ಕೖೊಲ ಬಡಗನ್ನೂರು ಶಾಲೆಯಲ್ಲಿ ಸಂಭ್ರಮದ ಸ್ವಾತಂತ್ರ ದಿನಾಚರಣೆ

0

ಬಡಗನ್ನೂರು :  ಕೖೊಲ ಬಡಗನ್ನೂರು ಸ.ಹಿ.ಪ್ರಾ. ಶಾಲೆಯಲ್ಲಿ  80 ನೇ ಸ್ವಾತಂತ್ರ ದಿನಾಚರಣೆಯನ್ನು ಸಂಭ್ರಮದಲ್ಲಿ ಅ. 15 ರಂದು  ಆಚರಿಸಲಾಯಿತು.

 ಸ್ವಾತಂತ್ರೋತ್ಸವ  ಧ್ವಜಾರೋಹಣವನ್ನು ಶಾಲಾ ಎಸ್. ಡಿ. ಎಂ.ಸಿ. ಅಧ್ಯಕ್ಷ   ವಸಂತ ಗೌಡ ಕೖೊಲ ನೆರವೇರಿಸಿ ಶುಭ ಕೋರಿದರು.ಹಿರಿಯ ವಿಧ್ಯಾರ್ಥಿ ಸಂಘದ ಅಧ್ಯಕ್ಷ ಪ್ರಕಾಶ್ ರೈ ಕೖೊಲ ಹಾಗೂ ನೆರೆದಿದ್ದ ಎಲ್ಲಾ ಗಣ್ಯರು ಗೌರವ ವಂದನೆ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಮಹಾತ್ಮ ಗಾಂಧಿ ಹಾಗೂ ಡಾ.ಬಿ.ಆರ್. ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ನಂತರ ವಿದ್ಯಾರ್ಥಿಗಳಿಂದ ಆಕರ್ಷಕ ಪದಕವಾಯತು ನಡೆಯಿತು. ಕೖೊಲ  ರಾಜಬೀದಿಯಲ್ಲಿ  ಘೋಷಣೆ ಕೂಗುತ್ತಾ ಮೆರವಣಿಗೆ ಸಾಗಿದರು.ನಂತರ ಲಘು ಉಪಹಾರ ಸ್ವೀಕರಿಸಲಾಯಿತು.

 ಸಭಾ ಕಾರ್ಯಕ್ರಮ:
ಪುತ್ತೂರು ತಾ. ಪಂ ಮಾಜಿ ಅಧ್ಯಕ್ಷೆ ರೇಖಾ ನಾಗರಾಜ್ ನಭಾ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ದೇಶದ  ಸ್ವತಂತ್ರ್ಯಕ್ಕಾಗಿ ಹೋರಾಡಿ ಬಲಿದಾನರಾದ ಮಹತ್ಮಾರನ್ನು ಸ್ಮರಿಸಿ ಇಂದಿನ ಮಕ್ಕಳು ಮುಂದಿನ ಪ್ರಜೆಗಳು  ವಿದ್ಯಾರ್ಥಿಗಳು ಉತ್ತಮ ವಿದ್ಯಾಭ್ಯಾಸ ಮಾಡಿ ಮುಂದೆ ದೇಶ ಸೇವೆಯಲ್ಲಿ ತೊಡಗುವಂತೆ ಕರೆ ನೀಡಿ ಶುಭ ಹಾರೖೆಸಿದರು ಬಳಿಕ ಮಕ್ಕಳಿಂದ ಸ್ವಾತಂತ್ರ್ಯದ ಬಗ್ಗೆ ಭಾಷಣ ನಡೆಯಿತು.   

ಬಡಗನ್ನೂರು ಗ್ರಾಮ ಪಂಚಾಯತ್ ನ ಅಭಿವೃದ್ಧಿ ಅಧಿಕಾರಿ ಗೀತಾ ಬಿ , ಮಾಜಿ ಉಪಾಧ್ಯಕ್ಷ ಸಂತೋಷ್ ಆಳ್ವ, ಎಸ್.ಡಿ.ಎಂ.ಸಿ ಮಾಜಿ ಅಧ್ಯಕ್ಷ ರಾಧಾಕೃಷ್ಣ ಪಾಟಾಳಿ ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೖೆಸಿದರು.

