







ಉಪ್ಪಿನಂಗಡಿ: ಕೆಮ್ಮಾರ ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ವಿಜ್ರಂಭಣೆಯಿಂದ ಆಚರಿಸಲಾಯಿತು.


ಎಸ್‌ಡಿಎಂಸಿ ಉಪಾಧ್ಯಕ್ಷೆಯಾದ ಶ್ರೀಮತಿ ಅಸ್ಮಾ ರವರು ಧ್ವಜಾರೋಹಣ ನೆರವೇರಿಸಿ ಮಾತನಾಡಿ ಮಕ್ಕಳಲ್ಲಿ ದೇಶಭಕ್ತಿ ಹಾಗೂ ಶಿಸ್ತಿನ ಮಹತ್ವವನ್ನು ತಿಳಿಸಿದರು ಮತ್ತು ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಶಾಲೆಯ ಮುಖ್ಯಗುರುಗಳಾದ ಶ್ರೀಮತಿ ಪುಷ್ಪಾ ಕೆ ರವರು ಸ್ವಾಗತಿಸಿ, ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾತ್ಮರ ತ್ಯಾಗ ಮತ್ತು ಮಹತ್ವವನ್ನು ಸ್ಮರಿಸಲಾಯಿತು.



ವೇದಿಕೆಯಲ್ಲಿ ಹಿರಿಯ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷರಾದ ಶ್ರೀಯುತ ಮಹಮ್ಮದ್ ಶರೀಫ್ ಮಜಲ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಬೆಟ್ಟಂಪಾಡಿ ವಿಭಾಗದ ಮೇಲ್ವಿಚಾರಕಿಯಾದ ಶ್ರೀಮತಿ ನಂದನಾ ಪಿ.ಶೆಟ್ಟಿ, ಗ್ರಾಮ ಪಂಚಾಯಿತಿನ ಮಾಜಿ ಸದಸ್ಯೆ ಶ್ರೀಮತಿ ವಾರಿಜಾಕ್ಷಿ, ಎಸ್‌ಡಿಎಂಸಿ ಸದಸ್ಯರಾದ ಪದ್ಮನಾಭ ಶೆಟ್ಟಿ ಬಡಿಲ, ವಾಮನ ಬರಮೇಲು, ಯುನೈಟೆಡ್ ಎಫ್‌ಸಿ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷರಾದ ಶ್ರೀಯುತ ರಿಯಾಝ್ ಮುಂತಾದವರು ಸಂದರ್ಭೋಚಿತವಾಗಿ ಮಾತನಾಡಿದರು.
ಶಾಲಾ ಮಕ್ಕಳಿಂದ ಪಥಸಂಚಲನ ಮತ್ತು ದೇಶಭಕ್ತಿಯನ್ನು ಸಾರುವ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಸಲಾಯಿತು. ಜಿ ಪಿ ಟಿ ಶಿಕ್ಷಕಿ ಶ್ರೀಮತಿ ಸಂಧ್ಯಾ ವೇದಿಕೆ ಕಾರ್ಯಕ್ರಮವನ್ನು ನಿರೂಪಿಸಿದರು. ಸಾಂಸ್ಕೃತಿಕ ಕಾರ್ಯಕ್ರಮವನ್ನು ಶ್ರೀಮತಿ ಮೆಹನಾಝ್ ರವರು ನಿರೂಪಿಸಿದರು. ಟಿ ಜಿ ಟಿ ಶಿಕ್ಷಕಿ ಶ್ರೀಮತಿ ಸುಮನಾ ಕೆ ಎಸ್ ವಂದಿಸಿದರು. ಶ್ರೀಮತಿ ಲೀನಾ ಲಸ್ರಾದೋ, ಶ್ರೀಮತಿ ದಿವ್ಯ ಶೆಟ್ಟಿ, ಶ್ರೀಮತಿ ಉಷಾ ಕೆ ಸಹಕರಿಸಿದರು.
