







ಅಧ್ಯಕ್ಷರಾಗಿ ಹರೀಶ್ ಕುಮಾರ್, ಪ್ರಧಾನ ಕಾರ್ಯದರ್ಶಿಯಾಗಿ ನವೀನ್ ಕುಮಾರ್


ಉಪ್ಪಿನಂಗಡಿ: ಕರಾಯ ತ್ರಿವರ್ಣ ಸಂಗಮ ಆಟೋ ಚಾಲಕ ಸಂಘದ 2026-29ರ ಸಾಲಿನ ನೂತನ ಅಧ್ಯಕ್ಷರಾಗಿ ಹರೀಶ್ ಕುಮಾರ್, ಪ್ರಧಾನ ಕಾರ್ಯದರ್ಶಿಯಾಗಿ ನವೀನ್ ಕುಮಾರ್ ಆಯ್ಕೆಯಾಗಿದ್ದಾರೆ. ಉಳಿದಂತೆ ಪದಾಧಿಕಾರಿಗಳನ್ನು ಈ ಕೆಳಗಿನಂತೆ ಆಯ್ಕೆ ಮಾಡಲಾಯಿತು.



ಕೆ.ಎಸ್. ಅಬ್ದುಲ್ಲಾ (ಗೌರವಾಧ್ಯಕ್ಷ), ಕೆ. ಇಲ್ಯಾಸ್ ಕರಾಯ (ಗೌರವ ಸಂಘಟನಾ ಕಾರ‍್ಯದರ್ಶಿ), ಪ್ರಶಾಂತ್ ಕುಮಾರ್ (ಕಾನೂನು ಸಲಹೆಗಾರ), ರಫೀಕ್ ಕರಾಯ (ಉಪಾಧ್ಯಕ್ಷ), ಟೋನಿ ಲೋಬೋ (ಜೊತೆ ಕಾರ್ಯದರ್ಶಿ), ಸಿದ್ದಿಕ್ ಪೂಂಜಾಲ (ಕೋಶಾಧಿಕಾರಿ), ರೂಪೇಶ್ ಕುಮಾರ್ (ಪತ್ರಿಕಾ ಕಾರ್ಯದರ್ಶಿ). ಸಿದ್ದಿಕ್ ಸಫರ್, ಬೂದಪ್ಪ ಪೂಜಾರಿ, ಅಶ್ರಫ್, ನಝೀರ್, ಸಂತೋಷ್ ಕುಮಾರ್, ಜಾಕಿ (ಕಾರ್ಯಕಾರಿ ಸಮಿತಿ ಸದಸ್ಯರು).










