ಪೆರಾಬೆ-ಕುಂತೂರು: ವೈಭವದ ಬಿರುವೆರ್ನ ಆಟಿದ ಗಮ್ಮತ್ ಕಾರ್ಯಕ್ರಮ, ಸಾಧಕರಿಗೆ ಸನ್ಮಾನ

0

ಪುತ್ತೂರು : ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಗ್ರಾಮ ಸಮಿತಿ ಪೆರಾಬೆ-ಕುಂತೂರು ಹಾಗೂ ಬಿಲ್ಲವ ಮಹಿಳಾ ವೇದಿಕೆ ಪೆರಾಬೆ-ಕುಂತೂರು ಇವುಗಳ ಜಂಟಿ ಆಶ್ರಯದಲ್ಲಿ “ಬಿರುವೆರ್ನ ಆಟಿದ ಗಮ್ಮತ್” ಕಾರ್ಯಕ್ರಮವು ಆಲಂಕಾರಿನ ದೀನದಯಾಳ್ ಸಭಾಭವನದಲ್ಲಿ ವಿಜೃಂಭಣೆಯಿಂದ ನಡೆಯಿತು.

ಯಶವಂತ್ ಅಗತ್ತಾಡಿ ಅವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆ ನೀಡಿದರು. ಬಳಿಕ ಮಕ್ಕಳು, ಮಹಿಳೆಯರು ಹಾಗೂ ಪುರುಷರಿಗೆ ವಿವಿಧ ಆಟೋಟ ಸ್ಪರ್ಧೆಗಳು ಜರುಗಿದವು. ಫ್ಯೂಶನ್ ಇನ್ಸ್ಟಿಟ್ಯೂಟ್ ಆಫ್ ಡಾನ್ಸ್ ಸುಳ್ಯ ಕಡಬ ಶಾಖೆಯ ಪ್ರತಿಭೆಗಳಿಂದ ಮೂಡಿಬಂದ ನೃತ್ಯ ವೈಭವ ಸಭಿಕರ ಮನಸೆಳೆಯಿತು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಲ್ಲವ ಗ್ರಾಮ ಸಮಿತಿಯ ಅಧ್ಯಕ್ಷ ಉದಯಕುಮಾರ್ ಎಣ್ಣೆತ್ತೋಡಿ ವಹಿಸಿದ್ದರು. ಪುತ್ತೂರು ತಾಲೂಕು ಬಿಲ್ಲವ ಸಂಘದ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ ಸಭಾ ಕಾರ್ಯಕ್ರಮ ಉದ್ಘಾಟಿಸಿದರು. ಶೈಲೇಶ್ ಬಿರ್ವಾ ಅಗತ್ತಾಡಿದೊಳಬಾರಿಕೆ ಆಟಿ ತಿಂಗಳ ಸಂಪ್ರದಾಯ ಮತ್ತು ಮಹತ್ವದ ಕುರಿತು ಸವಿಸ್ತಾರವಾಗಿ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಹಿರಿಯ ಸಾಧಕರಾದ ಅಣ್ಣಿ ಪೂಜಾರಿ ಪೆರಾಬೆ, ಬಾಳಪ್ಪ ಪೂಜಾರಿ ಮಾಯಿಲ್ಗಾ, ಬಾಲಕೃಷ್ಣ ಪೂಜಾರಿ ಸಾರಕೆರೆ, ಕಲ್ಯಾಣಿ ಮಾಯಿಲ್ಗಾ ಹಾಗೂ ಸಂಘದ ಮಾಜಿ ಅಧ್ಯಕ್ಷ ಹರ್ಷಿತ್ ಮಾಯಿಲ್ಗಾ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು. ಅಲ್ಲದೆ, ಸಾಧಕರಾದ ಮಂಜುನಾಥ ಪೂಜಾರಿ, ಸತೀಶ್ ಕೆ. ಐತೂರು, ಪುಷ್ಪಾವತಿ ಕೇಕುಡೆ, ಆರ್ಯಭಟ ಪ್ರಶಸ್ತಿ ವಿಜೇತ ದಯಾನಂದ ಅಗತ್ತಾಡಿ, ಪುತ್ತೂರು ತಾಲೂಕು ವಕೀಲರ ಸಂಘದ ಅಧ್ಯಕ್ಷ ಸಂತೋಷ್ ಮತ್ರಾಡಿ ಮತ್ತು ಯುವ ವಾಹಿನಿ ಮಾಜಿ ಅಧ್ಯಕ್ಷ ಪ್ರಶಾಂತ್ N.S. ಅವರನ್ನು ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.


ಆಟಿ ತಿಂಗಳ ಸಾಂಪ್ರದಾಯಿಕ ಕೃಷಿ ಪರಿಕರಗಳು ಹಾಗೂ ಗೃಹ ಬಳಕೆಯ ಸಾಧನಗಳ ವಸ್ತು ಪ್ರದರ್ಶನ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು. ಮಹಿಳೆಯರು ತಮ್ಮ ಮನೆಗಳಿಂದಲೇ ತಯಾರಿಸಿ ತಂದಿದ್ದ ವಿವಿಧ ಬಗೆಯ ಆಟಿಯ ತಿನಿಸುಗಳನ್ನು ಬಂದಂತಹ ಅಭ್ಯಾಗತರಿಗೆ ವಿತರಿಸಲಾಯಿತು.


ಕಾರ್ಯಕ್ರಮದಲ್ಲಿ ಕರ್ನಾಟಕ ಸರ್ಕಾರದ ಬ್ರಹ್ಮಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಂಜುನಾಥ ಪೂಜಾರಿ, ಮೂರ್ತೇದಾರರ ಸೇವಾ ಸಹಕಾರಿ ಸಂಘ ಅಲಂಕಾರು ಅಧ್ಯಕ್ಷ ಮುತ್ತಪ್ಪ ಪೂಜಾರಿ ನೈಯ್ಯಲ್ಗ, ಕಡಬ ತಾಲೂಕು ಬಿಲ್ಲವ ಸಂಘದ ಅಧ್ಯಕ್ಷ ಸತೀಶ್ ಕೆ. ಐತೂರ್, ಪುತ್ತೂರು ಮಹಿಳಾ ಬಿಲ್ಲವ ಸಂಘದ ಅಧ್ಯಕ್ಷೆ ಪುಷ್ಪಾವತಿ ಕೇಕುಡೆ, ಕಡಬ ಯುವ ವಾಹಿನಿ ಅಧ್ಯಕ್ಷ ಉಮೇಶ್ ಬಳ್ಪ, ಪೆರಾಬೆ-ಕುಂತೂರು ಮಹಿಳಾ ಬಿಲ್ಲವ ಸಂಘದ ಅಧ್ಯಕ್ಷೆ ಉಷಾ ರವಿ ಮಾಯಿಲ್ಗಾ ಹಾಗೂ ಗೌರವಾಧ್ಯಕ್ಷ ಹರ್ಷಿತ್ ಮಾಯಿಲ್ಗಾ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ರೂಪ ವಿನಯ ಹಾಗೂ ಪೃಥ್ವಿ ಕೆದಿಲ ಪ್ರಾರ್ಥಿಸಿದರು. ಅಮಿತಾ ನವೀನ್ ಪ್ರಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಸುದೀಪ್ ಸುವರ್ಣ ಮಾಯಿಲ್ಗ ವಂದಿಸಿದರು. ಸರಿತಾ ಜನಾರ್ಧನ್, ಕೃಷ್ಣಪ್ಪ ಅಮೈ ಹಾಗೂ ಅನಿಲ್ ಊರ್ ಸಾಗು ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here