ವೇದಿಕೆಯಲ್ಲಿ  ಗ್ರಾ. ಪಂ ಮಜಿ ಉಪಾಧ್ಯಕ್ಷೆ ಸುಶೀಲಾ ವೆಂಕಪ್ಪ ಗೌಡ, ಮಾಜಿ ಸದಸ್ಯ ಕುಮಾರ್ ಅಂಬಟೆಮೂಲೆ,ಹಿರಿಯ ವಿಧ್ಯಾರ್ಥಿ ಸಂಘದ ಅಧ್ಯಕ್ಷ ಪ್ರಕಾಶ್ ರೈ ಕೖೊಲ,ಅಂಗನವಾಡಿ ಕಾರ್ಯಕರ್ತೆ ಹೇಮಾವತಿ ಪೇರಾಲು, ಶಾಲಾ ಎಸ್. ಡಿ. ಎಂ. ಸಿ ಸದಸ್ಯ ಸತೀಶ್. ಓ,ಉಪಸ್ಥಿತರಿದ್ದರು.ಕಾರ್ಯಕ್ರಮವು  ಶಾಲಾ ಎಸ್. ಡಿ. ಎಂ.ಸಿ.ಅಧ್ಯಕ್ಷ  ವಸಂತ ಗೌಡ ಅಧ್ಯಕ್ಷತೆಯಲ್ಲಿ ನಡೆಯಿತು. .

 ಕಾರ್ಯಕ್ರಮದಲ್ಲಿ ಮಾಜಿ ಎಸ್. ಡಿ. ಎಂ.ಸಿ ಅಧ್ಯಕ್ಷರುಗಳಾದ ರಮೇಶ್  ರೈ ಕೖೊಲ, ರಾಮಕೃಷ್ಣ ಭಟ್ ಚಂದುಕೂಡ್ಲು,ಸುಂದರ ನಾಯ್ಕ ತಲೆಂಜಿ, ಸುಬ್ಬಯ್ಯ ರೈ ಹಲಸಿನಡಿ,ಗ್ರಾಮ ಪಂಚಾಯತ್ ಸಿಬ್ಬಂದಿಗಳು, ಎಸ್.ಡಿ.ಎಂ.ಸಿ ಸದಸ್ಯರುಗಳು ಪೋಷಕರು,ಅಕ್ಷರ ದಾಸೋಹ ಸಿಬ್ಬಂದಿ ಗಳು ಹಿರಿಯ ವಿಧ್ಯಾರ್ಥಿ ಗಳು,ವಿದ್ಯಾಭಿಮಾನಿಗಳು ಭಾಗವಹಿಸಿದ್ದರು. 

ಶಾಲಾ ಪ್ರಭಾರ ಮುಖ್ಯ ಗುರು  ಗಿರೀಶ. ಡಿ ಸ್ವಾಗತಿಸಿದರು. ಪದವೀಧರ ಶಿಕ್ಷಕಿ  ಸೌಮ್ಯ ಬಿ. ಪ್ರಾಸ್ತಾವಿಕ ಮಾತನಾಡಿದರು.ಅತಿಥಿ ಶಿಕ್ಷಕಿ  ಸರಳಾ. ಡಿ ಕಾರ್ಯಕ್ರಮ ನಿರೂಪಿಸಿದರು. ಗೌರವ ಶಿಕ್ಷಕಿ ಪೂರ್ಣಿಮಾ ಸಹಕರಿಸಿದರು.

ಕಾರ್ಯಕ್ರಮದ ನಂತರ ಸಿಹಿಭೋಜನ ನಡೆಯಿತು. ಈ ಸಂದರ್ಭದಲ್ಲಿ ಪೋಷಕರು ತಾವು ಮನೆಯಿಂದ ತಯಾರಿಸಿ ತಂದ ವಿವಿಧ ಭಕ್ಷ್ಯ ಗಳನ್ನು ಬಡಿಸಲಾಯಿತು.ಎಲ್ಲರೂ ಬಾಳೆ ಎಲೆಯಲ್ಲಿ ಸಿಹಿ ಭೋಜನವನ್ನು ಸ್ವೀಕರಿಸಿದರು.ಗ್ರಾಮ ಪಂಚಾಯತ್ ಬಡಗನ್ನೂರು,ಸ್ತ್ರೀ ಶಕ್ತಿ ಸಂಘ ,ಪೋಷಕರು ಹಾಗೂ ದಾನಿಗಳಿಂದ ವಿವಿಧ ಬಗೆಯ ಸಿಹಿ ತಿಂಡಿ ವಿತರಿಸಲಾಯಿತು.ಭೋಜನದ ನಂತರ ಅಂಗನವಾಡಿ ಮಕ್ಕಳಿಂದ ಹಾಗೂ ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು,ದೇಶಭಕ್ತಿ ಗೀತ ಗಾಯನ ನಡೆಯಿತು.

