







ಪುತ್ತೂರು: ಈಶ್ವರಮಂಗಲದ ಶ್ರೀ ಗಜಾನನ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಶ್ರೇಯಸ್ ಸಿ. ಭಂಡಾರಿ ಅವರ ವಿಜ್ಞಾನ ಮಾದರಿಯು ರಾಜ್ಯ ಮಟ್ಟದ ಇನ್‌ಸ್ಪೈರ್ MANAK ಪ್ರಶಸ್ತಿ ಸ್ಪರ್ಧೆಯಲ್ಲಿ ವಿಜೇತವಾಗಿದೆ.


ಅಕ್ಟೋಬರ್‌ನಲ್ಲಿ ನವದೆಹಲಿಯಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಶ್ರೇಯಸ್ ಅವರು ನಲಿಕೆಮಜಲು, ಪಡುವನ್ನೂರು ನಿವಾಸಿಗಳಾದ ಚಂದ್ರಶೇಖರ ಭಂಡಾರಿ ಹಾಗೂ ಹರ್ಷಮಣಿ ದಂಪತಿಗಳ ಪುತ್ರ.













