







ಪುತ್ತೂರು: ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ನ ಪೂರ್ಣ ಪ್ರಮಾಣದ ಪದಾಧಿಕಾರಿಗಳ ಆಯ್ಕೆಯು ಆ.18 ರಂದು ಪುತ್ತೂರು ನೆಲ್ಲಿಕಟ್ಟೆಯಲ್ಲಿರುವ ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ನ ಸಭಾಭವನದಲ್ಲಿ ನಡೆಯಿತು.


ಟ್ರಸ್ಟ್ನ ಅಧ್ಯಕ್ಷ ವಿಶ್ವನಾಥ ಗೌಡ ಬನ್ನೂರು ಅವರ ಅಧ್ಯಕ್ಷತೆಯಲ್ಲಿ ನಡೆದ ಮಾಸಿಕ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಸುಂದರ ಗೌಡ ನಡುಬೈಲು ಅವರ ಉಪಸ್ಥಿತಿಯಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆಯಿತು. ಅಧ್ಯಕ್ಷರಾಗಿ ವಿಶ್ವನಾಥ ಗೌಡ ಬನ್ನೂರು, ಉಪಾಧ್ಯಕ್ಷರಾಗಿ ದಿವ್ಯೇಶ್ ಕಲ್ಯ, ಕಾರ್ಯದರ್ಶಿಯಾಗಿ ನಾರಾಯಣ ಗೌಡ ಕುಕ್ಕುತ್ತಡಿ, ಉಪ ಕಾರ್ಯದರ್ಶಿಯಾಗಿ ಕುದ್ವ ಲೋಕನಾಥ ಗೌಡ ಮತ್ತು ಕೋಶಾಧಿಕಾರಿಯಾಗಿ ಚೆನ್ನಪ್ಪ ಗೌಡ ಕುದುಮಾನ್ ಆಯ್ಕೆಯಾಗಿದ್ದಾರೆ.













