







ಪುತ್ತೂರು : ಗೋಳಿತಟ್ಟು ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಆ.15ರಂದು ಆಚರಿಸಲಾಯಿತು. ಶಾಲಾಭಿವೃದ್ಧಿ ಸಮಿತಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಪುರುಷೋತ್ತಮ ಕುದ್ಕೋಳಿ ಧ್ವಜಾರೋಹಣ ನೆರವೇರಿಸಿದರು.



ನಂತರ ಶಾಲಾ ವಿದ್ಯಾರ್ಥಿಗಳು, ಪೋಷಕರು ಹಾಗೂ ವಿದ್ಯಾಭಿಮಾನಿಗಳು ಸೇರಿ ಮೆರವಣಿಗೆ ಮಾಡಲಾಯಿತು. ಬಳಿಕ ಸಭಾ ಕಾರ್ಯಕ್ರಮದಲ್ಲಿ
ಮುಖ್ಯ ಅತಿಥಿಯಾಗಿ ಶ್ರೀ ಕೇಶವ ಪೂಜಾರಿ ಕಿನ್ಯಡ್ಕ ಸಂದರ್ಭೋಚಿತವಾಗಿ ಮಾತನಾಡಿ ದೇಶಭಕ್ತಿ ಗೀತೆಗಳನ್ನು ಹಾಡಿದರು. ಹಾಗೂ ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ಶ್ರೀ ವಿನಯ ಕುಮಾರ್ ಸ್ವಾತಂತ್ರ್ಯದ ಕುರಿತಾಗಿ ಮಾತನಾಡಿದರು.



ವೇದಿಕೆಯಲ್ಲಿ ಶ್ರೀ ಬಾಬು ಪೂಜಾರಿ ಕಿನ್ಯಡ್ಕ, ಸುಂದರ ಶೆಟ್ಟಿ ಪುರ,ನೋಣಯ್ಯ ಗೌಡ ಅನಿಲ, ಹಾಜಿ ಉಸ್ಮಾನ್ ಗೋಳಿತೊಟ್ಟು ಶೇಖರ ಗೌಡ ಅನಿಲ ಭಾಗ್, ಪೂರ್ವ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶ್ರೀ ಅಬ್ದುಲ್ ಆರೀಫ್,ಕೊರಗಪ್ಪ ಗೌಡ ಕಲ್ಲಡ್ಕ, ಗೋಪಾಲ ಗೌಡ ಕುದ್ಕೋಳಿ, ನಾಸಿರ್ ಸಮರಗುಂಡಿ, ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅತಿಥಿ ಶಿಕ್ಷಕಿ ಶೀಬಾ ಧನ್ಯವಾದ ಸಮರ್ಪಿಸಿದರು.

ಬಾಲಚಂದ್ರ ರೈ ಕಾರ್ಯಕ್ರಮ ನಿರೂಪಿಸಿದರು. ಶಾಲಾ ಶಿಕ್ಷಕ ವೃಂದ ಸಹಕಾರ ನೀಡಿದರು.










