







ಪುತ್ತೂರು: ಪುತ್ತೂರಿನ ಎತ್ತರದ ಬೆಟ್ಟ ಎನಿಸಿದ ಬೀರಮಲೆ ಬೆಟ್ಟದಲ್ಲಿ ಬೀರಮಲೆ ಬೆಟ್ಟ ಅಭಿವೃದ್ಧಿ ಯೋಜನೆ ವತಿಯಿಂದ ಆ.15 ರಂದು ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು.


ಬೀರಮಲೆ ಬೆಟ್ಟದ ಮಹಾ ಪೋಷಕರಾದ ದುಗ್ಗಮ್ಮ ದೇರಣ್ಣ ಶೆಟ್ಟಿ ಸಭಾಭವನದ ಆಡಳಿತ ಪಾಲುದಾರ ದೀಪಕ್ ಶೆಟ್ಟಿರವರು ಧ್ವಜಾರೋಹಣವನ್ನು ನೆರವೇರಿಸಿದರು. ಬೀರಮಲೆ ಬೆಟ್ಟ ಅಭಿವೃದ್ಧಿ ಯೋಜನೆಯ ಅಧ್ಯಕ್ಷ ಎ.ಜೆ ರೈರವರು ಸ್ವಾತಂತ್ರ್ಯ ದಿನಾಚರಣೆ ಮಹತ್ವದ ಕುರಿತು ಮಾತನಾಡಿದರು. ಬೀರಮಲೆ ಬೆಟ್ಟ ಅಭಿವೃದ್ಧಿ ಯೋಜನೆಯ ಸದಸ್ಯರಾದ ಡಾ.ರವೀಂದ್ರ ಹಾಗೂ ಕೃಷ್ಣ ಪ್ರಸಾದ್ ಆಳ್ವ ಸಂದರ್ಭೋಚಿತವಾಗಿ ಮಾತನಾಡಿದರು.



ಬೀರಮಲೆ ಬೆಟ್ಟವನ್ನು ಉಳಿಸಿ ಬೆಳೆಸಲು ಕಾರಣಕರ್ತರಾದ ದಿ.ನಿವೃತ್ತ ತಹಶಿಲ್ದಾರ್ ಸಿ.ಎಚ್ ಕೋಚಣ್ಣ ರೈರವರ ಕೊಡುಗೆಯನ್ನು ಈ ಸಂದರ್ಭದಲ್ಲಿ ಸ್ಮರಿಸಲಾಯಿತು. ಬೀರಮಲೆ ಯುವಕ ಮಂಡಳ ಅಧ್ಯಕ್ಷ ಹಾಗೂ ಬೀರಮಲೆ ಅಭಿವೃದ್ಧಿ ಯೋಜನೆ ಸಮಿತಿ ಕಾರ್ಯದರ್ಶಿ ನಿತಿನ್ ಪಕ್ಕಳ ವಂದಿಸಿದರು. ಬೀರಮಲೆ ಬೆಟ್ಟದ ಸದಸ್ಯರು, ಬೀರಮಲೆ ಯುವಕ ಮಂಡಲದ ಸದಸ್ಯರು, ಬೀರಮಲೆ ಹಾಸ್ಟೆಲ್ ಮಕ್ಕಳು ಭಾಗವಹಿಸಿದ್ದರು. ರೋಟರಿ ಕ್ಲಬ್ ಪುತ್ತೂರು ಅಧ್ಯಕ್ಷ ಪ್ರೊ.ದತ್ತಾತ್ರೇಯ ರಾವ್ ರಾಷ್ಟ್ರಗೀತೆಯನ್ನು ಹಾಡಿದರು.










