ವಾಣಿಯನ್/ಗಾಣಿಗ ಸಮುದಾಯ ಸಂಘದ ಆಟಿಕೂಟ, ಕುಟುಂಬ ಸಮಾಗಮ

0

ಪುತ್ತೂರು: ವಾಣಿಯನ್/ಗಾಣಿಗ ಸಮುದಾಯ ಸೇವಾ ಸಂಘ ಪುತ್ತೂರು ಇದರ ವತಿಯಿಂದ ಈ ವರ್ಷದ ಆಟಿಕೂಟ ಹಾಗೂ ವಾಣಿಯ ಕುಟುಂಬ ಸಮಾಗಮ ಕಾರ್ಯಕ್ರಮವು ಪುತ್ತೂರಿನ ಜೇಸಿ ಮುಳಿಯ ಸಭಾಂಗಣದಲ್ಲಿ ನಡೆಯಿತು.


ಮುಖ್ಯ ಅತಿಥಿಯಾಗಿದ್ದ ಹಿರಿಯ ಪ್ರಾಥಮಿಕ ಶಾಲೆ ಕಾವು ಸ.ಹಿ.ಪ್ರಾ ಶಾಲೆಯ ಸಹಶಿಕ್ಷಕಿ ಪ್ರತಿಮಾ ಆಟಿ ತಿಂಗಳ ಮಹತ್ವ, ಈ ತಿಂಗಳಲ್ಲಿ ಆಚರಿಸುವ ವಿವಿಧ ಆಚರಣೆಗಳು, ಆಹಾರ ಪದ್ಧತಿಗಳ ಬಗ್ಗೆ ಉಪನ್ಯಾಸ ನೀಡಿದರು.


ಗುತ್ತಿಗಾರು ರಬ್ಬರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣಾ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮಿ ಕೃಷ್ಣ ಪಾಟಾಳಿ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು.
ಸಂಘದ ಅಧ್ಯಕ್ಷ ವಿನಯ್ ಕುಮಾರ್ ಕಡಮಜಲು ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ಗಾಣಿಗ ಸಮುದಾಯ ಸೇವಾ ಸಂಘದ ಅಧ್ಯಕ್ಷ ಕೃಷ್ಣ ಡಿ.ಎಸ್, ಸುಳ್ಯ ಪಾಟಾಳಿ ಯಾನೆ ಗಾಣಿಗ ಸಮಾಜ ಸೇವಾ ಸಂಘದ ಅಧ್ಯಕ್ಷ ಸುರೇಶ್ ಕರ್ಲಪ್ಪಾಡಿ, ಈಶ್ವರಮಂಗಲ ಗಾಣಿಗ ಸಮುದಾಯ ಸೇವಾನಿರತ ಸಂಘದ ಅಧ್ಯಕ್ಷ ಚಂದ್ರಶೇಖರ ಪೆರ್ನಾಜೆ ಹಾಗೂ ವಿಟ್ಲ ವಾಣಿಯನ್/ಗಾಣಿಗ ಸಮಾಜ ಸೇವಾ ಸಂಘದ ಅಧ್ಯಕ್ಷ ಹರೀಶ್ ರಾಜ್ ಕುರಿಯತಡ್ಕ ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು.


ಕಾರ್ಯಕ್ರಮದಲ್ಲಿ ಸಮುದಾಯ ಬಾಂಧವರಿಗಾಗಿ ವಿವಿಧ ಮನೋರಂಜನಾ ಸ್ಪರ್ಧೆಗಳನ್ನು ನಡೆಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಮಧ್ಯಾಹ್ನ ಸಮುದಾಯ ಬಾಂಧವರು ತಮ್ಮ ಮನೆಯಲ್ಲಿ ತಯಾರಿಸಿಕೊಂಡು ಬಂದಿದ್ದ ಸುಮಾರು ೩೫ ಬಗೆಯ ಖಾದ್ಯಗಳೊಂದಿಗೆ ಸಹಭೋಜನ ನೆರವೇರಿತು. ಸಂಘದ ಪೂರ್ವಾಧ್ಯಕ್ಷರುಗಳು, ಪದಾಧಿಕಾರಿಗಳು ಹಾಗೂ ಸಮುದಾಯ ಬಾಂಧವರು ಕುಟುಂಬ ಸಮೇತರಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮಹೇಶ್ ಆಲಂಕಾರು ಸ್ವಾಗತಿಸಿ, ಸ್ವಾತಿ ಗುರುರಾಜ್ ವಂದಿಸಿದರು. ಐಶಾನಿ ಪ್ರಾರ್ಥಿಸಿದರು. ದಾಮೋದರ ಪಾಟಾಳಿ, ಸೌಮ್ಯ ವಿನಯ್ ಹಾಗೂ ಗುರುರಾಜ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here