







ಪುತ್ತೂರು:ಇತ್ತೀಚೆಗೆ ಪೊಲೀಸ್ ಇಲಾಖಾ ಕರ್ತವ್ಯದಿಂದ ಸೇವಾ ನಿವೃತ್ತಿಗೊಂಡ ಎ.ಎಸ್.ಐ.ಗಳಾದ ಚಂದ್ರ ಹಾಗೂ ಪರಮೇಶ್ವರ್ ಅವರಿಗೆ ಸಂಪ್ಯ ಕಂಬಳತ್ತಡ್ಡ ಸುಬ್ರಾಯ ಆಚಾರ್ಯರವರ ಮನೆಯಲ್ಲಿ ಸನ್ಮಾನಿಸಿ, ಮುಂದಿನ ನಿವೃತ್ತ ಜೀವನಕ್ಕೆ ಶುಭ ಹಾರೈಸಲಾಯಿತು.


ವಿವಿಧ ಕಡೆಗಳಲ್ಲಿ ಸೇವೆ ಸಲ್ಲಿಸಿ ಪುತ್ತೂರು ನಗರ ಪೊಲೀಸ್ ಠಾಣೆಯಿಂದ ಎ.ಎಸ್.ಐ. ಚಂದ್ರ ಮತ್ತು ಸಂಪ್ಯ ಪೊಲೀಸ್ ಠಾಣೆಯಿಂದ ಎ.ಎಸ್.ಐ. ಪರಮೇಶ್ವರ್ ಹಾಗೂ ಅವರ ಪತ್ನಿ ಧನಲಕ್ಷ್ಮೀ ಆಜಡ್ಕರವರೇ ನಿವೃತ್ತ ಸನ್ಮಾನ ಪಡೆದುಕೊಂಡವರಾಗಿದ್ದಾರೆ. ಈ ಸಂದರ್ಭದಲ್ಲಿ ಕಾವು ಹೇಮನಾಥ ಶೆಟ್ಟಿ, ಅನಿತಾ ಹೇಮನಾಥ ಶೆಟ್ಟಿ ದಂಪತಿ ಹಾಗೂ ಡಾ. ರಂಜಿತಾ ಶೆಟ್ಟಿ ಆಗಮಿಸಿ ಈರ್ವರು ನಿವೃತ್ತರಿಗೆ ನಿವೃತ್ತ ಜೀವನಕ್ಕೆ ಶುಭ ಹಾರೈಸಿದರು.




ಸಂಪ್ಯ ಅಕ್ಷಯ ಜ್ಯುವೆಲ್ಲರ್ಸ್’ನ ಸುಬ್ರಾಯ ಆಚಾರ್ಯ ಆರ್ಯಾಪು, ರವಿಚಂದ್ರ ಆಚಾರ್ಯ ಸಂಪ್ಯ, ಆಶಾ ರವಿಚಂದ್ರ ಆಚಾರ್ಯ, ಅಕ್ಷಯ್, ಆಶ್ರಯ್, ಆದಿತ್ಯ, ಲತಾ ಶ್ರೀಧರ್ ಆಚಾರ್ಯ ಶಿವ ಜ್ಯುವೆಲ್ಲರ್ಸ್ ಕೋರ್ಟ್ ರಸ್ತೆ, ಹೆಡ್’ಕಾನ್ಸ್’ಟೇಬಲ್’ಗಳಾದ ಸುಬ್ರಹ್ಮಣ್ಯ, ಪ್ರವೀಣ್ ಶೆಟ್ಟಿ, ಬಬಿತ್ ಶೆಟ್ಟಿ, ಪ್ರವೀಣ್ ಗೌಡ, ಹರೀಶ್ ಪ್ಲಂಬರ್ ಮೊಟ್ಟೆತ್ತಡ್ಕ, ವಿಶಾಲಾ ವಾಧಿರಾಜ ಆಚಾರ್ಯ ಕಾರ್ಕಳ ಬೈಲೂರು, ಗಣೇಶ್ ಆಚಾರ್ಯ ಕುಂಡಡ್ಕ, ಪ್ರಮೀಳಾ ಸೀತಾರಾಮ ಶೆಟ್ಟಿ ಕಂಬಳತ್ತಡ್ಡ, ಸುಧಾಕರ್ ಆಚಾರ್ಯ ದೇವಕಜೆ ಅಕ್ಷಯ ಜ್ಯುವೆಲ್ಲರ್ಸ್ ಸಂಪ್ಯ, ಪ್ರದೀಪ್ ಆಚಾರ್ಯ ಕೊಲ್ಯ, ಶ್ವೇತಾ ಪ್ರದೀಪ್ ಆಚಾರ್ಯ, ಹರೀಶ್ ಆಚಾರ್ಯ ಅಕ್ಷಯ ಜ್ಯುವೆಲ್ಲರ್ಸ್ ಸಂಪ್ಯ, ತೃಪ್ತಿ ಜ್ಯುವೆಲ್ಲರ್ಸ್ ಮಾಲಕ ನಾಗೇಶ್ ಆಚಾರ್ಯ, ಜಗದೀಶ್ ಆಚಾರ್ಯ ಕೋಡಿಂಬಾಡಿ, ಗಾಯತ್ರಿ ಮ್ಯೂಸಿಕಲ್’ನ ಸುಶಾಂತ್ ಆಚಾರ್ಯ, ಸಂದೀಪ್ ಕೊಲ್ಯ, ಮೆಸ್ಕಾಂ ಲೈನ್ ಮ್ಯಾನ್ ಚಂದ್ರ, ಲಿಂಗಪ್ಪ ಗೌಡ ಕೊಲ್ಯ, ಶೀನಪ್ಪ ಗೌಡ ಬೈಲಾಡಿ ಮೊದಲಾದವರು ಉಪಸ್ಥಿತರಿದ್ದರು. ಆರ್ಯಾಪು ಗ್ರಾಪಂ ಮಾಜಿ ಸದಸ್ಯ ನೇಮಾಕ್ಷ ಸುವರ್ಣ ಕಾರ್ಯಕ್ರಮ ನಿರೂಪಿಸಿದರು.










