







ಉಪ್ಪಿನಂಗಡಿ: ಅಂಬೊಟ್ಟುವಿನ ಅಲ್ ಮದರಸತುಲ್ ಮುಖದ್ದಾಸ್‌ನಲ್ಲಿ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣವನ್ನು ಇಳಂತಿಲ ಗ್ರಾ.ಪಂ. ಮಾಜಿ ಅಧ್ಯಕ್ಷ ಹಾಜಿ ಯೂಸುಫ್ ಹಾಜಿ ನೆರವೇರಿಸಿದರು.


ಈ ಸಂದರ್ಭ ಮದರಸದ ಮುಖ್ಯ ಗುರು ಝಕರಿಯ ಮುಸ್ಲಿಯಾರ್ ಆತೂರು, ಪ್ರಧಾನ ಕಾರ್ಯದರ್ಶಿ ಅಶ್ರಫ್ ಆಂಬೊಟ್ಟು, ಹೈದರ್ ಪವಿತ್ರನಗರ, ಯು.ಟಿ. ಫಯಾಜ್ ಹಮದ್, ಸಲೀಮ್ ಇಸಾಕ್ ಹಾಗೂ ಅಲ್ ಮದರಸತುಲ್ ಮುಖದ್ದಾಸ್ ಕಮಿಟಿಯ ಸರ್ವ ಸದಸ್ಯರು, ಶಂಸುಲ್ ಉಲಮಾ ಯಂಗ್ ಮೆನ್ಸ್‌ನ ಅಧ್ಯಕ್ಷರು, ಸದಸ್ಯರು ಉಪಸ್ಥಿತರಿದ್ದರು.