‘ಹೆಲ್ಪ್ ಗೈಸ್’ ಕೆಮ್ಮಾರ ಬಳಗದ ವತಿಯಿಂದ ಮಕ್ಕಳಿಗೆ ಸಿಹಿ ಪಾನೀಯದ ವ್ಯವಸ್ಥೆ, ಕೆಮ್ಮಾರ ಅಂಗನವಾಡಿ ಶಿಕ್ಷಕಿ ಶ್ರೀಮತಿ ಸುಂದರಿ ಅವರಿಂದ ಮಕ್ಕಳಿಗೆ ಸಿಹಿ ಹಂಚಿದರೆ, ಗ್ರಾಮ ಪಂಚಾಯತ್ ವತಿಯಿಂದ ಲಡ್ಡು ವಿತರಿಸಲಾಯಿತು.
ಎಸ್‌ಡಿಎಂಸಿ ವತಿಯಿಂದ ಮಧ್ಯಾಹ್ನದ ರುಚಿಕರವಾದ ಪಾಯಸ, ಊಟದ ವ್ಯವಸ್ಥೆ ಮಾಡಲಾಗಿತ್ತು. ಎಸ್‌ಎಸ್ಎಫ್ ಕೆಮ್ಮಾರ ಯುನಿಟ್ ವತಿಯಿಂದ ಶಾಲೆಯ ಪ್ರತೀ ಮಕ್ಕಳಿಗೆ ಲೇಖನಿ ವಿತರಿಸಲಾಯಿತು. ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸಿದ ಎಲ್ಲಾ ಮಕ್ಕಳಿಗೂ ಹಿರಿಯ ವಿದ್ಯಾರ್ಥಿ ಸಂಘದ ವತಿಯಿಂದ ಬಹುಮಾನಗಳನ್ನು ನೀಡಿ ಪ್ರೋತ್ಸಾಹಿಸಲಾಯಿತು. ಇದೇ ಸಂದರ್ಭದಲ್ಲಿ ಶಾಲೆಯ ಸಮಗ್ರ ಅಭಿವೃದ್ಧಿಗಾಗಿ ಆಯೋಜಿಸಲಾಗಿದ್ದ ಲಕ್ಕಿ ಕೂಪನ್ ಯೋಜನೆಯ ಲಕ್ಕಿ ‘ಡ್ರಾ’ವನ್ನು ನೆರವೇರಿಸಲಾಯಿತು.
ಪ್ರಥಮ: 762, ದ್ವಿತಿಯಾ: 665, ತೃತೀಯ: 710 ಸಂಖ್ಯೆಗಳ ವ್ಯಕ್ತಿಗಳು ವಿಜೇತರಾದರು.
ಕಾರ್ಯಕ್ರಮದಲ್ಲಿ ಹಿರಿಯ ವಿದ್ಯಾರ್ಥಿ ಸಂಘದ ಗೌರವ ಸಲಹೆಗಾರರಾದ ಗೋಪಾಲ ನೇಕಾರ, ಹಿರಿಯ ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷರಾದ ಶ್ರೀಯುತ ಮೋಹನ್ ದಾಸ್ ಶೆಟ್ಟಿ ಬಡಿಲ, ಎಸ್‌ಡಿಎಂಸಿ ಮಾಜಿ ಅಧ್ಯಕ್ಷರುಗಳಾದ ಶ್ರೀಯುತ ಹಂಝ, ಶ್ರೀಮತಿ ಸೆಲಿಕತ್, ಎಂಜೆಎಂ ಉಪಾಧ್ಯಕ್ಷರಾದ ನವಾಝ್ ಕೆಮ್ಮಾರ, ಹಿರಿಯ ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ಜುನೈದ್ ಕೆಮ್ಮಾರ, ಹಿರಿಯ ವಿದ್ಯಾರ್ಥಿ ಸಂಘದ ಸಂಘಟನಾ ಕಾರ್ಯದರ್ಶಿ ಶೌಕತ್ ಜೇಡರಪೇಟೆ, ಎಸ್‌ಕೆಡಿಆರ್ಡಿಪಿ ಕೆಮ್ಮಾರ ಒಕ್ಕೂಟದ ಅಧ್ಯಕ್ಷರಾದ ಶ್ರೀಯುತ ರವಿಕಾಂತ್ ಬಡ್ಡಮೆ, ಹೇಮಾ ಮೋಹನ್ ದಾಸ್, ಶ್ರೀಮತಿ ಸುಮಯ್ಯ, ಶ್ರೀಮತಿ ತೇಜಾ ಸೇರಿದಂತೆ ಪೋಷಕರು, ಹಿರಿಯ ವಿದ್ಯಾರ್ಥಿಗಳು, ಶಿಕ್ಷಕ ವೃಂದದವರು, ಅಕ್ಷರದಾಸೋಹ ಸಿಬ್ಬಂದಿಗಳು ಸೇರಿದಂತೆ ಹಲವರು ಭಾಗವಹಿಸಿದ್ದರು.










