







ನಿಡ್ಪಳ್ಳಿ; ಇಲ್ಲಿಯ ದೇವಸ್ಯ ಎಂಬಲ್ಲಿಂದ ಶಾಂತದುರ್ಗಾ ದೇವಸ್ಥಾನ ಮತ್ತು ಬಡಗನ್ನೂರು ಸಂಪರ್ಕಿಸುವ ರಸ್ತೆ ಮುಂಡೂರು ಎಂಬಲ್ಲಿ ಸುಮಾರು 500 ಮೀಟರ್ ಉದ್ದ ರಸ್ತೆ ತೀರಾ ಹದಗೆಟ್ಟಿದ್ದು ಸ್ಥಳೀಯ ಉತ್ಸಾಹಿ ಯುವಕರು ಸೇರಿ ಶ್ರಮದಾನದ ಮೂಲಕ ಆ.16 ರಂದು ದುರಸ್ತಿಗೊಳಿಸಿದರು.



ರಸ್ತೆಯಲ್ಲಿ ಇದ್ದ ಕೆಸರನ್ನು ಹೊರ ಹಾಕಿ ಪಂಚಾಯತ್ ಅನುದಾನದಲ್ಲಿ ತಂದು ಹಾಕಿದ ಮರಳನ್ನು ಹರಡುವ ಮೂಲಕ ಶ್ರಮದಾನ ಮಾಡಿದರು.ಈ ರಸ್ತೆ ಬದಿ ನೀರು ಹರಿಯಲು ಸರಿಯಾದ ಚರಂಡಿ ಇಲ್ಲದ ಕಾರಣ ನೀರು ರಸ್ತೆಯಲ್ಲಿ ಹರಿದು ಕೆಸರುಮಯವಾದ ಬಗ್ಗೆ ಕೆಲವು ದಿನಗಳ ಹಿಂದೆ ಸುದ್ದಿ ಪತ್ರಿಕೆಯಲ್ಲಿ ವರದಿ ಪ್ರಕಟವಾಗಿತ್ತು.



ವಿಜಿತ್ ಕುಮಾರ್ ದೇವಸ್ಯ, ವಿನೀತ್ ಕುಮಾರ್ ದೇವಸ್ಯ, ಬಾಲಕೃಷ್ಣ ನಾಯ್ಕ ದೇವಸ್ಯ, ದೀಕ್ಷಿತ್ ದೇವಸ್ಯ, ದಿಶಾಂತ್ ದೇವಸ್ಯ, ಚಿತ್ರ ಕುಮಾರ್ ಗಿರಿ, ಸುಭಾಷ್ ಕಾನ, ಸ್ವಸ್ತಿಕ್ ಭಟ್ ಮುಂಡೂರು, ವಿನೋದ್ ಕುಕ್ಕುಪುಣಿ, ಚಂದ್ರ ಮಣಿಯಾಣಿ ಕುಕ್ಕುಪುಣಿ ಇವರು ಸೇರಿ ಶ್ರಮದಾನದ ಮೂಲಕ ದುರಸ್ತಿ ಮಾಡಿದರು.










