







ಬೆಟ್ಟಂಪಾಡಿ: ಬೆಟ್ಟಂಪಾಡಿ ಮೆಸ್ಕಾಂನ ಪವರ್‌ಮ್ಯಾನ್‌ಗಳು ಕಡಿದು ಬಿದ್ದ ತಂತಿಯನ್ನು ಮರುಜೋಡಿಸಲು ರಭಸವಾಗಿ ಹರಿಯುತ್ತಿದ್ದ ಹೊಳೆಯಲ್ಲಿ ಈಜಿ ಸಾಹಸ ಮೆರೆದ ವಿಡಿಯೋ ವೈರಲ್ ಪಡೆದಿದೆ.



ದೂಮಡ್ಕ ಎಂಬಲ್ಲಿ ಸೀರೆ ಹೊಳೆಗೆ ಅಡ್ಡವಾಗಿ ಕಡಿದು ಬಿದ್ದ ವಿದ್ಯುತ್ ತಂತಿಗಳನ್ನು ಮರುಜೋಡಿಸಲು ಆ.18 ರಂದು ಮೆಸ್ಕಾಂ ಪವರ್‌ಮ್ಯಾನ್‌ಗಳಾದ ಬಂದೇನವಾಜ್, ಪ್ರವೀಣ್ ಹಾಗೂ ಬಸವರಾಜ್ ಸ್ಥಳಕ್ಕೆ ಭೇಟಿ ನೀಡಿ ದುರಸ್ತಿ ಕಾರ್ಯ ಕೈಗೊಂಡಿದ್ದರು. ಹೊಳೆಯ ಒಂದು ಬದಿಯಿಂದ ಇನ್ನೊಂದು ಬದಿಗೆ ವಿದ್ಯುತ್ ತಂತಿಗಳನ್ನು ರವಾನಿಸಲು ರಭಸವಾಗಿ ಹರಿಯುತ್ತಿದ್ದ ಸೀರೆ ಹೊಳೆ ತೊಡಕಾಗಿತ್ತು. ಈ ವೇಳೆ ಸಾಹಸ ಮೆರೆದ ಪವರ್‌ಮ್ಯಾನ್‌ಗಳು ತಮ್ಮ ಪ್ರಾಣದ ಹಂಗು ತೊರೆದು ಹೊಳೆಯಲ್ಲಿ ಈಜಿ ತಂತಿ ಮರುಜೋಡಣೆ ಮಾಡಿದ್ದಾರೆ. ಪವರ್‌ಮ್ಯಾನ್ ಬಂದೇನವಾಜ್ ಸೊಂಟಕ್ಕೆ ಹಗ್ಗ ಕಟ್ಟಿ ಮುಂಜಾಗ್ರತಾ ಕ್ರಮ ಕೈಗೊಂಡು ನದಿಗೆ ಹಾರಿದ್ದಾರೆ. ರಭಸವಾಗಿ ಹರಿಯುತ್ತಿದ್ದ ಹೊಳೆಯಲ್ಲಿ ವಿರುದ್ದ ದಿಕ್ಕಿನಲ್ಲಿ ಈಜಿ ಇನ್ನೊಂದು ಬದಿಗೆ ತಂತಿಯನ್ನು ತಲುಪಿಸಿದ್ದಾರೆ. ಪ್ರವೀಣ್ ಹಾಗೂ ಬಸವರಾಜ್ ರವರೂ ಸಾಥ್ ನೀಡಿದ್ದಾರೆ. ಇವರ ಜೊತೆಗೆ ಸ್ಥಳೀಯರು ಸಹಕರಿಸಿದ್ದಾರೆ. ಈ ಮೂಲಕ , ಮೆಸ್ಕಾಂ ಗೆ ತಗಲುತ್ತಿದ್ದ ಸಾಕಷ್ಟು ಖರ್ಚನ್ನು ಪವರ್‌ಮ್ಯಾನ್‌ಗಳು ಉಳಿಸಿದ್ದಾರೆ. ಆ.19 ರಂದು ಪವರ್‌ಮ್ಯಾನ್‌ಗಳ ಈ ಸಾಹಸಮಯ ವಿಡಿಯೋ ವೈರಲ್ ಆಗಿದೆ. ಸುದ್ದಿ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಇದು 50 ಸಾವಿರಕ್ಕೂ ಅಧಿಕ ವೀಕ್ಷಣೆಯನ್ನು ಪಡೆದಿದ್ದು, ನೂರಾರು ಮೆಚ್ಚುಗೆಯ ಕಮೆಂಟ್‌ಗಳು ಬಂದಿವೆ. ಪವರ್‌ಮ್ಯಾನ್‌ಗಳನ್ನು ರಿಯಲ್ ಹೀರೋ ಎಂದು ಕರೆದಿರುವ ನೆಟ್ಟಿಗರು ಅವರನ್ನು ಸಮಾಜ ವಿಡಿಯೋ ಲೈಕ್‌ನಿಂದ ಗುರುತಿಸುವುದರ ಜೊತೆಗೆ ಸಮಾಜದಲ್ಲಿ ಗೌರವ ಸಲ್ಲಿಸುವ ಕಾರ್ಯ ನಡೆಯಬೇಕು ಎಂದಿದ್ದಾರೆ.



ವಿಡಿಯೋ ವೀಕ್ಷಿಸಲು ಈ ಕೆಳಗಿ ಲಿಂಕ್ ಕ್ಲಿಕ್ ಮಾಡಿ
https://www.instagram.com/reel/DcN-0SMMy0p/?utm_source=ig_web_copy_link&igsh=MzRlODBiNWFlZA==










