ಕಲ್ಪಡ ಸ್ನೇಹಿತರ ಬಳಗದ ದಶಮ ಸಂಭ್ರಮದ ಅಂಗವಾಗಿ ಶ್ರದ್ಧಾ ಕೇಂದ್ರ ಸ್ವಚ್ಛತಾ ಕಾರ್ಯಕ್ರಮ

0

ಕಾಣಿಯೂರು: ಸ್ನೇಹಿತರ ಬಳಗ ಕಲ್ಪಡ ಕೊಡಿಯಾಲ ಇದರ ದಶಮ ಸಂಭ್ರಮದ ಅಂಗವಾಗಿ ಇಂದು ನಡೆದ ಶ್ರದ್ಧಾ ಕೇಂದ್ರ ಸ್ವಚ್ಛತಾ ಕಾರ್ಯಕ್ರಮವು ಶ್ರೀ ಉಳ್ಳಾಕುಲು ದೈವಸ್ಥಾನ, ಕಲ್ಪಡ ಪರಮಾಲ್ಯದಲ್ಲಿ ನಡೆಯಿತು.


ಈ ಕಾರ್ಯಕ್ರಮವು ಶ್ರೀ ಉಳ್ಳಾಕುಲು ದೈವಸ್ಥಾನದ ಆಡಳಿತ ಮೊಕ್ತೇಸರರಾದ ಶ್ರೀ ಶಿವರಾಮ ಉಪಾಧ್ಯಾಯ ಹಾಗೂ ಸ್ನೇಹಿತರ ಬಳಗದ ಅಧ್ಯಕ್ಷರಾದ ಶ್ರೀ ಸುರೇಶ್ ಗುತ್ತು ಅವರ ನೇತೃತ್ವದಲ್ಲಿ ನಡೆಯಿತು.


ಕಾರ್ಯಕ್ರಮದಲ್ಲಿ ಕೊಡಿಯಾಲ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಹರ್ಷನ್ ಕೆ.ಟಿ., ಶ್ರೀ ಉಳ್ಳಾಕುಲು ದೈವಸ್ಥಾನದ ಮಾಜಿ ಅಧ್ಯಕ್ಷರಾದ ಆನಂದ ಗೌಡ, ಉಪಾಧ್ಯಕ್ಷರಾದ ಯುವರಾಜ್ ಕೆ,ಶ್ರೀ ಕ್ಷೇತ್ರ ಗ್ರಾಮಾಭಿವೃದ್ಧಿ ಯೋಜನೆಯ ಅಧ್ಯಕ್ಷರಾದ ಪ್ರಸಾದ್ ಕೆ. ಹಾಗೂ ಸೇವಾ ಪ್ರತಿನಿಧಿಯಾದ ಹರಿಣಿ ಕೆ. ಅವರು ಉಪಸ್ಥಿತರಿದ್ದು ಸಹಕರಿಸಿದರು.
ಬಳಗದ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರಾದ ಲೋಕೇಶ್ ಕೆ.ವಿ., , ಗಣೇಶ್ ಕೆ., ಸುಜಿತ್, ಬಾಲಕೃಷ್ಣ, ಧರ್ಮಪಾಲ, ತಿಮ್ಮಪ್ಪ, ಜಗದೀಶ್, ಗಿರೀಶ್, ಹರೀಶ್, ವಿಠಲ ಪೋಲಜೆ, ಜೀವನ್, ರೇವಂತ್, ಚೇತನ್, ರಮೇಶ್ ಹೊನ್ನಪ್ಪ, ಪ್ರೀತೇಶ್, ಜಿತೇಶ್, ಮನೋಹರ, ನವೀನ್ ಕೊಡೆಂಕಿರಿ, ಕಾಂತಪ್ಪ ಗೌಡ, ತಾರಾನಾಥ ಗೌಡ, ರೋಶನ್, ರಜನಿ, ಮೋಹಿನಿ, ದೇವಕಿ ಹಾಗೂ ಸರೋಜ ಅವರು ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿ ಸಹಕರಿಸಿದರು.


ಕಾರ್ಯಕ್ರಮದ ಪ್ರಮುಖ ಸೇವಾ ಕಾರ್ಯಗಳು:
ಶ್ರೀ ಉಳ್ಳಾಕುಲು ದೈವಸ್ಥಾನ, ಕಲ್ಪಡ ಪರಮಾಲ್ಯದಲ್ಲಿ ದೈವಸ್ಥಾನದ ಸುತ್ತಮುತ್ತ ಸ್ವಚ್ಛತಾ ಕಾರ್ಯ ನಡೆಸಿ, ಅಂಗಣದ ಒಳಭಾಗದಲ್ಲಿ ಬಳಗದ ವತಿಯಿಂದ ಮ್ಯಾಟ್ ಅಳವಡಿಸಲಾಯಿತು.
ಮಾಲೆತ್ತಾರು ಹೋಗುವ ಕುರೋಡಿ ರಸ್ತೆಯಲ್ಲಿ ಶ್ರಮದಾನ ನಡೆಸಲಾಯಿತು. ಕಲ್ಪಡ–ಅಂಗಾರಡ್ಕ ರಸ್ತೆಯಲ್ಲಿ ಶ್ರಮದಾನ ನಡೆಸಲಾಯಿತು.
ಬೆಳಗ್ಗೆಯಿಂದ ಸಂಜೆಯವರೆಗೆ ನಡೆದ ವಿವಿಧ ಶ್ರಮದಾನ ದಲ್ಲಿ ಉತ್ಸಹದಿಂದ ಸಹಕರಿಸಿದರು.

LEAVE A REPLY

Please enter your comment!
Please enter your name here