರಿ ವರದಿ ಮಂಡಿಸಿದರು.ಕೆಯ್ಯೂರು ವಲಯ ಮೇಲ್ವಿಚಾರಕಿ ಶುಭವತಿ ಕಾರ್ಯಕ್ರಮ ನಿರೂಪಿಸಿದರು.
ಈ ಸಂದರ್ಭದಲ್ಲಿ ಆಟಿ ತಿಂಗಳ 35 ಬಗೆಯ ವಿಶೇಷ ಆಹಾರಗಳ ಪರಿಚಯ ಹಾಗೂ ಭೋಜನ ನಡೆಯಿತು. ಮಧ್ಯಾಹ್ನ 2 ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.