ಬಹುಮಾನ ವಿತರಣೆ
80 ನೇ ಸ್ವಾತಂತ್ಯ್ರದಿನಾಚರಣೆಯ ಅಂಗವಾಗಿ  ವಿವಿಧ ಸ್ಪರ್ಧೆಗಳನ್ನು ಅಯೋಜಿಸಿದ್ದು  ವಿಜೇತರಿಗೆ  ಬಹುಮಾನ ವಿತರಣೆ ಮಾಡಲಾಯಿತು.

ಮುಂಭಡ್ತಿ ಹೊಂದಿ ವರ್ಗಾವಣೆ ಹೊಂದಿರುವ ಪುಷ್ಪಾವತಿ ಎಂ. ಬಿ ಇವರಿಗೆ  ಸಾರ್ವಜನಿಕ ಗೌರವ ಸನ್ಮಾನ 
ಕೖೊಲ ಬಡಗನ್ನೂರು  ಶಾಲೆಯಲ್ಲಿ ಸುಮಾರು 9 ವರುಷಗಳ ಕಾಲ ಪ್ರಭಾರ ಮುಖ್ಯ ಗುರುಗಳಾಗಿ ಸೇವೆ ಸಲ್ಲಿಸಿ ಮುಂಭಡ್ತಿ ಹೊಂದಿ ವರ್ಗಾವಣೆ ಹೊಂದಿರುವ  ಪುಷ್ಪಾವತಿ ಎಂ. ಬಿ ಇವರಿಗೆ  ಈ ಸಂಧರ್ಭದಲ್ಲಿ  ಅಧ್ಯಾಪಕ ವೃಂದ,ಅಕ್ಷರ ದಾಸೋಹ ಸಿಬ್ಬಂದಿ, ವಿಧ್ಯಾರ್ಥಿಗಳು,ಪೋಷಕರು,ಹಿರಿಯ ವಿಧ್ಯಾರ್ಥಿ ವೃಂದ,ಹಾಗೂ ವಿಧ್ಯಾಭಿಮಾನಿಗಳ ಶತಿಯಿಂದ ಪೇಟ ಶಾಲು ಹಾರ ಪಲಪುಷ್ಪ ಸ್ಮರಣಿಕೆ ನೀಡಿ ಸಾರ್ವಜನಿಕ ಗೌರವ ಸನ್ಮಾನ ನಡೆಯಿತು.ಬಳಿಕ ಶಾಲಾ ವಿಧ್ಯಾರ್ಥಿಗಳು,ಶಿಕ್ಷಕರು,ಪೋಷಕರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.ಸನ್ಮಾನ ಸ್ವೀಕರಿಸಿದ ಪುಷ್ಪಾವತಿ ಎಂ. ಬಿ   ಮಾತನಾಡಿ  ತಮ್ಮ ಸೇವಾವಧಿಯಲ್ಲಿ ಶ್ರಮಿಸಿದ ಎಲ್ಲರಿಗೂ  ಕೃತಜ್ಞತೆ ಸಲ್ಲಿಸಿದರು ಹಾಗೂ .ನೆನಪಿನ ಕಾಣಿಕೆಯಾಗಿ   2 ಗ್ರೀನ್ ಬೋರ್ಡ್ ಶಾಲೆಗೆ ಕೊಡುಗೆಯಾಗಿ ನೀಡಿದರು

ಗೌರವಾರ್ಪಣೆ
ಸ್ವಾತಂತ್ರ್ಯ ದಿನದ ಅನ್ನದಾನದ ಸೇವಾಕರ್ತೆ ಅಕ್ಷತಾ ಬಡಕ್ಕಾಯೂರು ಇವರನ್ನು ಸನ್ಮಾನಿಸಲಾಯಿತು  

LEAVE A REPLY

Please enter your comment!
Please enter your name here