







ಪುತ್ತೂರು: ಕಬಕ ಶ್ರೀ ಅಡ್ಯಲಾಯ ಮತ್ತು ಪರಿವಾರ ದೈವಗಳ ಸನ್ನಿಧಿಯಲ್ಲಿ ಮುಂದಿನ ದಿನಗಳಲ್ಲಿ ನಡೆಯಲಿರುವ ಪುನರ್ಚೈತನ್ಯ ಕಲಶಾಭಿಷೇಕದ ವಿಜ್ಞಾಪನಾ ಪತ್ರವನ್ನು ತಿಂಗಳ ಸಂಕ್ರಮಣ ಪೂಜೆಯ ಬಳಿಕ ಬಿಡುಗಡೆ ಮಾಡಲಾಯಿತು.


ಈ ಸಂದರ್ಭದಲ್ಲಿ ಸೇವಾ ಸಮಿತಿಯ ಅಧ್ಯಕ್ಷರಾದ ಸತೀಶ್ ರೈ ಡಿಂಬ್ರಿಗುತ್ತು , ಉಪಾಧ್ಯಕ್ಷರಾದ ಗೋಪಾಲಕೃಷ್ಣ ರೈ, ಅರ್ಚಕರಾದ ವೇ। ಮೂ। ಶ್ರೀಧರ ಭಟ್, ರಾಮಚಂದ್ರ ಭಟ್, ಜತೆ ಕಾರ್ಯದರ್ಶಿ ರವೀಂದ್ರನಾಥ ಮೇಲಾಂಟ, ಬಾಬು ಗೌಡ ನೆಕ್ಕರೆ ಸದಸ್ಯರುಗಳಾದ ನಾಗೇಶ್ ಪಿ. , ಕೃಷ್ಣಪ್ಪ ಗೌಡ ಅಡ್ಯಾಲು, ಜಯರಾಮ ನೆಕ್ಕರೆ, ಪ್ರಸಾದ್ (ಜೆ.ಇ. ಮೆಸ್ಕಾಂ ಮಾಣಿ), ಧರ್ಣಪ್ಪ ಸೀಗೆತ್ತಡಿ , ಪ್ರಶಾಂತ್ ಮೂವಳ, ಈಶ್ವರ ಪುಳಿತ್ತಡಿ, ನಾರಾಯಣ ಕುಲಾಲ್, ಶ್ರೀನಿಧಿ ಸೀಗೆತ್ತಡಿ, ಜಯಲಕ್ಷ್ಮೀ, ಲತಾ ಪದ್ಮನಾಭ, ರಮ್ಯ ಹೊಸಳಿಕೆ ಮೊದಲಾದವರು ಉಪಸ್ಥಿತರಿದ್ದರು.













