






ಪುತ್ತೂರು : ಕಬಕ-ಪುತ್ತೂರ ರೈಲ್ವೇ ನಿಲ್ದಾಣದಲ್ಲಿ ಹಲವು ವರುಷಗಳ ಕಾಲ ಕ್ಯಾಂಟಿನ್ ನಡೆಸುತ್ತಿದ್ದ ದಿ. ಅಶೋಕನ್ ಅವರ ಪತ್ನಿ , ಇಲ್ಲಿನ ಚಿಕ್ಕಮುಡ್ನೂರು ಗ್ರಾಮದ ಕಂಚಲ ಗುರಿ ನಿವಾಸಿ ಮಾಧವಿ ಸಿ ವಿ (68.ವ) ಆ.18 ರಂದು ಅನಾರೋಗ್ಯದಿಂದ ಬೆಂಗಳೂರಿನಲ್ಲಿರುವ ಹಿರಿ ಮಗಳು ಅಶ್ವಿನಿಯವರ ಮನೆಯಲ್ಲಿ ನಿಧನರಾದರು.


ಮೃತರು ಪುತ್ರಿಯರಾದ ಬೆಂಗಳೂರಿನ ಐ.ಬಿ.ಎಂ ಕಂಪನಿಯಲ್ಲಿ ಸರ್ವೀಸ್ ಡೆಲಿವರಿ ಮ್ಯಾನೇಜರ್ ಆಗಿರುವ ಅಶ್ಚಿನಿ ಮತ್ತು ಬೆಂಗಳೂರಿನ ಡಿಲೆಕ್ಸ್ ಮೀಡಿಯಾದಲ್ಲಿ ಸೀನಿಯಾರ್ ಮ್ಯಾನೇಜರ್ ಆಗಿ ಸೇವೆ ಸಲ್ಲಿಸುತ್ತಿರುವ ಅನುಷಾ , ಅಳಿಯ ಉದ್ಯಮಿಯಾಗಿರುವ ರಾಜೇಶ್ ಹಾಗೂ ಮೊಮ್ಮಗಳು ಅನಿಹಾ ಅವರನ್ನು ಅಗಲಿದ್ದಾರೆ.













