ಉದ್ಯಮಿ ತಿರುಮಲೇಶ್ವರ ಗೌಡರಿಂದ ನೇರ್ಲ ಶಾಲಾ ವಿದ್ಯಾರ್ಥಿಗಳಿಗೆ ಸಮವಸ್ತ್ರ ಕೊಡುಗೆ

0


ನೆಲ್ಯಾಡಿ: ಯುವ ಉದ್ಯಮಿ, ಮಂಗಳೂರಿನ ತಿರುಮಲ ಎಂಟರ್‌ಪ್ರೈಸಸ್‌ನ ಮಾಲಕ ತಿರುಮಲೇಶ್ವರ ಗೌಡ ಬಿಜೇರು ಅವರು ಇಚ್ಲಂಪಾಡಿ ಗ್ರಾಮದ ನೇರ್ಲ ಸರ್ಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯ ಎಲ್‌ಕೆಜಿ ಮತ್ತು ಯುಕೆಜಿ ಮಕ್ಕಳಿಗೆ ಎರಡು ಜೊತೆ ಸಮವಸ್ತ್ರವನ್ನು ಕೊಡುಗೆಯಾಗಿ ನೀಡಿದರು.


ತಿರುಮಲೇಶ್ವರ ಗೌಡ ಅವರು ನೇರ್ಲ ಶಾಲೆಯ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರೂ ಆಗಿದ್ದಾರೆ. ಎಸ್‌ಡಿಎಂಸಿ ಹಾಗೂ ಶಾಲಾ ಶಿಕ್ಷಕರು ದಾನಿಗಳನ್ನು ಅಭಿನಂದಿಸಿದರು.

LEAVE A REPLY

Please enter your comment!
Please enter your name here