ಕೊಣಾಲು: ಕೋಳಿ ಅಂಕಕ್ಕೆ ಪೊಲೀಸ್ ದಾಳಿ -7 ಹುಂಜ, ಇಬ್ಬರು ಆರೋಪಿಗಳು ವಶಕ್ಕೆ

0

ನೆಲ್ಯಾಡಿ: ಕಡಬ ತಾಲೂಕಿನ ಕೊಣಾಲು ಗ್ರಾಮದ ಪಾಂಡಿಬೆಟ್ಟು ಎಂಬಲ್ಲಿ ರಬ್ಬರ್ ತೋಟದ ತೆರೆದ ಸ್ಥಳದಲ್ಲಿ ಅಕ್ರಮವಾಗಿ ಕೋಳಿ ಅಂಕ ನಡೆಯುತ್ತಿದ್ದ ಸ್ಥಳಕ್ಕೆ ಆ.18ರಂದು ಮುಂಜಾನೆ 1 ಗಂಟೆ ವೇಳೆಗೆ ಉಪ್ಪಿನಂಗಡಿ ಪೊಲೀಸರು ದಾಳಿ ನಡೆಸಿ ಕೋಳಿ ಅಂಕದಲ್ಲಿ ನಿರತರಾಗಿದ್ದ ಇಬ್ಬರು ಆರೋಪಿಗಳನ್ನು ಹಾಗೂ ಸ್ಥಳದಲ್ಲಿದ್ದ 7 ಹುಂಜ ಮತ್ತು ಇತರೇ ಸೊತ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.


ರಾತ್ರಿ ರೌಂಡ್ಸ್ ಕರ್ತವ್ಯದಲ್ಲಿದ್ದ ಉಪ್ಪಿನಂಗಡಿ ಪೊಲೀಸ್ ಠಾಣೆ ಪಿಎಸ್‌ಐ ತನಿಖೆ-2 ಆದ ಕೌಶಿಕ್ ಬಿ.ಸಿ.ಹಾಗೂ ಸಿಬ್ಬಂದಿಗಳು ಖಚಿತ ಮಾಹಿತಿ ಮೇರೆಗೆ ಪಾಂಡಿಬೆಟ್ಟು ಸಮೀಪ ರಬ್ಬರ್ ತೋಟದಲ್ಲಿ ಟಾರ್ಚ್ ಲೈಟ್‌ಗಳ ಬೆಳಕಿನ ಸಹಾಯದಿಂದ ಕೋಳಿ ಅಂಕ ನಡೆಯುತ್ತಿದ್ದಲ್ಲಿಗೆ ದಾಳಿ ನಡೆಸಿದ್ದರು. ಈ ವೇಳೆ ಅಲ್ಲಿ ಗುಂಪು ಸೇರಿದ್ದ ಜನ ಓಡಲು ಪ್ರಯತ್ನಿಸಿದ್ದು, ಈ ಪೈಕಿ ಕೊಣಾಲು ನಿವಾಸಿಗಳಾದ ಸುರೇಶ ಮತ್ತು ಪ್ರವೀಣ ಎಂಬವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಘಟನಾ ಸ್ಥಳದಿಂದ ಅಂದಾಜು 5150 ರೂ.ಮೌಲ್ಯದ 7 ಹುಂಜ, ಜೂಜಾಟಕ್ಕೆ ಬಳಸಿದ 1700 ನಗದು ಹಾಗೂ 300 ರೂ.ಮೌಲ್ಯದ ಇತರೇ ಸೊತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here